ಬೆಂಗಳೂರು:- ನಮ್ಮ ಮೆಟ್ರೋ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಾನೂನು ಸಮರ ಸಾರಿದ್ದಾರೆ.
ಒಕ್ಕಲಿಗರು- ಲಿಂಗಾಯತರು ರಾಷ್ಟ್ರಮಟ್ಟದಲ್ಲಿ ಓಬಿಸಿಗಳೇ: ಡಿಕೆ ಶಿವಕುಮಾರ್!
ಮೆಟ್ರೋ ದರ ಏರಿಕೆ ಪರಿಷ್ಕರಣೆ ಸಮಿತಿ ರಚನೆ ಮಾಡಲಾಗಿತ್ತು. ಆ ಸಮಿತಿ ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿ ಬಂದಿತ್ತು. ದೆಹಲಿ, ಚೆನ್ನೈ, ಹಾಂಕಾಂಗ್, ಸಿಂಗಾಪುರ್ ಮೆಟ್ರೋ ನಿಲ್ದಾಣಗಳಿಗೆ ಹೋಗಿ ಸ್ಟಡಿ ಮಾಡಿದ್ರು. ಬಳಿಕ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿತ್ತು. ಶೇಕಡಾ 130% ದರ ಏರಿಕೆ ಮಾಡಿದ್ರು. ಸಮಿತಿಯ ವರದಿ ಬಹಿರಂಗಪಡಿಸಿ ಅಂತ ಎಷ್ಟೇ ಕೇಳಿದ್ರು ಬಹಿರಂಗ ಮಾಡ್ತಿಲ್ಲ. ಆರ್ಟಿಐ ಮೂಲಕ ಆಗ್ರಹಿಸಿದರು ಬಹಿರಂಗ ಪಡಿಸ್ತಿಲ್ಲ. ಬಿಎಂಆರ್ಸಿಎಲ್ ಎಂಡಿಗೆ ಪತ್ರ ಬರೆದರೂ ಬಿಡುಗಡೆ ಮಾಡ್ತಿಲ್ಲ. ಹಾಗಾಗಿ ಕೋರ್ಟ್ ಮೂಲಕ ನ್ಯಾಯ ಕೇಳಲು ಸಂಸದ ತೇಜಸ್ವಿ ಸೂರ್ಯ ನಿರ್ಧಾರ ಮಾಡಿದ್ದಾರೆ.
ಬಿಎಂಆರ್ಸಿಎಲ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿ ತೇಜಸ್ವಿ ಸೂರ್ಯ ಅವರ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ.