Close Menu
Ain Live News
    Facebook X (Twitter) Instagram YouTube
    Monday, June 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    KSRTC, BMTC ಟಿಕೆಟ್ ದರ: ನಿಮ್ಮ ಊರಿಗೆ ಎಷ್ಟು!? ಇಲ್ಲಿ ತಿಳಿಯಿರಿ ಜನರೇ!

    By AIN AuthorJanuary 3, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- KSRTC, BMTC ಟಿಕೆಟ್ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಹೊಸವರ್ಷಕ್ಕೆ ರಾಜ್ಯ ಸರ್ಕಾರ ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟಿದೆ.

    ದಿ ಹುಬ್ಬಳ್ಳಿ ಅರ್ಬನ್ ಕೋ ಅಪರೇಟಿವ್ಸ್ ಬ್ಯಾಂಕ್ ಲಿ ನಿರ್ದೇಶಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಸಾವಕಾರಗೆ ಸನ್ಮಾನ!

    ಸಾಲು ಸಾಲು ಬೆಲೆ ಏರಿಕೆಯಿಂದ ತತ್ತರಿಸಿರೋ ಜನರಿಗೆ ಇದೀಗ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆನೋ ಫ್ರೀ ಇದೆ. ಒಂದು ಕೊಟ್ಟು ಮತ್ತೊಂದು ಕಸಿದುಕೊಂಡಿದ್ದಾರೆ ಎನ್ನುವುದು ಜನರ ಮಾತು. ಇದನ್ನೇ ಅಸ್ತ್ರ ಮಾಡ್ಕೊಂಡ ಬಿಜೆಪಿ, ಇವತ್ತು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡಿದೆ.

    ನಾಳೆ ಸಾರಿಗೆ ಇಲಾಖೆ ಅಧಿಕೃತವಾಗಿ ದರ ಏರಿಕೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಸಾಮಾನ್ಯ ಬಸ್ ನ ಸದ್ಯದ ಟಿಕೆಟ್ ದರ ಮತ್ತು 15% ರಷ್ಟು ಹೆಚ್ಚಳ ನಂತರದ ದರ ಎಷ್ಟಾಗಬಹುದು ಎನ್ನುವ ಅಂದಾಜು ಪಟ್ಟಿ ಈ ಕೆಳಗಿನಂತಿದೆ.

    ಬಸ್ ಪ್ರಯಾಣ ದರ ಎಲ್ಲಿಗೆ ಎಷ್ಟು ಹೆಚ್ಚಳ?
    ಬೆಂಗಳೂರು ಟು ಹುಬ್ಬಳ್ಳಿ ಸದ್ಯದ ದರ 501 ರೂ. ಇದೆ. ಹೆಚ್ಚಳದ ನಂತರ 576 ರೂಪಾಯಿ ಆಗಲಿದೆ. ಹಾಗೇ ಬೆಂಗಳೂರು ಟು ಬೆಳಗಾವಿ ಸದ್ಯದ ದರ 631 ರೂ. ಇದೆ. ಏರಿಕೆ ಬಳಿಕ 725 ರೂಪಾಯಿ ಆಗಲಿದೆ. ಬೆಂಗಳೂರು ಟು ಕಲಬುರಗಿ 706 ರೂಪಾಯಿ ಇದ್ದು, ಹೈಕ್​ ಬಳಿಕ 811 ರೂ. ಆಗಲಿದೆ. ಬೆಂಗಳೂರು ಟು ಮೈಸೂರು ಸದ್ಯದ ಬಸ್​​ ಚಾರ್ಜ್​ 185 ರೂ. ಇದೆ. ಏರಿಕೆ ಬಳಿಕ 213 ರೂಪಾಯಿ ಆಗಲಿದೆ. ಬೆಂಗಳೂರು ಟು ಮಡಿಕೇರಿ 358 ರೂಪಾಯಿ ಇದ್ದು, ಹೆಚ್ಚಳದ ನಂತ್ರ 411 ರೂಪಾಯಿ ಆಗಲಿದೆ. ಇನ್ನು ಬೆಂಗಳೂರು ಟು ಚಿಕ್ಕಮಗಳೂರು ಸದ್ಯದ ಬಸ್​ ಪ್ರಯಾಣ ದರ 285 ರೂಪಾಯಿ ಇದ್ದು, ಏರಿಕೆ ಬಳಿಕ 328 ರೂಪಾಯಿ ಆಗಲಿದೆ.

