ಬೆಂಗಳೂರು: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ 8 ಎಂಆರ್ಐ ಉಪಕರಣಗಳ ಖರೀದಿಯ ಟೆಂಡರ್ನಲ್ಲಿ ಬೃಹತ್ ಅಕ್ರಮ ನಡೆಯುತ್ತಿದೆ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ರೌಡಿ ಚಟುವಟಿಕೆ; ಮೈಸೂರಿನಲ್ಲಿ ವಿಶೇಷ ಪೋಲಿಸ್ ತಂಡ ರಚನೆಗೆ ತೇಜಸ್ವಿ ಮನವಿ
ನಿಯಮದಂತೆ ಸರ್ಕಾರ ಅತ್ಯಾಧುನಿಕ ಉಪಕರಣಗಳನ್ನು ತೆಗೆದುಕೊಳ್ಳಬೇಕು. ಆದರೆ, ಈ ಟೆಂಡರ್ನಲ್ಲಿ ರ್ನಿದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಟೆಂಡರ್ನಲ್ಲಿ ಬಿಡ್ ಸಲ್ಲಿಸಿರುವ ಫಿಲಿಪ್ಸ್ ಕಂಪನಿಯ ಹಳೆಯ ಮೆಷಿನ್ ತೆಗೆದುಕೊಳ್ಳಲು ಅಧಿಕಾರಿಗಳು ಒಳಗೊಳಗೆ ಶಾಮೀಲಾಗಿದ್ದಾರೆ. ಫಿಲಿಪ್ಸ್ ಕಂಪನಿಯ ಸಲ್ಲಿಸಿರುವ ಸ್ಪೆಷಿಫಿಕೇಷನ್ ಅನ್ನು ಟೆಂಡರ್ನಲ್ಲಿಯೇ ಯಥವತ್ತಾಗಿ ನಮೂದಿಸಿದ್ದಾರೆ. ಇದೇ ಕಂಪನಿಯ ಸ್ಪೆಷಿಫಿಕೇಷನ್ ಮತ್ತು ಟೆಂಡರ್ನಲ್ಲಿ ನಮೂದಿಸಿರುವ ಸ್ಪೆಷಿಫಿಕೇಷನ್ ಒಂದೇ ರೀತಿಯಲ್ಲಿದೆ. ಈ ಟೆಂಡರ್ನಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್ ಮೂಗಿನ ಕೆಳಗಡೆ ನಡೆಯುತ್ತಿದೆ. ಈ ಟೆಂಡರ್ ಮೊತ್ತ 90 ಕೋಟಿ ರೂ.ಇದೆ ಎಂದು ದಾಖಲೆಗಳ ಸಮೇತ ಆರೋಪಿಸಿದರು.
ಜಾಗತಿಕ ಮಟ್ಟದ ಟೆಂಡರ್ ಇದಾಗಿದೆ. ಆದರೆ, ಈ ಟೆಂಡರ್ನ್ನು ತರಾತುರಿಯಲ್ಲಿ ಮುಗಿಸಲು ಅಧಿಕಾರಿಗಳು ಯತ್ನಿಸಿದ್ದಾರೆ.ರೋಗಿಗಳಿಗೆ ವೇಗವಾಗಿ ಗುಣಮಟ್ಟ ಸೇವೆ ನೀಡುವುದಕ್ಕಾಗಿಯೇ ನಿರ್ದೇಶನಾಲಯ ಹಿಂದೇ ಅತ್ಯಾಧುನಿಕ ಎಂಆರ್ಐ ಉಪಕರಣ ಖರೀದಿಸಿತ್ತು. ಹೊಸ ಉಪಕರಣದಲ್ಲಿ ಬರೀ ಅರ್ಧ ಗಂಟೆಯಲ್ಲೇ ಸ್ಕ್ಯಾನ್ ಮಾಡಿದರೆ ಎಲ್ಲ ಕಾಯಿಲೆ ಪತ್ತೆಯಾಗುತ್ತದೆ. ಆದರೆ, ಕಂಪನಿಯ ಹಳೆಯ ಸ್ಟಾಕ್ ಕ್ಲೀಯರ್ ಮಾಡುವ ಉದ್ದೇಶದಿಂದ ಹಳೆಯ ತಂತ್ರಜ್ಞಾನದ ಎಂಆರ್ಐ ಉಪಕರಣ ಖರೀದಿಯಲ್ಲಿ ಬರೋಬ್ಬರಿ 1 ಗಂಟೆ ಮಲುಗಬೇಕಾಗುತ್ತದೆ. ಹೆಚ್ಚು ಹೊತ್ತು ಉಪಕರಣದಲ್ಲಿ ಮಲಗಿದರೆ ರೋಗಳಿಗೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ, ಈ ಟೆಂಡರ್ನ್ನು ರದ್ದುಪಡಿಸಬೇಕು. ಕಾರ್ಯಕ್ರಮ ಹೆಸರಿನಲ್ಲಿ ಕೆಲಸವನ್ನು ಸಚಿವರು ಮತ್ತು ಅಧಿಕಾರಿಗಳು ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.