ರಾಯಚೂರು: ಜೂನ್ 6ರಂದು ಮಾದೇವ ಸಿನೆಮಾ ರಿಲೀಸ್ ಆಗುತ್ತಿರುವ ಹಿನ್ನೆಲೆಯಲ್ಲಿ ನಟ ವಿನೋದ್ ಪ್ರಭಾಕರ್ ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಉರುಳು ಸೇವೆ ಮಾಡಿದ್ದಾರೆ.
ರಾಯರ ದರ್ಶನದ ಬಳಿಕ ರಾಯಚೂರಿನ ಆಂಜನೇಯ ಸ್ವಾಮಿ ದೇವಾಲಯದಲ್ಲೂ ವಿನೋದ್ ಪ್ರಭಾಕರ್ ಆಂಜನೇಯ ಸ್ವಾಮಿ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ.
ನಟ ಪುನೀತ್ ರಾಜಕುಮಾರ್,ಸುದೀಪ್, ಶಿವರಾಜ್ ಕುಮಾರ್ ಇದೇ ಆಂಜನೇಯ ಸ್ವಾಮಿ
ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದೀಗ ಮಾದೇವ ಸಿನೆಮಾ ಬಿಡುಗಡೆಯಾಗುತ್ತಿದ್ದು, ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡ್ತಿದ್ದಾರೆ.
ಶ್ರೀಧರ್‌ಗೆ ಹುಡುಗಿಯರ ಸಹವಾಸ ಇತ್ತು..ಶ್ರೀಧರ್ ಸಾವಿನ ಬಳಿಕ ಪತ್ನಿ Audio ವೈರಲ್!
ನಾನು ಯಾವುದೇ ದೇವಸ್ಥಾನಕ್ಕೂ ಹೋದ್ರೂ ಅಲ್ಲಿನ ಪದ್ದತಿ ಫಾಲೋ ಮಾಡ್ತೀನಿ. ಕುಕ್ಕೆ ಸುಬ್ರಮಣ್ಯಕ್ಕೂ ಹೋದಾಗ ಅಲ್ಲಿಯೂ ಮಾಡಿದ್ದೇ. ನಮ್ಮ ತಂದೆಯವರಿದ್ದಾಗಲೇ ಉರುಳು ಸೇವೆ ಮಾಡೋದಕ್ಕೆ ಬೇಡಿಕೊಂಡಿದ್ದೆ. ರಾಯರ ಮಠಕ್ಕೆ ಬರೋಕೆ ಆಗಿರ್ಲಿಲ್ಲ. ಮೊದಲನೇ ಬಾರಿ ಬಂದಿರುವ ಹಿನ್ನೆಲೆಯಲ್ಲಿ ಉರುಳು ಸೇವೆ ಸಲ್ಲಿಸಿದ್ದೇನೆ. ಗುರುಬಲ ಅಲ್ಲಿಂದಲೇ ಶುರುವಾಗುತ್ತೆ. ನಾನು ಬಾಬಾ ಹಾಗೂ ರಾಯರ ಭಕ್ತ. ಪ್ರಮೋಷನ್‌ಗಿಂತಲೂ ದೇವರ ಆಶೀರ್ವಾದ ಮುಖ್ಯ ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.
ಅವಕಾಶ ಸಿಕ್ಕರೆ ಮಾಡ್ತೇನೆ
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ವಿವಾದದ ಬಗ್ಗೆ ಎಲ್ಲರೂ ಮಾತನಾಡ್ತಿದ್ದಾರೆ. ನಂದಿನಿ ಹಾಲಿಗೆ ಪುನೀತ್ ಸರ್ ಬ್ರಾಂಡ್ ಅಂಬಾಸಿಡರ್ ಆಗಿದ್ರು. ನಮ್ಮಲ್ಲೂ ಈ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ಚಿತ್ರರಂಗದಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗ್ತಿದೆ. ನಮ್ಮ ಕರ್ನಾಟಕದಲ್ಲಿ ನಾವು ಮಾಡದೇ ಇನ್ನೇನು. ಖಂಡಿತವಾಗಿಯೂ ಅವಕಾಶ ಸಿಕ್ರೆ ಮಾಡ್ತೇನೆ ಎಂದಿದ್ದಾರೆ.