ಪುಷ್ಪ ಅಂದರೆ ಫ್ಲವರ್ ಅಲ್ಲ ಫೈರ್ ಅಂದುಕೊಂಡೇ ಬಾಕ್ಸಾಫೀಸ್ ನಲ್ಲಿ ಭರ್ಜರಿ ಬೇಟೆಯಾಡಿದವರು ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಅಲ್ಲು ಹಾಗೂ ಸುಕುಮಾರ್ ಕಾಂಬೋದ ಪುಷ್ಪ ಸಿನಿಮಾ ಬರೆದ ದಾಖಲೆಗಳು ಅಷ್ಟಿಷ್ಟಲ್ಲ. ಪುಷ್ಪ ದಾಖಲೆಯನ್ನೀಗ ಮಮೋಹನ್ ಲಾಲ್ ಉಡೀಸ್ ಮಾಡಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ 50 ಕೋಟಿ ಗಳಿಗೆ ಮಾಡುವ ನಿರೀಕ್ಷೆ ಇದೆ.
ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನಲ್ಲಿ ಲೂಸಿಫರ್ 2 ಸಿನಿಮಾ ನಯಾ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಮೋಹನ್ ಲಾಲ್ ಅಭಿನಯದ, ಪೃಥ್ವಿರಾಜ್ ಸುಕುಮಾರ್ ನಿರ್ದೇಶನದ ಎಂಪುರಾನ್ -2 ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆಯ ಕೋಟಿ ಕೋಟಿ ರೂಪಾಯಿ ಬಾಚಿಕೊಂಡಿದೆ.
ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಪುಷ್ಪ 2’ ಮತ್ತು ದಳಪತಿ ವಿಜಯ್ ನಟನೆಯ ‘ಲಿಯೋ’, ‘ಜವಾನ್’, ‘ಲಿಯೋ’ ಮತ್ತು ‘ಕಲ್ಕಿ: 2898 AD’ ಗಳನ್ನು ಹಿಂದಿಕ್ಕಿ ‘ಎಂಪೂರನ್’ ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ಒಂದು ಗಂಟೆಯಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆದ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ.24 ಗಂಟೆಗಳಲ್ಲಿ 645 ಸಾವಿರ ಟಿಕೆಟ್‌ಗಳನ್ನು ಸೇಲ್ ಆಗಿವೆಯಂತೆ.
ನಾಳೆ ತೆರೆಗೆ ಬರ್ತಿರುವ ಲೂಸಿಫರ್ 2 ಸಿನಿಮಾದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಟೋವಿನೋ ಥಾಮಸ್, ಇಂದ್ರಜಿತ್ ಸುಕುಮಾರನ್, ಅಭಿಮನ್ಯು ಸಿಂಗ್ ಮತ್ತು ಮಂಜು ವಾರಿಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.