ಬೆಂಗಳೂರು: ಜು. 01: ನಾವೆಲ್ಲರೂ ಸಮುದಾಯವಾಗಿ ಯೋಚಿಸಿ ಸಮಾಜಕ್ಕಾಗಿ ಒಳಿತು ಮಾಡುವ ಕೆಲಸ ಮಾಡೋಣವೆಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ವೈದ್ಯರಿಗೆ ಕರೆ ನೀಡಿದರು.
ಮೆಡಿಕಲ್ ಶಾಪ್ ನಲ್ಲಿಯೇ ದುರಂತ ಅಂತ್ಯ: ಮಾತ್ರೆ ಖರೀದಿಸುವಾಗಲೇ ಕುಸಿದು ವ್ಯಕ್ತಿ ದುರ್ಮರಣ!
ಬಿಬಿಎಂಪಿ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಬಸವನಗುಡಿ ಎನ್.ಆರ್ ಕಾಲೋನಿಯ ಡಾ. ಸಿ.ಎನ್ ಅಶ್ವತ್ಥ ಕಲಾಭವನದಲ್ಲಿ ಏರ್ಪಡಿಸಿದ್ದ “ವೈದ್ಯರ ದಿನಾಚರಣೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಇಂಜಿನಿಯರಿಂಗ್, ಕಾನೂನು ಅಥವಾ ಇತರೆ ವೃತ್ತಿಪರ ಕ್ಷೇತ್ರಗಳಂತೆ ಪ್ರತಿಯೊಂದು ವೃತ್ತಿಯಲ್ಲಿಯೂ ಅದರದೇ ಅನುಭವವನ್ನು ಪುನರ್ ವಿಮರ್ಶೆ ಮಾಡಿಕೊಳ್ಳಲು, ಭವಿಷ್ಯಕ್ಕಾಗಿ ದೃಷ್ಟಿಕೋನ ರೂಪಿಸಲು ಕೆಲ ವಿಶೇಷ ದಿನಗಳು ಇರುತ್ತವೆ. ಅದರಂತೆಯೇ ವೈದ್ಯರ ದಿನವೂ ಸಹ ಇದ್ದು, ಅದು ಅಪೂರ್ವ ಅವಕಾಶವಾಗಿ ಲಭಿಸಿದೆ ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರವು ಒಂದು ಸಾಮಾಜಿಕ ವಿಭಾಗವಾಗಿದ್ದು, ಸದಾ ಸೂಕ್ಷ್ಮ ಸ್ಥಿತಿಯಲ್ಲೇ ಇರುತ್ತದೆ. ಸಮಾಜ ಸೇವೆ ಮತ್ತು ಆರೋಗ್ಯ ಸೇವಾ ವೃತ್ತಿಪರರ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವುದು ಅತ್ಯಂತ ಅಗತ್ಯ. ಅಂತಹ ಕಾರ್ಯವನ್ನು ನೀವುಗಳೆಲ್ಲರೂ ಸದಾ ಮಾಡುತ್ತಿದ್ದೀರಿ ಎಂದು ಹೇಳಿದರು.
ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯ ಆರೋಗ್ಯಾಧಿಕಾರಿಯಾದ ಡಾ. ಸೈಯದ್ ಸಿರಾಜುದ್ದೀನ್ ಮದನಿ ರವರು ಮಾತನಾಡಿ, ವೈದ್ಯರ ಸೇವೆ ಅನನ್ಯವಾದ ಕೆಲಸವಾಗಿದೆ. ಬಿಬಿಎಂಪಿ ಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವ ನಾವುಗಳು ನಾಗರಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.
ವಿಶೇಷ ಸೇವೆ ಸಲ್ಲಿಸಿದವರಿಗೆ ಸನ್ಮಾನ:
1. ಪದ್ಮಶ್ರೀ ಪುರಸ್ಕೃತರಾದ ಡಾ. ವಿಜಯಲಕ್ಷ್ಮಿ ದೇಶ್ಮನೆ, ನಿವೃತ್ತ ಕಿದ್ವಾಯಿ ತಜ್ಞರು.
2. ಡಾ. ಸುಶೀಲ ಶೇಖರ್, ನಿವೃತ್ತ ಮುಖ್ಯ ಆರೋಗ್ಯಾಧಿಕಾರಿ.
3. ಡಾ. ವತ್ಸಲ, ನಿವೃತ್ತ ಮುಖ್ಯ ಆರೋಗ್ಯಾಧಿಕಾರಿ.
4. ಡಾ. ಸೈಯದ್ ಸಿರಾಜುದ್ದೀನ್ ಮದನಿ, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ.
5. ಡಾ. ಜಗದೀಶ್ ಚತುರ್ವೇದಿ, ಇ.ಎನ್.ಟಿ ತಜ್ಞರು.
ಈ ವೇಳೆ ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.