ಕೆಂಪು ಸುಂದರಿಯ ಬೇಡಿಕೆ ಕಡಿಮೆ ಆಗಿ ಏಕಾಏಕಿ ಟೊಮೆಟೊ ದರ ಕುಸಿತಗೊಂಡಿದೆ. ಹೀಗಾಗಿ ಗದಗದ ಎಪಿಎಂಸಿಯಲ್ಲಿ ಟೊಮೆಟೊ ದರ ಭಾರೀ ಕುಸಿತದಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 25 ಕೆಜಿ ಟ್ರೇ ಕೇವಲ 50 ರೂ.ಗೆ ಮಾರಾಟವಾಗುತ್ತಿದೆ. ಬೆಳೆಗೆ ಹೆಚ್ಚಿನ ವೆಚ್ಚವಾಗಿದ್ದರೂ, ಕಡಿಮೆ ದರದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬದನೆಕಾಯಿ ಮತ್ತು ನುಗ್ಗೆಕಾಯಿ ದರಗಳೂ ಕುಸಿದಿವೆ. ಸರ್ಕಾರದ ವಿರುದ್ಧ ರೈತರು ಕಿಡಿಕಾರಿದ್ದಾರೆ.
ಏಕಾಏಕಿ ಟೊಮೆಟೊ ದರ ಪಾತಾಳಕ್ಕೆ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ. ದರ ಕುಸಿತಕ್ಕೆ ಗದಗ ಎಪಿಎಂಸಿಯಲ್ಲಿ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ. ಅಗತ್ಯ ವಸ್ತುಗಳ ದರಗಳು ಏರಿಕೆಯಾದರೂ ರೈತರು ಬೆಳೆದ ಬೆಳೆಗಳ ದರ ಏಕೆ ಏರಿಕೆಯಾಗುತ್ತಿಲ್ಲ ಅಂತ ಕಿಡಿಕಾರಿದ್ದಾರೆ.
ಜಿಲ್ಲೆಯ ರೈತರು ಗದಗ APMCಯಲ್ಲಿ ಟೊಮೆಟೊ ದರ ಕುಸಿತಕ್ಕೆ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. 25ಕೆಜಿ ಟ್ರೇಗೆ ಕೇವಲ 50 ರೂಪಾಯಿಗೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ. ಮಾರ್ಕೆಟ್ ನಲ್ಲಿ 15 ರೂಪಾಯಿ ಕೆಜಿ ಟೊಮೆಟೊ ಮಾರಾಟ ಮಾಡಲಾಗುತ್ತಿದ್ದು, ಆದರೆ APMC ಯಲ್ಲಿ ಮಾತ್ರ ರೈತರ ಟೊಮೆಟೊಗೆ ಕೆಜಿಗೆ ಕೇವಲ 2 ರೂಪಾಯಿ ನೀಡಲಾಗುತ್ತಿದೆ. ಎಲ್ಲಾ ದರಗಳು ಏರಿಕೆಯಾಯ್ತು, ಆದರೆ ರೈತರು ಬೆಳೆದ ಬೆಳೆ ದರ ಯಾಕೆ ಏರುತ್ತಿಲ್ಲ ಅಂತ ಅನ್ನದಾತರು ಕಿಡಿಕಾರಿದ್ದಾರೆ. ಅಲ್ಲದೇ ಸರ್ಕಾರ ರೈತರ ಬೆಳೆಗೆ ಬೆಂಬಲ ಬೆಲೆ ಭಾಗ್ಯ ನೀಡಬೇಕು ಅಂತ ಒತ್ತಾಯ ಮಾಡಿದ್ದಾರೆ.
ಎಕರೆಗೆ 30-50 ಸಾವಿರ ರೂ ಖರ್ಚು ಮಾಡಿ ರೈತರು ಟೊಮೆಟೊ ಬೆಳೆದಿದ್ದರು. ಈಕ ಏಕಾಏಕಿ ಬೆಲೆ ಕುಸಿತ ಆದ್ರೆ ನಮ್ಮ ಪಾಡು ಏನು ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ. ಮಾರುಕಟ್ಟೆಗೆ ಟೊಮೆಟೊ ತೆಗೆದುಕೊಂಡು ಹೋದ್ರೆ 50 ರೂ. ಗೆ ಟ್ರೇ ಮಾರಾಟ ಮಾಡಲಾಗುತ್ತಿದೆ. ಒಂದು ಟ್ರೇ ನಲ್ಲಿ ಸುಮಾರು 20-25 ಕೆಜಿ ಟೊಮೆಟೊ ಇರುತ್ತೆ. ಅದರಂತೆ 2 ರೂ ಗೆ ಕೆಜಿಯಂತೆ ಟೊಮೆಟೊ ಮಾರಾಟ ಮಾಡಲಾಗುತ್ತಿದ್ದು, ಸರ್ಕಾರದ APMC ವರ್ತಕರ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ.