Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಹಾರಾಷ್ಟ್ರ ಸಿಎಂ ಆಲಮಟ್ಟಿ ಎತ್ತರದ ಬಗ್ಗೆ ತಕರಾರು ಮಾಡಿರುವುದು ಅಸಮಂಜಸ ಮತ್ತು ರಾಜಕೀಯ ಪ್ರೇರಿತ: ಬೊಮ್ಮಾಯಿ

    By Author AINJune 5, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಮಹಾರಾಷ್ಟ್ರ ಸಿಎಂ ಆಲಮಟ್ಟಿ ಜಲಾಶಯದ ಎತ್ತರದ ಬಗ್ಗೆ ತಕರಾರು ಮಾಡಿರುವುದು ಅಸಮಂಜಸ ಮತ್ತು ರಾಜಕೀಯ ಪ್ರೇರಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ಆಲಮಟ್ಟಿ ಸಂಪೂರ್ಣ ಕೃಷ್ಣಾ ಜಲಾನಯನ ಪ್ರದೇಶದ ಒಂದು ಪ್ರಮುಖ ನೀರು ಸಂಗ್ರಹ ಮತ್ತು ವಿತರಣೆಯ ವಾಟರ್ ಗ್ರಿಡ್ ಆಗಿದೆ. ಉತ್ತರ ಕರ್ನಾಟಕದ ಜೀವನದಿಗೆ ಹೃದಯ ಭಾಗವಾಗಿದೆ.

    ನಿತ್ಯ ಮೊಸರಿಗೆ ಈ ಪುಡಿ ಬೆರೆಸಿ ತಿಂದ್ರೆ ವಾರದಲ್ಲೇ ಕರಗುತ್ತೆ ಬೊಜ್ಜು! ನೀವು ಒಮ್ಮೆ ಟ್ರೈ ಮಾಡಿ!

    ಆಲಮಟ್ಟಿ ಎತ್ತರದ ಬಗ್ಗೆ ಕರ್ನಾಟಕದ ಮೂಲ ಕೃಷ್ಣಾ ಜಲಾನಯನ ಯೋಜನೆಯಲ್ಲಿ ಅಳವಡಿಸಿದೆ. ಮತ್ತು ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಕೊಟ್ಟಿದೆ. ಅದರ ಪ್ರಕಾರ 524.25 ಮೀಟರ್ ಎಂಬುದು ಮೂಲ ಯೋಜನೆಯಲ್ಲಿ ಇದ್ದು ತದ ನಂತರ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ತಕರಾರು ಆದಮೇಲೆ ಕೆಡಬ್ಲುಟಿ 1 ನೀರನ್ನು ಉಪಯೋಗ ಮಾಡಲು 519.6 ಮೀಟರ್ ಗೆ ಸೀಮಿತಗೊಳಿಸಿ ಉಪಯೋಗಿಸಲು ಸುಪ್ರೀಂ ಕೂಡ ಒಪ್ಪಿದೆ.

    ಮತ್ತು ಸ್ಕಿಂ ಬಿ.ಯಲ್ಲಿ ಕೆಡಬ್ಲುಡಿಟಿ 2 ( ಕೃಷ್ಣಾ ವಾಟರ್ ಡಿಸ್ಪ್ಯೂಟ್ ಟ್ರಿಬ್ಯುನಲ್ 2) ನಲ್ಲಿ ನಮಗೆ ನೀರು ಹಂಚಿಕೆಯಾಗಿರುವ 173 ಟಿಎಂಸಿಯನ್ನು 519 ರಿಂದ 524 ರಲ್ಲಿ ಪಡೆದುಕೊಳ್ಳಬಹುದೆಂದು ಕೆಡಬ್ಲುಡಿಟಿ 2 ಅಂತಿಮ ಟ್ರಿಬ್ಯುನಲ್ ಆದೇಶದಲ್ಲಿದೆ ಎಂದು ತಿಳಿಸಿದ್ದಾರೆ. ಕೆಡಬ್ಲ್ಯುಡಿ ಟ್ರಿಬ್ಯುನಲ್ ಸ್ವತಂತ್ರವಾಗಿ ಹೈಡ್ರಾಲಾಜಿಕಲ್ ಸ್ಟಡಿ ಮಾಡಿಸಿ 524 ಮೀಟರ್ ಗೆ ಏರಿಸಿದರೂ ಕೂಡ ಕೊಲ್ಲಾಪುರ ಸಾಂಗ್ಲಿ ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಯಾವುದೇ ಭಾಗ ಮುಳುಗಡೆಯಾವುದಿಲ್ಲ ಎಂದು ಅಂತಿಮವಾಗಿ ಟ್ರಿಬ್ಯುನಲ್ ತೀರ್ಪು ಕೊಟ್ಟಾಗಿದೆ.

