Close Menu
Ain Live News
    Facebook X (Twitter) Instagram YouTube
    Saturday, June 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಲಾಸ್ ಎಂಜೆಲ್ಸ್ ಗೆ ಬಿದ್ದ ಬೆಂಕಿ: ಭಸ್ಮಗೊಂಡ ಸೆಲೆಬ್ರೆಟಿಗಳ ಭವ್ಯ ಬಂಗಲೆಗಳು

    By Author AINJanuary 10, 2025
    Share
    Facebook Twitter LinkedIn Pinterest Email
    Demo

    ಅಮೆರಿಕದ ಲಾಸ್ ಎಂಜಲ್ಸ್​ ನಲ್ಲಿ ಹಬ್ಬಿರುವ ಕಾಡ್ಗಿಚ್ಚು ಅಲ್ಲಿನ ಜನರ ನೆಮ್ಮದಿ ಕೆಡಿಸಿದೆ. ಕಾಡ್ಗಿಚ್ಚಿನಿಂದ ಈಗಾಗಲೇ ಐದು ಮಂದಿಯ ಜೀವ ಕಳೆದುಕೊಂಡಿದ್ದು ಲಕ್ಷಾಂತರ ಎಕರೆ ಕಾಡು ಸಂಪೂರ್ಣ ಆಗ್ನಿಗೆ ಆಹುತಿಯಾಗಿದೆ. ಗಂಟೆ ಗಂಟೆಗೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಲೇ ಇದ್ದು, ಇದೀಗ ಹಾಲಿವುಡ್ ಹಿಲ್ ಗೂ ಬೆಂಕಿ ವ್ಯಾಪಿಸಿದೆ. ಹಾಲಿವುಡ್ ಹಿಲ್, ವಿಶ್ವ ಪ್ರಸಿದ್ಧ ಹಾಲಿವುಡ್ ನಟ, ನಟಿಯರು ಮಾತ್ರವೇ ಅಲ್ಲದೆ ವಿಶ್ವದ ಟಾಪ್ ಉದ್ಯಮಿಗಳು, ಕ್ರೀಡಾಪಟುಗಳು ವಾಸಿಸುವ ಸ್ಥಳವಾಗಿದ್ದು, ಹಾಲಿವುಡ್​ ಹಿಲ್​ಗೆ ಬೆಂಕಿ ವ್ಯಾಪಿಸುತ್ತಿದ್ದಂತೆ ಹಾಲಿವುಡ್ ನಗರದ ಬಹುತೇಕರನ್ನು ಸ್ಥಳಾಂತರ ಮಾಡಲಾಗಿದೆ.

    ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರೆ ಮತ್ತು ಪಾರಿಸ್ ಹಿಲ್ಟರ್ ಅವರ ಮನೆಗಳು ಸುಟ್ಟು ಕರಕಲಾಗಿವೆ. ಹಾಲಿವುಡ್ ಹಿಲ್ಸ್​ನಲ್ಲಿ ಆಯೋಜನೆ ಮಾಡಲಾಗಿದ್ದ ಒಟ್ಟು ಮೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನ ಮುಂದೂಡಲಾಗಿದ್ದು, ಮುಂದಿನ ವಾರ ನಡೆಯಬೇಕಿದ್ದ ಆಸ್ಕರ್ ಪ್ರಶಸ್ತಿ ನಾಮಿನೇಷನ್ ಕೂಡ ಮುಂದಕ್ಕೆ ಹಾಕಲಾಗಿದೆ. ಸಾವಿರಾರು ಜನರು ಸದ್ಯ ಲಾಸ್ ಎಂಜಲ್ಸ್​ನಿಂದ ಸ್ಥಳಾಂತರಗೊಳ್ಳುತ್ತಿದ್ದಾರೆ.

    ಹಾಲಿವುಡ್ ಹಿಲ್ ಮೇಲಿರುವ ಬೃಹತ್ ಮತ್ತು ವಿಶ್ವ ಪ್ರಸಿದ್ಧವಾಗಿರುವ ‘HOLLYWOOD’ ಸೈನ್ ಬೋರ್ಡ್​ಗೆ ಬೆಂಕಿ ಬಿದ್ದಿದೆ ಎಂದು ಹೇಳಲಾಗುತ್ತಿದ್ದು, ಅದರ ಕೆಲ ಚಿತ್ರಗಳು ಹರಿದಾಡುತ್ತಿವೆ. ಆದರೆ ಹಾಲಿವುಡ್ ಸೈನ್ ಬೋರ್ಡ್​ಗೆ ಬೆಂಕಿ ಬಿದ್ದಿಲ್ಲ, ಈಗ ಹರಿದಾಡುತ್ತಿರುವುದು ಎಐ ಚಿತ್ರ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

    ಕಾಡ್ಗಿಚ್ಚಿಗೆ ಸುಮಾರು 1900 ಕಟ್ಟಡಗಳು ಆಹುತಿಯಾಗಿವೆ. ಬುಧವಾರ ತಡರಾತ್ರಿ ಹಾಲಿವುಡ್ ಹಿಲ್ಸ್​ನಲ್ಲಿ ಹೊತ್ತಿಕೊಂಡ ಬೆಂಕಿ ಹತ್ತಿರದಲ್ಲಿಯೇ ಇರುವ ಹಾಲಿವುಡ್ ಬಾವ್ಲ್​ ಹಾಗೂ ಡಾಲ್ಬಿ ಥಿಯೇಟರ್​ಗೂ ವ್ಯಾಪಿಸಿದೆ. ಇದನ್ನು ಅಕಾಡಮೆಕ್ ಅವಾರ್ಡ್​​ನ ಮನೆಯೆಂದೇ ಕರೆಯಲಾಗುತ್ತಿತ್ತು.

