ಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಮೃತಪಟ್ಟ ವ್ಯಕ್ತಿಯ ಅಂತ್ಯಸAಸ್ಕಾರಕ್ಕೆ ಕಳೆದ ಮೂರು ದಿನಗಳಿಂದ ಕುಟುಂಬಸ್ಥರು ಅಡ್ಡಿಪಡಿಸುತ್ತಿರುವ ಘಟನೆಯೊಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಅರಸನಹಳ್ಳಿ ಗ್ರಾಮದಲ್ಲಿ ನಡೆದಿದೆ..
ಹೌದು ಗ್ರಾಮದ ಕೋದಂಡಪ್ಪ ಕಳೆದ ಮೂರು ದಿನಗಳ ಹಿಂದೆ ಹೃದಯಾಘಾತದಿಂದ ಮನೆಯಲ್ಲಿ ಸಾವನ್ನಪ್ಪಿದ್ದರು. ಕುಟುಂಬಸ್ಥರು ಅಂತ್ಯಸAಸ್ಕಾರಕ್ಕೆ ಸಕಲ ಸಿದ್ದತೆಗಳನ್ನು ನಡೆಸಿಕೊಂಡಿದ್ರು. ಆದರೆ ಮೃತ ವ್ಯಕ್ತಿಯ ತಾಯಿಒ ಹಾಗೂ ತಮ್ಮನ ನಡುವೆ ಎರಡು ಎಕರೆ ಜಮೀನು ವಿಚಾರವಾಗಿ ತಗಾದೆ ಇದ್ದು ಇದೇ ವಿಚಾರವಾಗಿ ಮೃತ ದೇಹವನ್ನು ಜಮೀನಿನಲ್ಲಿ ಅಂತ್ಯಸAಸ್ಕಾರ ಮಾಡಲು ಬಿಡುವುದಿಲ್ಲ ಎಂದು ಕುಟುಂಬಸ್ಥರ ನಡುವೆ ಗಲಾಟೆ ನಡೆದಿದೆ. ಆದರೆ ಅದೇ ಜಮೀನಿನಲ್ಲಿ ಅಂತ್ಯಸAಸ್ಕಾರ ಮಾಡುವುದಾಗಿ ಕೋದಂಡಪ್ಪ ಕುಟುಂಬಸ್ಥರು ಪಟ್ಟು ಹಿಡಿದು ಕಳೆದ ಮೂರು ದಿನಗಳಿಂದ ಮೃತ ದೇಹವನ್ನು ಮನೆಯ ಬಳಿಯೇ ಇಟ್ಟುಕೊಂಡು ಧರಣಿ ನಡೆಸುತ್ತಿದ್ದಾರೆ.
ಇನ್ನೂ ಘಟನೆಗೆ ಸಂಬAಧಿಸಿದAತೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್ ಕುಮಾರ್ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದು ವಿಫಲರಾಗಿದ್ದಾರೆ.