ಇಂದಿನ ದಿನಗಳಲ್ಲಿ ಬೆಳಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಗೆ ಕಾಫಿ ಕುಡಿಯುವ ಹೆಚ್ಚಿನವರಿಗೆ ಅಭ್ಯಾಸಕ್ಕಿಂತ ಲೂ ಫ್ಯಾಷನ್ ಆಗಿಬಿಟ್ಟಿದೆ ಎಂದು ಹೇಳಬಹುದು! ಅದರಲ್ಲೂ ಸಿಟಿ ಲೈಫ್ಸ್ಟೈಲ್ಗೆ ಎಡ್ಜೆಸ್ಟ್ ಆದವರಿಗೆ ಈ ಅಭ್ಯಾಸ ಇದ್ದೇ ಇರುತ್ತದೆ!
ಮುಖ ತೊಳೆಯದೇ, ಹಲ್ಲುಜ್ಜದೆ ಖಾಲಿ ಹೊಟ್ಟೆಗೆ ಒಂದು ಲೋಟ ಕಾಫಿ ಕುಡಿದರೆ, ಮಾತ್ರವೇ ಅವರಿಗೆ ಸಮಾಧಾನವಾಗುವುದು! ಕೆಲವರಿಗಂತು ಬೆಳಗ್ಗೆ ಕಾಫಿ ಅಥವಾ ಟೀ ಕುಡಿಯದೆ ಹೋದರೆ ತಲೆನೋವು ಬಂದು ಬಿಡುತ್ತದೆ ಎಂದು ಹೇಳುವುದು ಉಂಟು
ಮೊದಲಿಗೆ ಫ್ಯಾಷನ್ ರೀತಿಯಲ್ಲಿ ಶುರು ಮಾಡಿಕೊಂಡಿ ರುವ ಈ ಅಭ್ಯಾಸ, ಆಮೇಲೆ ಇದಕ್ಕೆ ಎಡಿಕ್ಟ್ ಆಗಿ ಬಿಟ್ಟಿರು ತ್ತಾರೆ. ಇನ್ನು ಕೆಲವರು, ಬೆಳಗ್ಗೆ ಎದ್ದ ಕೂಡಲೇ ಕಾಫಿ ಬದಲು ಬಿಸಿ ಬಿಸಿ ಚಹಾ ಕುಡಿಯುವ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ
ಇನ್ನೂ ಅಗಸೆ ಬೀಜದಲ್ಲಿನ ಗುಣಲಕ್ಷಣಗಳು ನೈಸರ್ಗಿಕ ಕೂದಲು ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಒಣ ಕೂದಲಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಸಂಧಿವಾತ, ಅಸ್ತಮಾ, ಅಧಿಕ ರಕ್ತದೊತ್ತಡ, ಹಾರ್ಮೋನ್ ಅಸಮತೋಲನ, ಹೃದಯರಕ್ತನಾಳದ ಕಾಯಿಲೆಗಳಿಂದ ಮುಕ್ತಿ ಹೊಂದಬಹುದು. ಜೊತೆಗೆ ಇನ್ನೂ ಎಷ್ಟೆಲ್ಲಾ ಲಾಭಗಳಿವೆ ಅಂತ ತಿಳಿಯೋಣ.
ಫ್ಲೆಕ್ಸ್ ಸೀಡ್ಸ್ ಅಥವಾ ಅಗಸೆ ಬೀಜ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಅಂತ ಎಲ್ಲರಿಗೂ ಗೊತ್ತಿದೆ. ಇದನ್ನು ನೆನೆಸಿದ ಅಥವಾ ಕುದಿಸಿದ ನೀರು ಲೋಳೆಯಂತೆ ಬರುತ್ತದೆ. ಅಗಸೆ ಬೀಜ ನೆನೆಸಿದ ಲೋಳೆಯಂತಹ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಅದ್ಭುತ ಆರೋಗ್ಯ ಲಾಭಗಳಿವೆ. ಅಗಸೆಬೀಜಗಳ ನಡುವೆ ನಾವು ನಮ್ಮ ಹಸಿವಿನ ಕಡುಬಯಕೆಗಳನ್ನು ನಿಯಂತ್ರಿಸಲು ಪ್ರಾರಂಭಿಸುತ್ತೇವೆ. ಕಡಿಮೆ ಆಹಾರ ಸೇವಿಸಿದರೆ ಅದಕ್ಕೆ ತಕ್ಕಂತೆ ನಮ್ಮ ತೂಕವೂ ಕಡಿಮೆಯಾಗತೊಡಗುತ್ತದೆ
ಅಗಸೆ ಬೀಜಗಳಿಂದಾಗಿ ದೇಹದಲ್ಲಿ ಉರಿಯೂತವು ಕಡಿಮೆಯಾಗಲು ಪ್ರಾರಂಭಸುತ್ತದೆ ಮತ್ತು ಉತ್ತಮ ಜೀರ್ಣಕ್ರಿಯೆಯಿಂದಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಅಗಸೆ ಬೀಜದ ನೀರು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರ ಜೊತೆಗೆ, ಈ ಬೀಜಗಳನ್ನು ಅಗಿಯುವುದರಿಂದ ಮಲಬದ್ಧತೆ ದೂರವಾಗುತ್ತೆ.
