ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಜರುಗಿದೆ.
ಟಿ ನರಸೀಪುರ ತಾಲೂಕಿನ ಮುಡುಕನಪುರ ಗ್ರಾಮದ ರಾಜಮಣಿ, ಕೃತಿಕಾ ರುಕ್ಮಿಣಿ ಮಂಜುನಾಥ್ ಸಂಜೀವ್ ಮಹೇಶ್ ಕಾವ್ಯ ಪ್ರತಾಪ್ ಮಹೇಶ್, ನಿಂಗಯ್ಯ, ಯಳಂದೂರು ತಾಲೂಕಿನ ಮೆಲ್ಲಳ್ಳಿ ಗ್ರಾಮದ ಜ್ಯೋತಿ ಗಾಯಗೊಂಡವರಾಗಿದ್ದಾರೆ.
ರಾಜ್ಯದ ನಾನಾ ಕಡೆಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಾಪಸ್ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ತಾಳುಬೆಟ್ಟ ಮಹದೆಶ್ವರಬೆಟ್ಟ ಮಾರ್ಗ ಸಮೀಪ ಪಲ್ಟಿಯಾಗಿದೆ. ತಕ್ಷಣ ದಾರಿ ಹೋಕರು ತುರ್ತು ಆಂಬುಲೆನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಘಟನೆ ನಡೆದ ಹಲವು ಅರ್ಧ ತಾಸುಗಳು ಆಂಬುಲೇನ್ಸ್ ಸಿಗದೆ ಪರದಾಡಿದ್ದಾರೆ ಬಳಿಕ ಪ್ರಾಧಿಕಾರದ ಆಂಬುಲೇನ್ಸ್ ಸೇರಿ ಖಾಸಗಿ ವಾಹನ ದ ಮುಖಾಂತರ ಮಹದೇಶ್ವರಬೆಟ್ಟ ಕೊಳ್ಳೇಗಾಲ ಆಸ್ಪತ್ರೆ ಗೆ ಚಿಕಿತ್ಸೆ ರವಾನಿಸಿಲಾಗಿದೆ