ತ್ರಿಬಲ್ ಆರ್ ಸೂಪರ್ ಸಕ್ಸಸ್ ಬಳಿಕ ಎಸ್ ಎಸ್ ರಾಜಮೌಳಿ ಟಾಲಿವುಡ್ ಪ್ರಿನ್ಸ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಸೈಲೆಂಟ್ ಆಗಿ ಚಿತ್ರದ ಮುಹೂರ್ತ ಮುಗಿಸಿ ಜಕ್ಕಣ್ಣ ತಂಡ ಕಟ್ಟಿಕೊಂಡು ಶೂಟಿಂಗ್ ಅಖಾಡಕ್ಕೆ ಇಳಿದಿದ್ದರು. ಶೂಟಿಂಗ್ ಹೊರಡೋದಿಕ್ಕೂ ಮುನ್ನ ಮಹೇಶ್ ಬಾಬು ಪಾಸ್ ಪೋರ್ಟ್ ಕಸಿದುಕೊಂಡು, ಸಿಂಹವನ್ನು ಬೋನ್ ಗೆ ಹಾಕಿರುವ ಫೋಟೋವನ್ನು ಹಂಚಿಕೊಂಡಿದ್ದರು. ಆದರೀಗ ಸಿಂಹ ಬೋನಿಂದ ಹೊರಬಂದಿದ್ದು, ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದೆ.
ಮಹೇಶ್ ಬಾಬು ಆಗಾಗ್ಗೆ ಫ್ಯಾಮಿಲಿ ಜೊತೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಹೀಗಾಗಿ ರಾಜಮೌಳಿ ಸಿಂಹವನ್ನು ಬೋನಿನ ಒಳಗೆ ಹಾಕಿದಂತೆ ಪಾಸ್‌ಪೋರ್ಟ್ ಸೀಜ್ ಆಗಿದೆ ಎಂದು ತೋರಿಸುವಂತೆ ವೀಡಿಯೋ ಪೋಸ್ಟ್ ಮಾಡಿದ್ದರು. ಮಹೇಶ್ ಬಾಬುನ ಸಿಂಹದೊಂದಿಗೆ ಹೋಲಿಸಿದ್ದರು. ಪಾಸ್‌ಪೋರ್ಟ್ ತನ್ನ ಬಳಿ ಇದೆ ಅಷ್ಟು ಸುಲಭವಾಗಿ ವಿದೇಶಕ್ಕೆ ಹೋಗಲು ಬಿಡಲ್ಲ ಎನ್ನುವಂತೆ ಆ ವೀಡಿಯೋದಲ್ಲಿ ತೋರಿಸಿದ್ದರು. ಆದರೀಗ ಪ್ರಿನ್ಸ್ ಪಾಸ್ ಪೋರ್ಟ್ ಸಿಕ್ಕಿದ್ದು, ಫ್ಯಾಮಿಲಿ ಜೊತೆ ವಿದೇಶಕ್ಕೆ ಹಾರಿದ್ದಾರೆ.
‘ಎಸ್‌ಎಸ್‌ಎಂಬಿ 29’ ಚಿತ್ರದ ಶೂಟಿಂಗ್ ಶುರುವಾಗಿದ್ದು, ಮಹೇಶ್ ಬಾಬು ನಾಯಕನಾಗಿರುವ ಈ ಚಿತ್ರದಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶೂಟಿಂಗ್ ಭರದಿಂದ ಸಾಗಿದ್ದು, ಚಿತ್ರತಂಡಕ್ಕೆ ರಾಜಮೌಳಿ ಕೆಲ ನಿಯಮಗಳನ್ನೂ ಹಾಕಿದ್ದಾದೆ. ಈ ಹಿಂದೆ, ನಿರ್ದೇಶಕ ರಾಜಮೌಳಿ ಅವರು ಹೀರೋ ಮಹೇಶ್ ಬಾಬು ಪಾಸ್ಪೋರ್ಟ್ ತೆಗೆದುಕೊಂಡು, ವಿದೇಶ ಪ್ರವಾಸಕ್ಕೆ ಹೋಗದಂತೆ ಕಡಿವಾಣ ಹಾಕಿದ್ದರು. ಆದರೀಗ ಮಹೇಶ್ ಬಾಬು ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಅಲ್ಲದೇ, ಕ್ಯಾಮರಾಗಳಿಗೆ ತಮ್ಮ ಪಾಸ್ಪೋರ್ಟ್ ತೋರಿಸಿ ಮುನ್ನಡೆದಿದ್ದಾರೆ.
‘ಎಸ್‌ಎಸ್‌ಎಂಬಿ 29’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಓಡಿಸ್ಸಾದಲ್ಲಿ ಶೂಟಿಂಗ್ ನಡೆಸಲಾಗಿತ್ತು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ರಾಜಮೌಳಿ ಮಹೇಶ್ ಕಾಂಬೋ ಈ ಬಾರಿ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುತ್ತಿದೆ. ಹೀಗಾಗಿ ನಾಯಕ ಮಹೇಶ್ ಬಾಬು ಹೆಚ್ಚಿನ ಕಾಲ್ ಶೀಟ್ ನೀಡಬೇಕು. ಅದರಲ್ಲಿಯೂ ಜಕ್ಕಣ್ಣನ ಸಿನಿಮಾಗಳಲ್ಲಿ ಕೆಲಸ ಮಾಡುವ ತಾರೆಯರು ಮೂರ್ನಾಲ್ಕು ವರ್ಷ ವ್ಯಯಿಸಬೇಕು.