ಹೇಳಿಕೇಳಿ ಇದು ಡಿಜಿಟಲ್ ಜಮಾನ. ಸ್ವಲ್ಪ ಯಾಮಾರಿದ್ರೂ ಉಂಡೇ ನಾಮ ತಿಕ್ಕೋರು ಜಾಸ್ತಿನೇ. ಇನ್ನು, ಆನ್ ಲೈನ್‌ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೇ ಅಂತಾ ನೀವು ಆ ಕುಣಿಗೆ ಸಿಕ್ಕಿದ್ರೆ ಮುಗಿತು ಕಥೆ. ಆ ಕುಣಿಕೆಯಿಂದ ಹೊರಬರೋದಿಕ್ಕೆ ಸರ್ಕಸ್ ಮಾಡಬೇಕು. ಈ ಜಾಲದಲ್ಲಿ ಕನ್ನಡದ ಕಿರುತೆರೆ ನಟಿ ಸಿಲುಕಿದ್ದಾರೆ ಅನ್ನೋದೇ ವಿಪರ್ಯಾಸ.
‘ಸೀತೆ’, ‘ಪತ್ತೇದಾರಿ’, ʼಪಲ್ಲವಿ ಅನುಪಲ್ಲವಿʼ, ‘ಅಂತರಪಟ’ ಸೇರಿದಂತೆ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯರಾಗಿರುವ ಶರ್ಮಿಳಾ ಚಂದ್ರಶೇಖರ್ ಆನ್‌ಲೈನ್ ಬಡ್ಡಿಕೋರರು ಬೀಸಿದ ಬಲೆಯಲ್ಲಿ ಸಿಲುಕಿದ್ದಾರೆ. ಈ ಸಂಬಂಧ ಅವರು ವಿಡಿಯೋವೊಂದನ್ನು ಮಾಡಿ ನೀವು ಮೋಸ ಹೋಗಬೇಡಿ ಎಂದು ಸಂದೇಶ ಕೊಟ್ಟಿದ್ದಾರೆ.
ಶರ್ಮಿಳಾ ಮಾತು!
ಇತ್ತೀಚೆಗೆ ಆನ್‌ಲೈನ್ ಮೋಸ ಜಾಸ್ತಿ ಆಗಿದೆ, ವೇವ್ ಕ್ಯಾಶ್ ಲೋನ್ ಆಪ್‌ನಿಂದ ನಿಮಗೆ ಸಾಲ ಮಂಜೂರು ಆಗಿದೆ, ನೀವು ಸಾಲ ತೀರಿಸಿಲ್ಲ ಅಂದರೆ ನಿಮ್ಮ ಫೋಟೊಗಳನ್ನು ಬಳಸಿಕೊಂಡು, ಅಶ್ಲೀಲವಾಗಿ ಎಡಿಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನೆಲ್ಲ ವಾಟ್ಸಾಫ್ ಬಳಕೆದಾರರಿಗೆ ನನ್ನ ಎಡಿಟೆಡ್ ಫೋಟೊವನ್ನು ಕಳುಹಿಸುವುದಾಗಿ ಹೇಳುವುದಲ್ಲದೇ ನನ್ನ ಫೋನ್‌ನಲ್ಲಿರುವ ನಂಬರ್‌ಗಳಿಗೆ ಕರೆ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ನನ್ನ ಅಶ್ಲೀಲ ಫೋಟೊಗಳು ನಿಮಗೆ ಆನ್‌ಲೈನ್‌ನಲ್ಲಿ ಕಂಡರೆ ಅದು ನನ್ನ ನಿಜವಾದ ಫೋಟೊ ಆಗಿರುವುದಿಲ್ಲ . ಒಂದು ವೇಳೆ ನಿಮಗೆ ಅನೌನ್ ನಂಬರ್‌ದಿಂದ ಮೆಸೆಜ್ ಬಂದರೆ ನನ್ನ ಫೋಟೊ ಬಂದರೆ ಆ ನಂಬರ್‌ಗೆ ರಿಪ್ಲೈ ಮಾಡಬೇಡಿ ಅವರು ನಿಮ್ಮ ಫೋನ್‌ಲ್ಲಿರುವ ನಂಬರಗಳನ್ನು ಕೂಡ ಕದಿಯಬಹುದು ಎಂದು ಶರ್ಮಿಳಾ ಎಚ್ಚರಿಕೆಯನ್ನು ನೀಡಿದ್ದಾರೆ.