    ಬೆಂಗಳೂರು ಟು ಹಾಸನ ಸದ್ಯದ ಪ್ರಯಾಣ ದರ 246 ರೂಪಾಯಿ ಇದೆ. ಹೆಚ್ಚಳದ ನಂತರ 282 ರೂಪಾಯಿ ಆಗಲಿದೆ. ಬೆಂಗಳೂರು ಟು ಮಂಗಳೂರು ಬಸ್​ ಪ್ರಯಾಣ ದರ 424 ಇದ್ದು, ಹೈಕ್​ ಆದ್ರೆ 477 ರೂ. ಆಗಲಿದೆ. ಬೆಂಗಳೂರು ಟು ರಾಯಚೂರು ಬಸ್​ ಪ್ರಯಾಣ ದರ ಸದ್ಯಕ್ಕೆ 556 ರೂ. ಇದೆ. ಹೆಚ್ಚಳದ ನಂತರ 639 ರೂಪಾಯಿ ಆಗಲಿದೆ. ಇನ್ನು ಬೆಂಗಳೂರು ಟು ಬಳ್ಳಾರಿ ಸದ್ಯದ ದರ 376 ರೂಪಾಯಿ ಇದೆ. ಹೆಚ್ಚಳದ ನಂತ್ರ 432 ರೂಪಾಯಿ ಆಗಲಿದೆ.

    ಮೆಜೆಸ್ಟಿಕ್​ನಿಂದ ಜಯನಗರಕ್ಕೆ ಸದ್ಯ 20 ರೂಪಾಯಿ ಇದೆ.. ಆದ್ರೆ ದರ ಏರಿಕೆ ಬಳಿಕ 23 ರೂಪಾಯಿ ಆಗಲಿದೆ. ಮೆಜೆಸ್ಟಿಕ್​ನಿಂದ ಸರ್ಜಾಪುರಕ್ಕೂ 25 ರೂಪಾಯಿ ಇದೆ.. ಪ್ರಯಾಣ ದರ ಏರಿಕೆ ಬಳಿಕ 28 ರೂ. ಆಗಲಿದೆ. ಮೆಜೆಸ್ಟಿಕ್​ ಟು ಅತ್ತಿಬೆಲೆಗೆ ಸದ್ಯದ ಪ್ರಯಾಣ ದರ 25 ರೂಪಾಯಿ ಇದೆ.. ಚಾರ್ಜ್ ಹೈಕ್​ ಬಳಿಕ 28 ರೂಪಾಯಿ ಆಗಲಿದೆ. ಮೆಜೆಸ್ಟಿಕ್​ನಿಂದ ಹಾರೋಹಳ್ಳಿಗೆ 25 ರೂಪಾಯಿ ದರ ಇದೆ. ಹೆಚ್ಚಳದ ನಂತರ 28.75 ರೂ. ಆಗಲಿದೆ. ಹಾಗೇ ಮೆಜೆಸ್ಟಿಕ್​ನಿಂದ ಬನಶಂಕರಿಗೆ 20 ರೂಪಾಯಿ ಇದೆ.. ಪ್ರಯಾಣ ದರ ಜಾಸ್ತಿ ಆದ್ರೆ 23 ರೂಪಾಯಿ ಆಗಲಿದೆ.. ಇನ್ನು ಮೆಜೆಸ್ಟಿಕ್​ನಿಂದ ಏರ್​​ಪೋರ್ಟ್​ಗೆ ಈಗ 235 ರೂಪಾಯಿ ಇದೆ.. ದರ ಏರಿಕೆ ಆದ್ರೆ 270 ರೂಪಾಯಿ ಆಗಲಿದೆ.

