Close Menu
Ain Live News
    Facebook X (Twitter) Instagram YouTube
    Wednesday, July 2
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಉನ್ನತ ಮಟ್ಟದಲ್ಲಿ ಡಿಜಿಟಲೀಕರಿಸಲು ವಿಶೇಷ ‘ಡೈವ್’ ಯೋಜನೆ ಆರಂಭಿಸಿದ LIC: ಷೇರು ಮೌಲ್ಯ ಭಾರೀ ಏರಿಕೆ

    By AIN AuthorDecember 15, 2023
    Share
    Facebook Twitter LinkedIn Pinterest Email
    Demo

    ಮುಂಬಯಿ: ತನ್ನ ಉತ್ಪನ್ನಗಳು ಮತ್ತು ಸೇವೆಯನ್ನು ಉನ್ನತ ಮಟ್ಟದಲ್ಲಿ ಡಿಜಿಟಲೀಕರಿಸಲು ವಿಶೇಷ ‘ಡೈವ್’ ಯೋಜನೆಯನ್ನು(DIVE: Digital Innovation And Value Enhancement) ಸರಕಾರಿ ಸ್ವಾಮ್ಯದ ವಿಮಾ ಕಂಪನಿಯಾದ ಎಲ್ಐಸಿ ಜಾರಿಗೊಳಿಸಿದೆ. ಕಂಪನಿಯಲ್ಲಿ ಡಿಜಿಟಲ್ ರೂಪಾಂತರವನ್ನು ತರುವುದು ಈ ‘ಡೈವ್’ನ ಉದ್ದೇಶ.

    ಮುಂಬರುವ ದಿನಗಳಲ್ಲಿ ಹೊಸ ಪ್ರೀಮಿಯಂಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕಂಪನಿಯು ಮುಂಬರುವ ತಿಂಗಳುಗಳಲ್ಲಿ 3 ರಿಂದ 4 ಹೊಸ ಪ್ರಾಡಕ್ಟ್ಗಳನ್ನು ಪ್ರಾರಂಭಿಸಲಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ತನ್ನದೇ ಆದ ಫಿನ್ಟೆಕ್ ಕಂಪನಿ ಪ್ರಾರಂಭಿಸುವ ಯೋಜನೆಯೂ ಇದೆ ಎಂದು ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಅಧ್ಯಕ್ಷ ಸಿದ್ಧಾರ್ಥ ಮೊಹಂತಿ ಹೇಳಿದ್ದಾರೆ.
    ‘ಇತ್ತೀಚೆಗೆ ಕೆಲವು ಫಿನ್ಟೆಕ್ ಕಂಪನಿಗಳೊಂದಿಗೆ ಭಾರತೀಯ ಜೀವ ವಿಮಾ ನಿಗಮ ಕೈಜೋಡಿಸಿದೆ. ನಮ್ಮ ಉತ್ಪನ್ನ ವಿತರಣೆಗಾಗಿ ಫಿನ್ಟೆಕ್ ಕಂಪನಿಗಳನ್ನು ಕಾರ್ಪೊರೇಟ್ ಏಜೆಂಟ್ಗಳನ್ನಾಗಿ ಮಾಡಲಾಗಿದೆ. ಈಗ ಎಲ್ಐಸಿ ತನ್ನದೇ ಆದ ಫಿನ್ಟೆಕ್ ಕಂಪನಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ,” ಎಂದು ಸಿದ್ಧಾರ್ಥ ಮೊಹಂತಿ ತಿಳಿಸಿದ್ದಾರೆ.
    ಭಾರತೀಯ ಜೀವ ವಿಮಾ ನಿಗಮದಲ್ಲಿ ಡೈವ್ಗೆ ಚಾಲನೆ ಮತ್ತು ಫಿನ್ಟೆಕ್ ಕಂಪನಿಯ ಸ್ಥಾಪನೆ ಕುರಿತಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಂಪನಿ ಷೇರುಗಳು ಭಾರೀ ಏರಿಕೆ ಕಂಡಿವೆ. ಶುಕ್ರವಾರ (ನ. 24) ಎಲ್ಐಸಿ ಷೇರುಗಳು ಶೇ. 9.71ರಷ್ಟು ಭಾರೀ ಜಿಗಿದು 677.70 ರೂ.ಗೆ ತಲುಪಿತ್ತು. ಇದೀಗ ಮಂಗಳವಾರ ಕೂಡ ಕಂಪನಿ ಷೇರುಗಳು ಶೇ. 0.92ರಷ್ಟು ಏರಿಕೆ ಕಂಡಿದ್ದು 683.90 ರೂ. ತಲುಪಿವೆ. ಕಳೆದ ಒಂದು ತಿಂಗಳಲ್ಲಿ ಷೇರು ಶೇ. 13.08ರಷ್ಟು ಏರಿಕೆಯಾಗಿದೆ.

