ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಮನೆಯೊಳಗೆ ಒಂದು ಸಂಸಾರ, ಹೊರಗಡೆ ಇನ್ನೊಂದು ಸಂಬಂಧದ ಪ್ರಕರಣಗಳು ಹೆಚ್ಚುತ್ತಲೇ ಇದೆ. ಒಂದೋ ಗಂಡ, ಹೆಂಡತಿಯನ್ನು ಕೊಲ್ಲುವುದು, ಇಲ್ಲಾ, ಹೆಂಡತಿಯು ಗಂಡನನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು. ಇದಕ್ಕೆಲ್ಲಾ, ಮೂಲ ಕಾರಣ ಅನೈತಿಕ ಸಂಬಂಧಗಳು. ಇದೀಗ ಅಂತಹದ್ದೇ ಘಟನೆ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯೊಬ್ಬರು ಹೋಟೆಲ್‌ನ ಛಾವಣಿಯಿಂದ ಹಾರಿ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಹೌದು ಮಹಿಳೆ ತನ್ನ ಪ್ರಿಯಕರ ಶೋಭಿತ್ ಜೊತೆ ಹೋಟೆಲ್‌ಗೆ ಬಂದಿದ್ದಾಳೆ. ಸ್ವಲ್ಪ ಸಮಯದ ನಂತರ, ಆಕೆಯ ಪತಿ ಮತ್ತು ಅತ್ತೆ ಮಾವ ಸ್ಥಳಕ್ಕೆ ತಲುಪಿದರು. ಸ್ಪಷ್ಟವಾಗಿ ಅವಳನ್ನು ಹಿಂಬಾಲಿಸಿದ್ದಾರೆ. ಅವರನ್ನು ನೋಡಿದ ಮಹಿಳೆ ಭಯಭೀತಳಾಗಿ ಸುಮಾರು 12 ಅಡಿ ಎತ್ತರದ ಹೋಟೆಲ್ ಛಾವಣಿಯಿಂದ ಹಾರಿ ಪರಾರಿಯಾಗಿದ್ದಾಳೆ.
पत्नी OYO में प्रेमी के साथ उच्च स्तर की सेवाएं ले रही थी
अचानक पुलिस ने दरवाजे की घंटी बजाई तो मैडम पीछे के दरवाजे से छत से कूद गई
फिलहाल पुलिस ने पति के कहने पर महिला को गिरफ्तार कर लिया है और जमके प्यार भी किया हैमामला बागपत जिले के बडोत क्षेत्र का #Bagpat pic.twitter.com/T6yNY1IC52
— Mohit Kumar (@Mohiteksoch) June 17, 2025
ಘಟನೆಯ ವೀಡಿಯೊ ಕಾಣಿಸಿಕೊಂಡಿದ್ದು, ಮಹಿಳೆ ಛಾವಣಿಯಿಂದ ಹಾರುತ್ತಿರುವುದನ್ನು ತೋರಿಸುತ್ತದೆ.ಭಾಗ್‌ಪತ್ ಕೊಟ್ಟಾಲಿ ಸ್ಟೇಷನ್ ಹೌಸ್ ಅಧಿಕಾರಿ ಮನೋಜ್ ಕುಮಾರ್ ಚಾಹಲ್ ಆರೋಪಿತ ಪ್ರೇಮಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಹೋಟೆಲ್ ಅನ್ನು ತುಗಾನಾ ಗ್ರಾಮದ ಯುವಕ ಬಾಡಿಗೆಗೆ ನಡೆಸುತ್ತಿದ್ದ. ಆತನನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ತನಿಖೆಯಲ್ಲಿದೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಚಾಹಲ್ ಹೇಳಿದರು.
ಆ ಮಹಿಳೆ 2019 ರಲ್ಲಿ ಕಾಕೋರ್ ಗ್ರಾಮದ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು ಮತ್ತು ದಂಪತಿಗೆ ಒಬ್ಬ ಮಗನಿದ್ದಾನೆ.ದೂರಿನಲ್ಲಿ ತಿಳಿಸಿರುವ ಪ್ರಕಾರ, ತನ್ನ ಪತ್ನಿ ಮದುವೆಗೆ ಮೊದಲು ಹಲವಾರು ಪುರುಷರೊಂದಿಗೆ ಸಂಬಂಧ ಹೊಂದಿದ್ದಳು ಮತ್ತು ನಂತರ ಸಂಬಂಧಗಳು ಮುಂದುವರೆದವು ಎಂದು ಪತಿ ಆರೋಪಿಸಿದ್ದಾರೆ. ದೂರಿನ ಪ್ರಕಾರ,
ಆಕೆ ಸುಳ್ಳು ಪ್ರಕರಣಗಳನ್ನು ಒಡ್ಡುವುದಾಗಿ ಬೆದರಿಕೆ ಹಾಕುತ್ತಿದ್ದಳು ಮತ್ತು ಆಕ್ಷೇಪಿಸಿದರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕುತ್ತಿದ್ದಳು. ಘಟನೆಯ ದಿನದಂದು ದಂಪತಿಗಳು ಎಸ್‌ಪಿ ಕಚೇರಿಯಲ್ಲಿರುವ ಮಹಿಳಾ ಕೋಶದಲ್ಲಿ ವೈವಾಹಿಕ ಸಮಾಲೋಚನೆಗೆ ಒಳಗಾಗಿದ್ದರು ಎಂದು ಪತಿ ಹೇಳಿಕೊಂಡಿದ್ದಾರೆ.