ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ದದಲ್ಲಿ ನಮ್ಮ ಯೋಧರು ಆರೋಗ್ಯ ಹಾಗೂ ಜಯಶಾಲಿಯಾಗಲಿ ಎಂದು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಉದ್ಬವ ಮೂರ್ತಿ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಜರುಗಿದ ಹೊಮ ಪೂಜೆಯಲ್ಲಿ ಭಾಗಿಯಾಗಿ ಮಾತನಾಡಿದರು,
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ನರೇಂದ್ರ ಮೋದಿಯವರ ಆಪರೇಷನ್ ಸಿಂಧೂರ ಮೊದಲ ಹಂತದಲ್ಲಿ ಯಶಸ್ವಿ ಕಂಡಂತೆ ಇದೀಗ ಎರಡನೇಯ ಹಂತದಲ್ಲಿಯೂ ಸಂಪೂರ್ಣ ಯಶಸ್ವಿ ಕಂಡು ಯುದ್ದ ಗೆದ್ದು ಭಾರತ ಮಾತೆಗೆ ಸಮರ್ಪಿಸಲಿ,ಧರ್ಮ ಕೇಳಿ ಪ್ರವಾಸಿಗರನ್ನು ಉಗ್ರರು ಹತ್ಯಗೈದಿದ್ದರು,ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ,ಪಾಕಿಸ್ತಾನದ ಹುಟ್ಟಡಗಿಸುವ ಕಾರ್ಯ ಮಾಡಿದೆ,
ನಮ್ಮ ಭಾರತೀಯ ಸೇನೆಗೆ ಜಯವಾಗಲಿ,ನಮ್ಮ ದೇಶದ ಸೈನಿಕರ ತಾಕತ್ತು ಪಾಪಿ ಪಾಕಿಸ್ತಾನಕ್ಕೆ ತಿಳಿಯಲಿ ಎಂದು ಸವದಿ ಹೇಳಿದರು, ಇದೇ ಸಂದರ್ಭದಲ್ಲಿ ಹಿರಿಯರಾದ ಎಂ ಆರ್ ವಾಲಿ, ತಾಪಂ ಮಾಜಿ ಸದಸ್ಯ ಗುರು ಮರಡಿಮಠ,ಆನಂದ ಕಂಪು,ಹಣಮಂತ ಸವದಿ, ಸದಾಶಿವ ಸವದಿ,ದಾನಪ್ಪ ಆಸಂಗಿ,ವಿಠ್ಠಲ ಜನವಾಡ, ಗಂಗಪ್ಪ ಅಮ್ಮಲಜೇರಿ, ಈರಪ್ಪ ಕಡಕಬಾವಿ,ಸಿದ್ದು ಕಂಚು,ರಾಜು ಕದಂ,ಬಸವರಾಜ ಯಾದವಾಡ,ಬಸಪ್ಪ ಕಂಚು,ಅಶೋಕ ಆಸಂಗಿ,ಸದಾಶಿವ ಬೆಳಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