ಹುಬ್ಬಳ್ಳಿ : ಉತ್ತರ ಕರ್ನಾಟಕ ದಿ.ಎ.ಜೆ ಮುಧೋಳ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆ ನಡೆಸಲಾಯಿತು.
ಇಂದು ಬೆಳಗ್ಗೆ 11, 00ಘಂಟೆಗೆ ನಗರದ ಹಳೇ ಹುಬ್ಬಳ್ಳಿ ರಸ್ತೆಯಲ್ಲಿರುವ ದಿ.ಎ.ಜೆ.ಮುಧೋಳ ಭವನದಿಂದ ಶ್ರೀಯುತರ ಭಾಚಚಿತ್ರದೊಂದಿಗೆ ಟ್ರ್ಯಾಕ್ಟರ್ ಮೂಲಕ ಹೊರಟ ಮೆರವಣಿಗೆಯು ಪಿ ಬಿ ರಸ್ತೆಯಿಂದ ಸಂಚರಿಸಿ ನಗರದ ಇಂದಿರಾ ಗ್ಲಾಸ್ ಹೌಸ್ ಆವರಣದಲ್ಲಿ ಮುಕ್ತಾಯಗೊಂಡಿತು.
ಹುಬ್ಬಳ್ಳಿಯಲ್ಲಿ ಕರಾವಳಿ ಉತ್ಸವ ; ಇಂದಿನಿಂದ 50 ಮಳಿಗೆಗಳಲ್ಲಿ ವಸ್ತು ಪ್ರದರ್ಶನ, ಮಾರಾಟ – ದಿನೇಶ್ ಶೆಟ್ಟಿ
ಡೊಳ್ಳು ಕುಣಿತ ಮತ್ತು ಕರಡಿ ಮಜಲು ದೊಂದಿಗೆ ಹೊರಟ ಮೆರವಣಿಗೆಯಲ್ಲಿ ಕಾರ್ಮಿಕ ನಾಯಕ ಬಾಬಾಜಾನ್ ಮುಧೋಳ , ರಾಜಶೇಖರ್ ಮೆಣಸಿನಕಾಯಿ, ಬಿ ಎ ಮುಧೋಳ್ ಯೂಸುಫ್ ಬೆಳ್ಳಾರಿ, ಪಿ ಡಿ ನದಾಫ ಬೀರಪ್ಪ, ಕೋಟಗಿ ಇಜಾಜ್ , ಮುಧೋಳ ಸಾಯಿನಾಜ್ ಅಮರಗೋಳ್ , ಫಾತಿಮಾ ತಡಕೋಡ ಸೇರಿದಂತೆ ಬಿಡಿ ಮತ್ತು ಅಸಂಘಟಿತ ಕಾರ್ಮಿಕರು, ರಾಷ್ಟ್ರೀಯ ಮಹಿಳಾ ಫೆಡರೇಷನ್ ಧಾರವಾಡ ಜಿಲ್ಲಾ ಆಟೋ ಚಾಲಕರ ಸಂಘ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರೊಂದಿಗೆ ನೂರಾರು ಜನ ಭಾಗವಹಿಸಿದ್ದರು.