ಮಂಡ್ಯ:– ಚಾಲಕನ ನಿಯಂತ್ರಣ ತಪ್ಪಿದ್ದ ಕೆಎಸ್ ಆರ್ ಟಿಸಿ ಬಸ್ ಗದ್ದೆಗೆ ನುಗ್ಗಿದ್ದು, ಭಾರೀ ಅನಾಹುತ ತಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಹಾಗೂ ತಾಲೂಕಿನ ಶಿವಳ್ಳಿ-ಹಾಡ್ಯ ಗ್ರಾಮದಲ್ಲಿ ಜರುಗಿದೆ.
ಮೂಗು ಚುಚ್ಚೋದ್ರಿಂದ ಆಗುವ ಲಾಭ, ನಷ್ಟ ಎಷ್ಟು ಗೊತ್ತಾ? ಹೆಣ್ಣುಮಕ್ಕಳು ಯಾವ ವಯಸ್ಸಿಗೆ ಮೂಗುತಿ ಧರಿಸಬೇಕು?
ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಳ್ಳಿಯಿಂದ ಪಾಂಡವಪುರಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಗದ್ದೆಗೆ ನುಗ್ಗಿದೆ.
ಬಸ್ ನಲ್ಲಿ ಸುಮಾರು 35ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು.ಆ ಪೈಕಿ 20ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಸ್ಥಳೀಯರ ನೆರವಿನಿಂದ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರಾಗಿದ್ದಾರೆ.
ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ 15ಕ್ಕೂ ಹೆಚ್ಚು ಮಂದಿಯನ್ನು ರವಾನೆ ಮಾಡಲಾಗಿದೆ. ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಘಟನೆ ಬಗ್ಗೆ ನಿರ್ವಾಹಕ ಮಾತನಾಡಿ,ಟಿಕೆಟ್ ಕೊಡ್ತಿದ್ದೆ ಏನಾಯ್ತಿ ಅಂತ ಗೊತ್ತಾಗ್ಲಿಲ್ಲ. ಮಂಡ್ಯದಿಂದ ಪಾಂಡವಪುರಕ್ಕೆ ಹೋಗ್ತಿದ್ವಿ. ರಸ್ತೆ ಕಿರಿದಾಗಿತ್ತು ಹೀಗಾಗಿ ಚಾಲಕ ನಿಯಂತ್ರಣ ಕಳೆದುಕೊಂಡಿರಬೇಕು. ಬಸ್ ನಲ್ಲಿ ಸುಮಾರು 70 ಜನ್ರಿದ್ರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದರು.