ತಿರುಮಲ: ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮೇ 16, 2025 ರಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಈ ವಿಶ್ವಪ್ರಸಿದ್ಧ ದೇವಾಲಯವು ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ, ಇದು ಭಾರತದ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ವಿಷ್ಣುವಿನ ಅವತಾರವೆಂದು ಪೂಜಿಸಲ್ಪಡುವ ತಿರುಮಲ ದೇವಾಲಯವು ಹಿಂದೂ ಭಕ್ತರ ಆಧ್ಯಾತ್ಮಿಕ ಜೀವನದಲ್ಲಿ ಪೂಜ್ಯ ಸ್ಥಾನವನ್ನು ಹೊಂದಿದೆ.
ದೇವರ ದರ್ಶನ ಮಾಡಿದ ಬಳಿಕ ಅವರು ವೆಂಕಟೇಶ್ವರ ಸ್ವಾಮಿಗೆ 3.63 ಕೋಟಿ ರೂ. ಬೆಲೆ ಬಾಳುವ ಸುಮಾರು 5 ಕೆಜಿ ತೂಕದ ಚಿನ್ನಾಭರಣಗಳನ್ನು ದೇಣಿಗೆಯಾಗಿ ನೀಡಿದ್ದಾರೆ.ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್ ಅಧ್ಯಕ್ಷ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಮತ್ತು ಅವರ ಕುಟುಂಬವು ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿತು.
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ವಿಷ್ಣುವಿನ ಅವತಾರವೆಂದು ಪರಿಗಣಿಸಲಾದ ಭಗವಾನ್ ವೆಂಕಟೇಶ್ವರನಿಗೆ ಸಮರ್ಪಿತವಾದ ಈ ದೇವಾಲಯವು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಧಾರ್ಮಿಕ ಸ್ಥಳಗಳಲ್ಲಿ ಒಂದು. ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಪುನರಾರಂಭಕ್ಕೆ ಒಂದು ದಿನ ಮೊದಲು ಸಂಜೀವ್ ಗೋಯೆಂಕಾ ಮತ್ತು ಅವರ ಕುಟುಂಬದವರು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದರು. ಈ ಆಭರಣಗಳ ಔಪಚಾರಿಕ ಹಸ್ತಾಂತರ ಸಮಾರಂಭವು ದೇವಾಲಯ ಸಂಕೀರ್ಣದೊಳಗಿನ ರಂಗನಾಯಕಕುಲ ಮಂಟಪದಲ್ಲಿ ನಡೆಯಿತು. ಅಲ್ಲಿ ಸಂಜೀವ್ ಗೋಯೆಂಕಾ ನೀಡಿದ ಚಿನ್ನವನ್ನು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚಿ. ವೆಂಕಯ್ಯ ಚೌಧರಿ ಸ್ವೀಕರಿಸಿದರು.