    ಆದಾಗ್ಯೂ, ಎಲ್ಐಸಿ ಷೇರುಗಳು 52 ವಾರಗಳ ಗರಿಷ್ಠ ಮಟ್ಟಕ್ಕಿಂತ ಇನ್ನೂ ಕಡಿಮೆಯೇ ಇವೆ. ಎಲ್ಐಸಿ ಷೇರುಗಳ 52 ವಾರಗಳ ಗರಿಷ್ಠ ಮಟ್ಟ 754.25 ರೂ. ಇದೆ. ಷೇರಿನ 52 ವಾರಗಳ ಕನಿಷ್ಠ ಮಟ್ಟ 530.05 ರೂ. ಆಗಿದೆ. ಐಪಿಒ ಬೆಲೆಗೆ ಹೋಲಿಸಿದರೆ ಷೇರುಗಳ ಮೌಲ್ಯ ಇನ್ನೂ ಕಡಿಮೆಯೇ ಇದೆ.

    Demo
    Share. Facebook Twitter LinkedIn Email WhatsApp

    Related Posts

    Gold Rate Today: ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ದೇಶಾದ್ಯಂತ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ!

    July 1, 2025

    Commercial Cylinder Price: ಗ್ರಾಹಕರಿಗೆ ಸಿಹಿ ಸುದ್ದಿ: ಸಿಲಿಂಡರ್ ಬೆಲೆಯಲ್ಲಿ ಇಳಿಕೆ..!

    July 1, 2025

    ಚಿನ್ನಸ್ವಾಮಿ ಸ್ಟೇಡಿಯಂನ ಕರೆಂಟ್ ಕಟ್: ಸಂಪೂರ್ಣ ಪವರ್ ಕಟ್ ಮಾಡಿದ್ಯಾಕೆ ಬೆಸ್ಕಾಂ?

    July 1, 2025

    ನೀವು HDFC ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದ್ರೆ ಈ ಪ್ರಮುಖ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು!

    July 1, 2025

    ಇಂದಿನಿಂದ ಬೆಂಗಳೂರಿನ ಈ ರಸ್ತೆಗಳ ಟೋಲ್ ದರ ಏರಿಕೆ: ಯಾವ ವಾಹನಕ್ಕೆ ಎಷ್ಟು ಹೆಚ್ಚಳ?

    July 1, 2025

    ಗ್ರಾಹಕರಿಗೆ ಎಚ್ಚರಿಕೆ.. ನೀವು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು..! ಇಂದಿನಿಂದ ಹೊಸ ನಿಯಮಗಳು ಜಾರಿಗೆ!

    July 1, 2025

    ಪತ್ರಕರ್ತರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆಗೆ ನಾಳೆ ಸಿದ್ದರಾಮಯ್ಯ ಚಾಲನೆ!

    June 30, 2025

    ಬೆಂಗಳೂರು ಪ್ರಯಾಣಿಕರು ಮಿಸ್ ಮಾಡ್ದೆ ಓದಲೇಬೇಕಾದ ಸ್ಟೋರಿ: ನಾಳೆಯಿಂದ ಟೋಲ್ ದರ ದುಬಾರಿ!

    June 30, 2025

    ಬೃಹತ್ ಇ-ಖಾತಾ ಮೇಳ: ಸ್ಥಳದಲ್ಲಿಯೇ 1,259 ಅಂತಿಮ ಇ-ಖಾತೆಗಳ ವಿತರಣೆ!

    June 30, 2025

    ಬೊಜ್ಜಿಗೆ ಮತ್ತೊಂದು ಹೊಸ ಮೆಡಿಸನ್.. ಒಂದೇ ಇಂಜೆಕ್ಷನ್’ನಿಂದ 100 ಕೆಜಿ ತೂಕ ಇಳಿಸಬಹುದು..! ಇದರ ಬೆಲೆ ಎಷ್ಟು?

    June 30, 2025

    DK Shivakumar: ಇ-ಖಾತೆ ಮಾಡಿಸಿಕೊಳ್ಳಿ, ವಂಚನೆಯಿಂದ ತಪ್ಪಿಸಿಕೊಳ್ಳಿ; ಡಿಸಿಎಂ- ಡಿ.ಕೆ. ಶಿವಕುಮಾರ್!

    June 29, 2025

    ಆಸ್ತಿದಾರರಿಗೆ ಗುಡ್ ನ್ಯೂಸ್: ಬೃಹತ್ ಇ-ಖಾತಾ ಮೇಳಕ್ಕೆ DCM ಡಿಕೆ ಶಿವಕುಮಾರ್ ಚಾಲನೆ!

    June 29, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.