    ಇದನ್ನು ಮಹಾರಾಷ್ಟ್ರ ಎಲ್ಲಿಯೂ ಕೂಡ ಕಾನೂನಾತ್ಮಕವಾಗಿ ಪ್ರಶ್ನಿಸಿಲ್ಲ. ಅಲ್ಲದೇ ಕೆಡಬ್ಲುಡಿಟಿ 2 ನೊಟಿಫಿಕೇಶನ್ ಮಾಡಬೇಕೆಂದು ಕರ್ನಾಟಕಕ್ಕಿಂತ ಮೊದಲೇ ಸುಪ್ರೀಂ ಕೊರ್ಟ್ ಗೆ ಮಹಾರಾಷ್ಟ್ರ ಹೋಗಿದೆ. ಅಲ್ಲದೆ 2005 ರಲ್ಲಿ ಪ್ರವಾಹ ಆದಾಗ ಅದು ಆಲಮಟ್ಟಿ ಹಿನ್ನೀರಿನಿಂದ ಆಗಿಲ್ಲ ಎಂದು ಅವತ್ತಿನ ಕೇಂದ್ರ ಜಲ ಆಯೋಗ ಕೂಡ ತೀರ್ಪು ನೀಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆಲಮಟ್ಟಿ ಡ್ಯಾಂ ನಿರ್ಮಾಣ ಆಗುವ ಮುಂಚೆಯೇ 1960-70 ರ ದಶಕದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸಾಂಗ್ಲಿಯಲ್ಲಿ ಪ್ರವಾಹ ಆಗಿರುವುದು ಗಮನಾರ್ಹ ಎಂದು ತಿಳಿಸಿದ್ದಾರೆ.

    ಇಷ್ಟೆಲ್ಲಾ ಪ್ರಕ್ರಿಯೆ ಆದ ಮೇಲೆ ಈಗ ಮತ್ತೆ ಆಲಮಟ್ಟಿ ಎತ್ತರದ ಬಗ್ಗೆ ಮಹಾರಾಷ್ಟ್ರ ಸಿಎಂ ತಕರಾರು ತೆಗೆದಿರುವುದು ಅಸಮಂಜಸ ಮತ್ತು ಅಲ್ಲಿಯ ಎರಡು ಜಿಲ್ಲೆಯ ರಾಜಕೀಯ ಒತ್ತಡಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಈ ನಿಲುವು ತೆಗೆದುಕೊಳ್ಳಲು ಸಾದ್ಯವಿದೆ‌. ಹೀಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಂಪೂರ್ಣ ಸತ್ಯವನ್ನು ತಿಳಿಸಬೇಕು. ಅಲ್ಲದೆ ರಾಜ್ಯ ಸರ್ಕಾರ ಪುನರ್ ವಸತಿ ಮತ್ತು ಪುನರ್ ನಿರ್ಮಾಣ (ಆರ್ ಆಂಡ್ ಆರ್) ಕೆಲಸ ತ್ವರಿತಗತಿಯಲ್ಲಿ ತೆಗೆದುಕೊಳ್ಳಬೇಕು.

