ಕಲಬುರಗಿ: ಲಂಚ ಸ್ವೀಕರಿಸುವಾಗಲೇ ರಾಜ್ಯ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಢಾಕಪ್ಪ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತನ ಹೆಸರನ್ನು ಬ್ಲಾಕ್ ಲೀಸ್ಟ್ ನಿಂದ ತೆಗೆಯಲು ಹಣದ ಬೇಡಿಕೆ ಇಟ್ಟಿದ್ದು, ಫೋನ್ ಪೇ ಮೂಲಕ ಹಣವನ್ನ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬ್ಲಾಕ್ ಲಿಸ್ಟ್ ನಲ್ಲಿರುವ ಆರ್ ಟಿಐ ಕಾರ್ಯಕರ್ತ ಸೈಬಣ್ಣ ಸಾಸಿ ಬೆನಕನಳ್ಳಿ ಹೆಸರನ್ನು ಅಲ್ಲಿಂದ ತೆಗೆದು ಹಾಕಲು ಆಯುಕ್ತ ರವೀಂದ್ರ ಢಾಕಪ್ಪ ಇವರು 3 ಲಕ್ಷ ರೂ, ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈಗಾಗಲೇ 1 ಲಕ್ಷ ರೂ, ಗಳನ್ನು ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ ಆಯುಕ್ತರು, ಉಳಿದ ಹಣ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಎಸ್.ಪಿ ಬಿಕೆ. ಉಮೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೀತಾ ಬೆನಾಳ, ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಅವರ ತಂಡದಿಂದ ತನಿಖೆ ಮುಂದುವರಿದಿದೆ.