ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಚಿರತೆ ಕಂಡುಬಂದಿರುವುದು ವದಂತಿ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮತ್ತು ಹೆಜ್ಜೆ ಗುರುತು ಚಿರತೆಯದ್ದು ಅಲ್ಲ, ಅದು ಕಾಡು ಬೆಕ್ಕಿನದ್ದು ಎಂದು ಉಪವಲಯ ಅರಣ್ಯ ಅಧಿಕಾರಿ ರಂಗಪ್ಪ ಕೆ ಕೋಳಿ ಮಾಹಿತಿ ನೀಡಿದರು.
ಅವಳಿ ನಗರಕ್ಕೆ ಕಾಲಿಟ್ಟರಾ ಪಾಕಿಸ್ತಾನಿಗಳು!? ಮಸೀದಿಗಳಲ್ಲಿ ಅನುಮಾನಾಸ್ಪದ ಓಡಾಟ.. ಪರಿಶೀಲಿಸುವಂತೆ ಬೆಲ್ಲದ್ ಆಗ್ರಹ!
ಮಾಧ್ಯಮದ ಮೂಲಕ ಮಾಹಿತಿ ನೀಡಿದ ಅವರು, ಬೆಳಗಿನ ಜಾವ 4 ಗಂಟೆಗೆ ನಮಗೆ ಮಾಹಿತಿ ಬಂದಿತ್ತು. ನಾವು ಹಾಗೂ ನಮ್ಮ ಆರ್ ಎಫ್ ಒ ಹಾಗೂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ವಿ,
ಅಲ್ಲಿ ಪರಿಶೀಲನೆ ಮಾಡಿದಾಗ ಹೆಜ್ಜೆ ಗುರುತು ಸೇರಿ ಯಾವುದೇ ಕುರುಹು ಕಂಡು ಬಂದಿಲ್ಲ. ಸಿಸಿ ಟಿವಿ ಕ್ಯಾಮರಾದಲ್ಲಿ ಕ್ಲ್ಯಾರಿಟಿ ಇಲ್ಲಾ, ಅಲ್ಲಿ ಕಂಡು ಬಂದ ಹೆಜ್ಜೆ ಗುರುತಿಗೂ ಚಿರತೆ ಹೆಜ್ಜೆ ಗುರುತಿಗೂ ವ್ಯತ್ಯಾಸ ಇದೆ. ಕಾಡು ಬೇಕಿಗೆ ಈ ಹೆಜ್ಜೆ ಗುರುತು ಹೋಲಿಕೆ ಆಗ್ತಿದೆ. ಕಾಡು ಬೆಕ್ಕು ಜನರ ಮೇಲೆ ದಾಳಿ ಮಾಡೋದಿಲ್ಲ
ಜನರು ಆತಂಕ ಪಡುವ ಅವಶ್ಯಕತೆ ಇಲ್ಲಾ. ನಾಯಿ ಹೊತ್ತೋಯ್ದಿದ್ರೆ ಕುರುಹು ಸಿಗ್ತಿತ್ತು. ಜನರ ಜೊತೆ ನಾವು ಸಂಪರ್ಕದಲ್ಲಿದ್ದೇವೆ ಎಂದರು.