ಮಾಲಿವುಡ್ ಚಿತ್ರರಂಗದ ಈ ವರ್ಷದ ಸೂಪರ್ ಹಿಟ್ ಜೊತೆಗೆ ವಿವಾದಗಳಿಂದ ಸುದ್ದಿಯಾದ ಸಿನಿಮಾ ಎಂಪುರಾನ್. ಲೂಸಿಫರ್ ಚಿತ್ರದ ಮುಂದುವರೆದ ಭಾಗವಾಗಿರುವ ಎಂಪುರಾನ್ ನಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪೃಥ್ವಿರಾಜ್ ಸುಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಮಾರ್ಚ್ 27ರಂದು ತೆರೆಕಂಡ ಚಿತ್ರ 300ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿತ್ತು ಎನ್ನಲಾಗಿತ್ತು. ಆದರೆ ಈ ಚಿತ್ರ ಸಾಕಷ್ಟು ವಿವಾದಗಳಿಂದ ಸುದ್ದಿಯಾಗಿತ್ತು.ಬಿಡುಗಡೆ ನಂತರ ಎಂಪುರಾನ್ ಸಿನಿಮಾ ಸಾಕಷ್ಟು ವಿವಾದ ಎದುರಿಸಿದೆ. ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಬಿಜೆಪಿ ಹಾಗೂ ಸಂಘ ಪರಿವಾರದವರು ಈ ಚಿತ್ರವನ್ನು ತೀವ್ರವಾಗಿ ವಿರೋಧಿಸಿದ್ದರು. ಹಿಂದೂ ವಿರೋಧಿ ಮತ್ತು ಅಪಪ್ರಚಾರ ಹರಡಿದ ಆರೋಪದಡಿ ಕೆಲ ದೃಶ್ಯಗಳಿಗೆ ಬಳಿಕ ಕತ್ತರಿ ಹಾಕಲಾಗಿತ್ತು.
ಆಶೀರ್ವಾದ್ ಸಿನಿಮಾಸ್, ಲೈಕಾ ಪ್ರೊಡಕ್ಷನ್ಸ್ ಹಾಗೂ ಶ್ರೀ ಗೋಕುಲಂ ಮೂವೀಸ್ ಸಂಸ್ಥೆಗಳು ಒಟ್ಟಿಗೆ ಸೇರಿದ್ದ ‘ಎಂಪುರಾನ್’ ಸಿನಿಮಾವೀಗ ಒಟಿಟಿಗೆ ಸಜ್ಜಾಗಿದೆ. ಜೀಯೋ ಹಾಟ್ ಸ್ಟಾರ್ ನಲ್ಲಿ ಏಪ್ರಿಲ್ 24ಕ್ಕೆ ಈ ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಹೀಗಾಗಿ ಮೋಹನ್ ಲಾಲ್ ಮಾಹಿತಿ ಹಂಚಿಕೊಂಡಿದ್ದಾರೆ. ಮಲಯಾಳಂ, ಕನ್ನಡ, ತಮಿಳು, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ನೀವು ಚಿತ್ರ ವೀಕ್ಷಿಸಬಹುದು.