    ಇಲ್ಲದಿದ್ದರೆ 173 ಟಿಎಂಸಿ ನಮ್ಮ ನೀರಿನ ಹಕ್ಕನ್ನು ನಾವೇ ಗಂಡಾಂತರಕ್ಕೆ ನೂಕಿದಂತೆ ಆಗುತ್ತದೆ‌. ಈ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಬೆರೆಸದೆ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ ಕೇಂದ್ರ ಸರ್ಕಾರವೂ ಕೂಡ ನಡೆದಿರುವ ಎಲ್ಲ ಘಟನಾವಳಿಗಳನ್ನು, ಆದೇಶಗಳನ್ನು ಪರಿಸಿಲಿಸಿ ಕರ್ನಾಟಕದ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    RCB ಖರೀದಿಸಲು ಅದೊಂದೇ ಕಾರಣ.. ಹೊರತು ಕ್ರಿಕೆಟ್ ಮೇಲಿನ ಪ್ರೀತಿಯಿಂದಲ್ಲ: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ!

    June 6, 2025

    ಮೈಸೂರು ರಸ್ತೆಯಲ್ಲಿ ಬಿಎಂಟಿಸಿ ಬಸ್ ಅಪಘಾತ: 10 ಕ್ಕೂ ಹೆಚ್ಚು ಮಂದಿಗೆ ಗಾಯ!

    June 6, 2025

    ಆರ್ ಸಿಬಿಗೆ ಮತ್ತೆ ಆಘಾತ: ಬೆಂಗಳೂರಿನಲ್ಲಿ ಮತ್ತೊಂದು FIR ದಾಖಲು!

    June 6, 2025

    ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ!

    June 6, 2025

    ನೂಕು ನುಗ್ಗಲಿಗೆ ಕೊಹ್ಲಿ ಕಾರಣ: ಬೆಂಗಳೂರಿನಲ್ಲಿ ವಿರಾಟ್ ವಿರುದ್ಧ ದೂರು ದಾಖಲು!

    June 6, 2025

    ಅಲ್ಲಾ ರೀ.. ನಾನೇನ್ ಕ್ರೈಂ ಮಾಡಿದ್ದೀನಿ ಅಂತ ರಾಜೀನಾಮೆ ಕೊಡ್ಬೇಕು? – ಡಿಕೆ ಶಿವಕುಮಾರ್ ಪ್ರಶ್ನೆ!

    June 6, 2025

    Chinnaswamy Stampede: KSCA ವಿರುದ್ಧ ಬಲವಂತದ ಕ್ರಮ ಬೇಡ – ಬಿಗ್ ರಿಲೀಫ್ ನೀಡಿದ ಹೈಕೋರ್ಟ್!

    June 6, 2025

    ಕಾಂಗ್ರೆಸ್-BJPಯವರು ಒದ್ರೆ ಒದ್ದಿಸಿಕೊಳ್ಳಬೇಕು, ಅವರ ಮನೆ ಮುಂದೆ ಹೋಗಿ ಕೈ ಕಟ್ಟಿ ನಿಲ್ಲಬೇಕು: ಹೆಡ್ ಕಾನ್ಸ್ಟೇಬಲ್ ನರಸಿಂಹರಾಜು

    June 6, 2025

    ಕಾಲ್ತುಳಿತ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಹೋರಾಟ ಮುಂದುವರಿಯಲಿದೆ – ಆರ್.ಅಶೋಕ್

    June 6, 2025

    ಡಿ.ಕೆ ಶಿವಕುಮಾರ್ ಡಿಸಿಎಂ ಅಲ್ಲ, ರೀಲ್ಸ್ ಮಿನಿಸ್ಟರ್: ಪೊಲೀಸರ ತಲೆ ದಂಡಕ್ಕೆ ನಿಖಿಲ್ ಕುಮಾರಸ್ವಾಮಿ ಖಂಡನೆ

    June 6, 2025

    ಕಾಲ್ತುಳಿತ ಪಕರಣ: CM ರಾಜಕೀಯ ಕಾರ್ಯದರ್ಶಿ ಗೋವಿಂದರಾಜುಗೆ ಕೊಕ್!

    June 6, 2025

    Chinnaswamy Stampede: ಗುಪ್ತಚರ ಇಲಾಖೆ ವೈಫಲ್ಯ ಹಿನ್ನೆಲೆ: ADGP ಹೇಮಂತ್ ನಿಂಬಾಳ್ಕರ್ ವರ್ಗಾವಣೆ!

    June 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.