    Demo
    Share. Facebook Twitter LinkedIn Email WhatsApp

    Related Posts

    ಮಿತ್ರ ಪಕ್ಷ ಬಿಜೆಪಿಗೆ ಬಿಗ್ ಶಾಕ್: ‘ಕಮಲ’ ನಾಯಕನನ್ನ ಜೆಡಿಎಸ್​ಗೆ ಕರೆ ತಂದ್ರು ಕುಮಾರಸ್ವಾಮಿ!

    June 22, 2025

    ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಸೆಂಟ್ರಲ್ ಬ್ಯಾಂಕಿನಲ್ಲಿ 4500 ಹುದ್ದೆಗಳು ಖಾಲಿ.. ಅರ್ಹರು ಇಂದೇ ಅಪ್ಲೈ ಮಾಡಿ!

    June 22, 2025

    ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್

    June 22, 2025

    ಸಂಕಷ್ಟದಲ್ಲಿ ಮಾವು ಬೆಳೆಗಾರರು: ನೆರವಿಗೆ ಮುಂದಾದ ಕೇಂದ್ರ: 2.5 ಲಕ್ಷ ಟನ್​​ ಮಾವು ಖರೀದಿಗೆ ಒಪ್ಪಿಗೆ!

    June 22, 2025

    ಇನ್ಮುಂದೆ ಸುಳ್ಳು ಸುದ್ದಿ, ದ್ವೇಷ ಭಾಷಣ ಮಾಡಿದ್ರೆ ದಂಡದ ಜೊತೆ ಜೈಲೂಟ ಫಿಕ್ಸ್!

    June 22, 2025

    ವಿದ್ಯಾರ್ಥಿಗಳು, ಪೋಷಕರು ಮಿಸ್ ಮಾಡ್ದೆ ಸುದ್ದಿ ಓದಿ: ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್! ಏನದು?

    June 22, 2025

    ಆಗಸದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿ: ಬೆಂಗಳೂರಲ್ಲಿ ತುರ್ತು ಭೂಸ್ಪರ್ಶ!

    June 22, 2025

    ಬೆಂಗಳೂರಿಗರ ಗಮನಕ್ಕೆ: ಇಂದು ಈ ಪ್ರದೇಶದಲ್ಲಿ ಇರಲ್ಲ ಕರೆಂಟ್!

    June 22, 2025

    ಎತ್ತಿನಹೊಳೆ ಯೋಜನೆಯಲ್ಲಿ ಮೊದಲು ಕುಡಿಯುವ ನೀರು ಪೂರೈಕೆ, ನಂತರ ಕೆರೆಗಳಿಗೆ ನೀರು: ಡಿಸಿಎಂ ಡಿ.ಕೆ. ಶಿವಕುಮಾರ್

    June 21, 2025

    ವಂಚನೆ ಆರೋಪ: ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ FIR!

    June 21, 2025

    ಐಟಿ ಕ್ಷೇತ್ರದ ಹುದ್ದೆಗಳನ್ನ ಎಐ ಕಿತ್ತುಕೊಳ್ಳುತ್ತಾ!? ಇನ್ಫೋಸಿಸ್ ದಿಗ್ಗಜ ಎನ್‌.ಆರ್ ನಾರಾಯಣಮೂರ್ತಿ ಏನಂದ್ರೂ!?

    June 21, 2025

    ಮಾವು ಮಾರುಕಟ್ಟೆ ಮಧ್ಯಪ್ರವೇಶ : ಬೆಲೆ ವ್ಯತ್ಯಾಸ ಪಾವತಿಗೆ ಸರ್ಕಾರದ ಒಪ್ಪಿಗೆ ಎನ್. ಚಲುವರಾಯಸ್ವಾಮಿ!

    June 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.