ಬೆಳಗಾವಿ: ಬೆಳ್ಳಂಬೆಳಗ್ಗೆಯೇ ಭ್ರಷ್ಟರ ಬೇಟೆಗೆ ಇಳಿದಿರುವ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಜ್ಯದ ವಿವಿಧೆಡೆಗಳಲ್ಲಿ ದಾಳಿ ನಡೆಸಿದ್ದಾರೆ. ಇನ್ನೂ ಈ ವೇಳೆ ಧಾರವಾಡದಲ್ಲಿನ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಅಶೋಕ ವಾಸನದ ಅವರ,
ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!
ಇಲ್ಲಿನ ರಾಮತೀರ್ಥ ನಗರದ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲಕ್ಷಾಂತರ ರೂ.ಮೌಲ್ಯದ ವಜ್ರಾಭರಣ ಹಾಗೂ ಚಿನ್ನಾಭರಣ ಸೇರಿದಂತೆ ಒಂದೂವರೆ ಲಕ್ಷ ರೂ.ನಗದು ಮತ್ತು ಅಕ್ರಮ ಆಸ್ತಿಗೆ ಸಂಬಂಧಿತ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಕಾರ್ಯಾಚರಣೆ ಮುಂದುವರಿಸಿದ್ದಾರೆ.