Close Menu
Ain Live News
    Facebook X (Twitter) Instagram YouTube
    Friday, June 27
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಮಹಾನಟಿ ಯಾನ; ಹೇಗಿದ್ದವು ಲೀಲಾವತಿ ಆರಂಭದ ದಿನಗಳು..?

    By AIN AuthorDecember 9, 2023
    Share
    Facebook Twitter LinkedIn Pinterest Email
    Demo

    ನೋವಿನ ಅಗ್ನಿಕುಂಡದಲ್ಲಿ ಬೆಂದು, ನೊಂದು ತಾವು ಉಳಿದು, ಮಗನನ್ನೂ ಉಳಿಸಿ ಬೆಳೆಸಿ ಇಲ್ಲೀವರೆಗೆ ಸಾಗಿಬಂದಿದ್ದ ಲೀಲಾವತಿಯವರು, ಈಗ ಕಾಲನ ಕರೆಗೆ ಓಗೊಟ್ಟು ಮಗನನ್ನು ಜಗತ್ತಿನ ಕೈಗಿಟ್ಟು ಹೊರಟು ಹೋಗಿದ್ದಾರೆ. ತಾಯಿಯನ್ನು ಕಳೆದುಕೊಂಡ ವಿನೋದ್ ರಾಜ್ ನೋವು ಕೇವಲ ಅವರೊಬ್ಬರದ್ದಲ್ಲ.. ಎಲ್ಲರದ್ದೂ..

    ನಾಗಕನ್ನಿಕೆಯಾಗಿ ಚಂದನವಕ್ಕೆ ನಟಿಯ ಪದಾರ್ಪಣೆ

    ರಂಗಭೂಮಿಯಲ್ಲಿದ್ದ ಲೀಲಾವತಿಯವರು 1949 ರಲ್ಲಿ, ಶಂಕರ್ ನಾಗ್ ಅಭಿನಯದ ನಾಗಕನ್ನಿಕೆ ಸಿನಿಮಾದಲ್ಲಿ ಸಖಿಯ ಪಾತ್ರದ ಮೂಲಕ ಚಂದನವನಕ್ಕೆ ಪ್ರವೇಶ ಮಾಡ್ತಾರೆ. ಬಟ್​​​ ಇದು ಅವರ ನಟನಾ ಮೆರುಗಿನ ಆರಂಭವಷ್ಟೇ. ಅವರ ನಿಜವಾದ ಮೆರುಗು ಹೆಣ್ಣಿನ ಮಾಂಗಲ್ಯದ ಮಹತ್ವ ಸಾರುವುದರಿಂದ ಶುರುವಾಗುತ್ತೆ. ಹೌದು ಲೀಲಾವತಿಯವ್ರು ಮೊದಲು ನಾಯಕಿಯಾಗಿ ಕಾಣಿಸಿಕೊಂಡಿದ್ದ ಅಚ್ಚ ಕನ್ನಡದ ಚಿತ್ರ ‘ಮಾಂಗಲ್ಯ ಯೋಗ’.
    ಮೇರು ನಟ ಕಿರೀಟ.. ಡಾ.ರಾಜ್ ಕುಮಾರ್ ಲೀಲಾವತಿ ಮ್ಯಾಜಿಕ್​​​ ಅದು ನಟನೆಗೆ ಒಂದು ಭೂಷಣ. ಈ ಇಬ್ಬರ ಜೋಡಿ ಚಂದನವನಕ್ಕೆ ಅಂದ ತಂದವರು. ಡಾ. ರಾಜ್​​ ಮತ್ತು ಲೀಲಾವತಿ ಅವ್ರ ಮೊದಲ ಜೋಡಿ. ರಣಧೀರ ಕಂಠೀರವ. ಈ ಜೋಡಿಯ ಅಸಲಿ ಸಿನಿಮಾ ಅಂದ್ರೆ ರಾಣಿ ಹೊನ್ನಮ್ಮ. ಈ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ನಾಡಿನ ಮೂಲೆ ಮೂಲೇಗೂ ಖ್ಯಾತಿ ಗಳಿಸಿಬಿಡ್ತು.

    ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಅವರ ಹಲವಾರು ಚಿತ್ರಗಳ ನಾಯಕಿಯಾದರು. ಅದೆಷ್ಟೋ ಸಿನಿಮಾಗಳಲ್ಲಿ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದವರು ಲೀಲಾವತಿ.

    ನಟನೆಯಲ್ಲಿ ಅಭಿನೇತ್ರಿ.. ನಟರಾಜನ ರೂಪಕ್ಕೆ ಸ್ತ್ರೀ ರೂಪ

    ಆ ಮಹಾನಟಿಯ ‘ಲೀಲಾ’ ಜಾಲ ಬರೀ ಯೌನಕ್ಕೆ ನಿಲ್ಲುವಂತದ್ದಾಗಿರಲಿಲ್ಲ. 70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ಮತ್ತೊಂದು ಪಯಣ ಶುರು ಮಾಡಿದ್ರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ.. ಹೀಗೆ ಒಂದಲ್ಲ ಎರಡಲ್ಲ.. ನಾನಾ ಬಗೆಯ ಪೋಷಕ ಪಾತ್ರಗಳಲ್ಲಿ ನಟಿಸಿ ಅಮ್ಮ ನಿನಗೆ ಸಾಟಿ ಯಾರಿಲ್ಲ ಅನಿಸಿಕೊಂಡಿದ್ದವರು. ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಸಿನಿಮಾಗಳಲ್ಲಿನ ಅವರ ನಟನೆ ಈಗಲೂ ಕಾಡುತ್ತಲೇ ಇರುತ್ತೆ. ಮುಂದೆಯೂ ಕಾಡುತ್ತೆ.