ಈ ನೀರಲ್ಲಿ ಇರುವ ವಿಟಮಿನ್ ಇ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಕೂದಲಿನ ರಚನೆಯನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದರಲ್ಲಿ ಫೈಬರ್ ಅಧಿಕವಾಗಿರುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ನೀರನ್ನು ಕುಡಿದ ನಂತರ, ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಹೊಂದುತ್ತೀರಿ. ಇದರೊಂದಿಗೆ, ನೀವು ಹೆಚ್ಚು ಕ್ಯಾಲೋರಿ-ಭರಿತ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸುತ್ತೀರಿ. ನೋಡಲು ಅಗಸೆ ಬೀಜಗಳು ಚಿಕ್ಕದಾಗಿದ್ರೂ ಯಾವುದೇ ಸೂಪರ್ಫುಡ್ಗಳಿಗೂ ಕಡಿಮೆ ಇಲ್ಲ. ಇವು ನಮ್ಮ ದೇಹದ ಬೆಳವಣಿಗೆಗೂ ಅಗತ್ಯ.
ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಚರ್ಮವು ಮೃದುವಾಗಿ, ಆರೋಗ್ಯಕರವಾಗಿ ಹೊಳೆಯುತ್ತದೆ. ಮೊಡವೆಗಳಿಗೆ ಕಾರಣವಾದ ಆಂಡ್ರೊಜೆನ್ ಹಾರ್ಮೋನುಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತೆ.
ಅಗಸೆ ಬೀಜಗಳನ್ನು ಸೇವಿಸುವುದು ಹೇಗೆ: ಹಾಲು ಮತ್ತು ಸೇಬು ಸ್ಮೂಥಿಯೊಂದಿಗೆ ಅಗಸೆ ಬೀಜಗಳನ್ನು ಕುಡಿಯಬಹುದು. ಇದಕ್ಕಾಗಿ, ಒಂದು ಕಪ್ ಹಾಲು ಮತ್ತು 2 ಖರ್ಜೂರವನ್ನು ಮಿಕ್ಸರ್ ಗ್ರೈಂಡರ್ನಲ್ಲಿ ಮಿಶ್ರಣ ಮಾಡಿ. ನಂತರ ಈ ಸ್ಮೂಥಿಯಲ್ಲಿ ಒಂದು ಚಮಚ ಅಗಸೆಬೀಜದ ಪುಡಿಯನ್ನು ಬೆರೆಸಿ ಕುಡಿಯಿರಿ, ಕೆಲವೇ ವಾರಗಳಲ್ಲಿ ನಿಮ್ಮ ತೂಕವು ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಬೆಳಗ್ಗೆ ಮಾತ್ರವಲ್ಲ ರಾತ್ರಿ ಹೊತ್ತು ಕಾಫಿ, ಟೀ, ಕೆಫೀನ್ ಇರುವ ಪಾನೀಯಗಳು ಮತ್ತು ಎನರ್ಜಿ ಡ್ರಿಂಕ್ಸ್ ಕುಡಿಯುವುದನ್ನು ತಪ್ಪಿಸಿ. ಇಲ್ಲದಿದ್ದರೆ ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ. ಈ ಪಾನೀಯಗಳ ಬದಲಿಗೆ ಹರ್ಬಲ್ ಟೀ, ಗ್ರೀನ್ ಟೀ, ಅರಿಶಿನ ಹಾಲು ಇತ್ಯಾದಿಗಳನ್ನು ಸೇವಿಸಬಹುದು.
ಕಾಫಿಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆಯಾದರೂ, ಅದನ್ನು ಮಿತವಾಗಿ ತೆಗೆದುಕೊಳ್ಳದಿದ್ದರೆ, ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ. ಅಲ್ಲದೇ ಚಹಾದಲ್ಲಿ ಕೆಫೀನ್ ಅಂಶವು ಕಾಫಿಗಿಂತ ಕಡಿಮೆ ಇರುತ್ತದೆ. ಹೆಚ್ಚಿನ ಕೆಫೀನ್ ಅಂಶವು ಶಕ್ತಿಯನ್ನು ಒದಗಿಸುತ್ತದೆ. ಹೆಚ್ಚಿನ ನಡುಕ, ಆತಂಕ ಮತ್ತು ನಿದ್ರೆಯ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಆದರೆ ಚಹಾ ಕುಡಿಯುವುದರಿಂದ ಈ ಅಡ್ಡ ಪರಿಣಾಮಗಳ ಅಪಾಯ ಕಡಿಮೆ.