ಬಾಗಲಕೋಟೆ: ಬಾಗಲಕೋಟೆ ಬಣಜಿಗ ಸಮಾಜದಿಂದ ಲಿಂಗ ದೀಕ್ಷೆ ಹಾಗೂ ಲಿಂಗಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರದ ಚರಂತಿಮಠದಲ್ಲಿ ಲಿಂಗ ಪೂಜೆ ಕಾರ್ಯಕ್ರ,ಮ ನಡೆಯಿತು.
ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ, ಬಾಗಲಕೋಟೆ ತಾಲೂಕು ಯುವ ಘಟಕ ಹಾಗೂ ಮಹಿಳಾ ಘಟಕದಿಂದ ಆಯೋಜಿಸಲಾಗಿದ್ದು ಇಳಕಲ್ ವಿಜಯಮಹಾಂತ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಲಿಂಗ ದೀಕ್ಷೆ ಹಾಗೂ ಲಿಂಗ ಪೂಜೆ ಕಾರ್ಯಕ್ರಮದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಈ ವೇಳೆ ಚರಂತಿಮಠದ ಪೂಜ್ಯ ಪ್ರಭು ಸ್ವಾಮೀಜಿಗಳಿಂದ ಆಶೀರ್ವಚನ ನೀಡಿದರು.
ಬೇರೆ ಬೇರೆ ಧರ್ಮಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕೊಡುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಲಿಂಗಾಯತರಲ್ಲಿ ಅದು ಶಿಥಿಲ ಆಗುತ್ತಿದೆ. ಮೊದಲೆಲ್ಲ ಪ್ರತಿಯೊಂದು ಮನೆಯಲ್ಲಿ ಎಲ್ಲರ ಕೊರಳಲ್ಲಿ ಲಿಂಗ ಇಲ್ಲವೇ ರುದ್ರಾಕ್ಷಿ ಕಾಣುತ್ತಿತ್ತು. ಇದೀಗ ಸಮಾಜದಿಂದ ಮತ್ತೆ ಲಿಂಗ ದೀಕ್ಷೆ ಹಾಗೂ ಲಿಂಗ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಶ್ರೀಗಳು ತಿಳಿಸಿಕೊಡುವಂತೆ ಎಲ್ಲರು ಲಿಂಗ ಪೂಜಾ ವಿಧಾನ ಕಲಿತು, ಪ್ರತಿದಿನ ತಪ್ಪದೆ ಆಚರಿಸಿ ಎಂದು ಲಿಂಗ ಪೂಜೆಯ ಮಹತ್ವ ತಿಳಿಸಿದರು.