    ಲೀಲಾವತಿ ಅವರು ಬರೀ ಕನ್ನಡ ಅಷ್ಟೇ ಅಲ್ಲ. ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದವರು. ಕನ್ನಡದಲ್ಲಿ ಮಾತ್ರವೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅನೇಕ ನಟರನ್ನೇ ಮೀರಿಸಿದ್ದಾರೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ‘ಡಾ.ರಾಜಕುಮಾರ್ ಪ್ರಶಸ್ತಿಯನ್ನ 1999-2000 ಸಾಲಿನಲ್ಲಿ ಲೀಲಾವತಿಗೆ ಕೊಟ್ಟಿದ್ದಾರೆ.

    2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡಲಾಗಿತ್ತು. 2006 ರ ರಲ್ಲಿ ಅವರ ಮಗ ವಿನೋದ್​​​​ ರಾಜ್​​​ರ ಕನ್ನಡದ ಕಂದ ಎನ್ನುವ ಸಿನಿಮಾದಲ್ಲಿ ನಟಿಸಿ.. 2009 ರಲ್ಲಿ ಯಾರದು ಎಂಬ ಸಿನಿಮಾದಲ್ಲಿ ಅವರ ಕೊನೆಯ ನಟನೆ ಇತ್ತು. 50 ವರ್ಷಗಳ ಬಣ್ಣದ ಬದುಕನ್ನು ಮುಗಿಸಿ ನಂತರ ಮಗನೇ ಸರ್ವಸ್ವ ಅಂತ ದಿನಗಳನ್ನ ಸವೆಸಿ.. ಹಾಸಿಗೆ ಹಿಡಿದು.. ನಿನ್ನೆ ಇಹಲೋಕ ತ್ಯಜಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಡ್ರಗ್ಸ್ ಕೇಸ್: ತಮಿಳು ನಟ ಕೃಷ್ಣ ಬಂಧನ – ನಟಿಯರ ಮೇಲೂ ಪೊಲೀಸರ ಕಣ್ಣು

    June 26, 2025

    Sourav Ganguly Biopic: ಸೌರವ್ ಗಂಗೂಲಿ ಬಯೋಪಿಕ್’ಗೆ ಹೀರೋ ಫಿಕ್ಸ್..! ದಾದಾ ಆಗಿ ಮಿಂಚಲಿದ್ದಾರೆ ಬಾಲಿವುಡ್ ನಟ

    June 26, 2025

    Esha Gupta: ಹಾರ್ದಿಕ್ ಪಾಂಡ್ಯ ಜೊತೆಗಿನ ಡೇಟಿಂಗ್ ಸುದ್ದಿಗೆ ಬಾಲಿವುಡ್ ನಟಿ ಹೇಳಿದ್ದೇನು..?

    June 25, 2025

    ಹಂಸಲೇಖ ‘ಓಕೆ’ ಸಿನಿಮಾಗೆ ಕ್ರೇಜಿಸ್ಟಾರ್ ಸಾಥ್: ನಿರ್ದೇಶನಕ್ಕಿಳಿದ ನಾದಬ್ರಹ್ಮ

    June 24, 2025

    Ajith kumar: ಹೊಸ ಲುಕ್’ನಲ್ಲಿ ನಟ ಅಜಿತ್ ಕುಮಾರ್: ಯಾವ ಸಿನಿಮಾ ಗೊತ್ತಾ..?

    June 24, 2025

    ಕೇಂದ್ರ ಸಚಿವರಿಗೆ ಸಂಕಷ್ಟ: ವಿವಾದದಲ್ಲಿ ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ..! ಕಾರಣವೇನು ಗೊತ್ತಾ..?

    June 24, 2025

    ಹಿಂದಿಯ ಖ್ಯಾತ ಸೀರಿಯಲ್ ಶೂಟಿಂಗ್ ಸೆಟ್ ನಲ್ಲಿ ಭೀಕರ ಬೆಂಕಿ ಅವಘಡ: ಅರ್ಧಕ್ಕೆ ನಿಲ್ಲುತ್ತಾ ಧಾರವಾಹಿ?

    June 23, 2025

    ʼಡೆವಿಲ್‌ʼ ಕ್ರೇಜಿ ಅಪ್‌ಡೇಟ್..ಯಾವಾಗ ಡಿಬಾಸ್‌ ʼದರ್ಶನʼ?

    June 23, 2025

    ವಿಜಯ್‌ ದೇವರಕೊಂಡ ವಿರುದ್ಧ FIR ದಾಖಲೆ..ಅರೆಸ್ಟ್‌ ಆಗ್ತಾರಾ ರಶ್ಮಿಕಾ ಮಂದಣ್ಣ ಸ್ನೇಹಿತ?

    June 23, 2025

    ಡಿಮ್ಯಾಂಡ್ ಕಳೆದುಕೊಂಡ್ರಾ ನ್ಯಾಷನಲ್ ಕ್ರಷ್!? ದಿಢೀರ್ ಸಂಭಾವನೆ ಕುಸಿತ?

    June 22, 2025

    ಪವರ್ ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್..’ಹರಿ ಹರ ವೀರ ಮಲ್ಲು ರಿಲೀಸ್ ಡೇಟ್‌ ಫಿಕ್ಸ್!

    June 21, 2025

    ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ 22 ಲಕ್ಷ ವಂಚನೆ!

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.