ಹಾವೇರಿ:- ಕೆ ಎಸ್ ಆರ್ ಟಿಸಿ ಚಾಲಕನೋರ್ವ ಪ್ರಯಾಣಿಕರ ಸೀಟ್ ಮೇಲೆ ಕುಳಿತು ನಮಾಝ್ ಮಾಡಿರುವ ಘಟನೆ ಹಾವೇರಿಯಲ್ಲಿ ಜರುಗಿದೆ. ಪ್ರಯಾಣಿಕರಿದ್ರೂ ಸಹ ಚಾಲಕನೋರ್ವ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದಾನೆ.
ಏಪ್ರಿಲ್ 29ರ ಸಂಜೆ ಹುಬ್ಬಳ್ಳಿಯಿಂದ ಹಾವೇರಿಯತ್ತ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ಸನ್ನು ಮಾರ್ಗಮಧ್ಯ ನಿಲ್ಲಿಸಿ ನಮಾಜ್ ಮಾಡಿದ್ದಾನೆ. ಬಸ್ ನಲ್ಲಿ ಪ್ರಯಾಣಿಕರನ್ನ ಇದ್ದರೂ ಕರ್ತವ್ಯದ ಅವಧಿಯಲ್ಲಿಯೇ ಹಾನಗಲ್ ಟು ವಿಶಾಲಗಡ್ ಬಸ್ ಡ್ರೈವರ್ ಕಂ ಕಂಡಕ್ಟರ್ ಸೀಟಿನ ಮೇಲೆ ಕುಳಿತು ನಮಾಜ್ ಮಾಡಿದ್ದು, ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ,
ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.