ಬೆಂಗಳೂರು: ಜಮ್ಮು–ಕಾಶ್ಮೀರದ ಅನಂತಪುರ ಜಿಲ್ಲೆಯ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಮೂವರು ಕರ್ನಾಟಕದವರು. ಅದರಲ್ಲಿ ಮೂಲತಃ ಆಂಧ್ರದವರಾಗಿದ್ದ ಮಧುಸೂದನ್ ರಾವ್ ಅವರು,
ಬೆಂಗಳೂರಿನಲ್ಲಿ ರಿಚಸ್ ಗಾರ್ಡನ್ನಲ್ಲಿ ವಾಸಿಸುತ್ತಿದ್ದರು. ಭಾನುವಾರವಷ್ಟೇ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಾಶ್ಮೀರ ಪ್ರವಾಸ ತೆರಳಿದ್ದರಂತೆ. ಬೆಂಗಳೂರಿನ ರಾಮಮೂರ್ತಿನಗರ ನಿವಾಸಿಯಾಗಿದ್ದ ಮಧುಸೂದನ್ ಕೇವಲ 2-3 ವರ್ಷಗಳ ಹಿಂದಷ್ಟೇ ಇಲ್ಲೊಂದು ಡೂಪ್ಲೆಕ್ಸ್ ಮನೆ ಕಟ್ಟಿಕೊಂಡು ವಾಸವಾಗಿದ್ದರು,
Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!
ಹೆಂಡತಿಯೊಂದಿಗೆ ಏರಿಯಾದಲ್ಲಿ ವಾಕ್ ಮಾಡುತ್ತಿದ್ದ ಮಧುಸೂದನ್ ಸ್ನೇಹಜೀವಿಯಾಗಿದ್ದರು ಎಂದು ಅವರ ನೆರೆಹೊರೆಯವರಾದ ಹಿರಿಯ ನಾಗರಿಕರೊಬ್ಬರು ಹೇಳಿದ್ದಾರೆ.