ಚಿಕ್ಕೋಡಿ: ಪಾಕಿಸ್ತಾನ ವಿರುಧ್ದ ಯುದ್ಧದ ಗೆಲುವಿಗಾಗಿ ಭಾರತೀಯ ಸೈನಿಕರಗಾಗಿ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ಗರ್ಭಗುಡಿಯ ಮುಂಭಾಗದಲ್ಲಿ ಮಹಾಮೃತ್ಯುಂಜಯ ಹೋಮ ಹಾಗೂ ಜಯಾದಿ ಹೋಮವನ್ನು ಮಾಡಲಾಯಿತು. ಭಾರತ ಹಾಗೂ ಪಾಕಿಸ್ತಾನ ದೇಶಗಳ ಮಧ್ಯೆ ಸಮರ ಪ್ರಾರಂಭವಾಗಿದೆ.
ಭಾರತದ ಸೈನಿಕರಿಗೆ ಯಾವುದೇ ರೀತಿಯಾದ ತೊಂದರೆ ಆಗಬಾರದು, ಅವರ ಜೀವಕ್ಕೆ ಆಪತ್ತು ಬರಬಾರದು ಎನ್ನುವ ಉದ್ದೇಶದಿಂದ ಶ್ರೀ ಸಿದ್ದಲಿಂಗೇಶ್ವರ ಗುರುಕುಲ ಪಾಠಶಾಲೆಯ ಮುಖ್ಯೋಪಾಧ್ಯರಾದ ಶ್ರೀಶೈಲ ಶಾಸ್ತ್ರಿಗಳ ನೇತೃತ್ವದಲ್ಲಿ ಪಾಠಶಾಲೆಯ ಮಕ್ಕಳು,
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ವೇದ ಪಂಡಿತರು ಸೇರಿಕೊಂಡು ಜಯಾಧಿ ಹೋಮ ಹಾಗೂ ಮಹಾಮೃತ್ಯುಂಜಯ ಹೋಮವನ್ನು ಮಾಡಲಾಯಿತು.ಬಳಿಕ ಭಾರತೀಯ ಸೈನ್ಯಕ್ಕೆ ಜಯವಾಗಲಿ ಎಂದು ವೀರಭದ್ರೇಶ್ವರ ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ರೇಣುಕ ದೇವರು,ಅಭಿಷೇಕ ದೇವರು,ನರಸಗೌಡ ಕಮತೆ,ಅಡವಯ್ಯ ಅರಳಿಕಟ್ಟಿಮಠ,ಮನೋಹರ ಫುಠಾಣೆ,ಮುತ್ತು ಮಠದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.