    ಸೆಲೆಬ್ರೆಟಿಗಳಾದ ಕ್ರಿಸ್ಟಲ್ ಮತ್ತು ಆತನ ಪತ್ನಿ ಜಾನಿಸ್​ ತಮ್ಮ ಸುಂದರ ಮನೆ ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ. ಪೆಸಿಫಿಕ್ ಪಾಲಿಸೇಡ್​ನ ನೆರೆಯಲ್ಲಿಯೇ ಇದ್ದ ಅವರ ಮನೆಯಲ್ಲಿ ಈ ದಂಪತಿ 45 ವರ್ಷಗಳಿಂದ ವಾಸವಿದ್ದರು. ಇದೇ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳು ಬೆಳೆದಿದ್ದರು. ನನ್ನ ಮನೆಯ ಒಂದೊಂದು ಇಂಚು ಕೂಡ ಪ್ರೀತಿಯ ಗುರುತುಗಳನ್ನು ಹೊಂದಿತ್ತು ಎಂದು ಜಾನಿಸ್ ಕಣ್ಣಿರಿಟ್ಟಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಪವರ್ ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್..’ಹರಿ ಹರ ವೀರ ಮಲ್ಲು ರಿಲೀಸ್ ಡೇಟ್‌ ಫಿಕ್ಸ್!

    June 21, 2025

    ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಪ್ರಶಸ್ತಿ ಕೊಡುವುದಿಲ್ಲ: ಡೋನಾಲ್ಡ್ ಟ್ರಂಪ್

    June 21, 2025

    ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ 22 ಲಕ್ಷ ವಂಚನೆ!

    June 20, 2025

    ಸಂಜು ವೆಡ್ಸ್ ಗೀತಾ 2’ ತಂಡದ ಆರೋಪಕ್ಕೆ ರಚಿತಾ ತಿರುಗೇಟು: ವಿಡಿಯೋ ಮೂಲಕ ಡಿಂಪಲ್ ಕ್ವೀನ್ ಕೊಟ್ಟ ಕ್ಲಾರಿಟಿ ಇಲ್ಲಿದೆ!

    June 20, 2025

    Donald Trump: ಭಾರತ, ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನಲ್ಲ: ಉಲ್ಟಾ ಹೊಡೆದ ಡೊನಾಲ್ಡ್ ಟ್ರಂಪ್..!

    June 20, 2025

    ಯಶ್‌ ತಾಯಿ ನಿರ್ಮಾಣದ ಮೊದಲ ಚಿತ್ರ ಬಿಡುಗಡೆಗೆ ರೆಡಿ..ʼಕೊತ್ತಲವಾಡಿʼ ದರ್ಶನ ಯಾವಾಗ?

    June 20, 2025

    ಕಿಚ್ಚ ಸುದೀಪ್‌ ಹೆಸರಲ್ಲಿ ಪಂಗನಾಮ..ಯುವನಟನಿಗೆ ನಂದಕಿಶೋರ್‌ ದೋಖಾ…?

    June 20, 2025

    ಮದುವೆಯಾಗದೆ 100 ಮಕ್ಕಳ ತಂದೆಯಾದ ಟೆಲಿಗ್ರಾಂ CEO.! ಕರುಳ ಕುಡಿಗಳಿಗೆ 20 ಬಿಲಿಯನ್ ಡಾಲರ್ ದೇಣಿಗೆ

    June 20, 2025

    ಪ್ರಚಾರ ಅಖಾಡದಲ್ಲಿ ಎಕ್ಕ…ಜುಲೈ 18ಕ್ಕೆ ಯುವರಾಜ್ ಕುಮಾರ್ ಸಿನಿಮಾ ರಿಲೀಸ್

    June 20, 2025

    ʼಕನ್ನಡ ಕೋಗಿಲೆʼ ಗಾಯಕಿ ಬಾಳಲ್ಲಿ ಡಿವೋರ್ಸ್‌ ಬಿರುಗಾಳಿ..ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ಫೋಟೋಸ್ ಡಿಲೀಟ್

    June 20, 2025

    ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಸಿದ್ಧತೆ: ಗ್ರೀನ್ ಸಿಗ್ನಲ್ ಕೊಟ್ರಾ ಟ್ರಂಪ್..!?

    June 19, 2025

    Israel-Iran Conflict: ಇರಾನ್ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ ಆಸ್ಪತ್ರೆ ಧ್ವಂಸ..!..!

    June 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.