ಬೆಳಗಾವಿ : ಪಾರ್ಟಿ ಮಾಡುವ ನೆಪದಲ್ಲಿ ಕರೆದು ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಖಾನಾಪುರ ತಾಲೂಕಿನ ಬಲಒಗಿ ಗ್ರಾಮದ ಶಿವನಗೌಡ ಪಾಟೀಲ್ (43) ಕೊಲೆಯಾದ ವ್ಯಕ್ತಿ. ಮನೆಯವರಿಗೆ ಹುಬ್ಬಳ್ಳಿಗೆ ಹೋಗಿ ಬರೋದಾಗಿ ಹೇಳಿದ್ದ ಶಿವನಗೌಡ ರಾತ್ರಿಯಾದ್ರೂ ಮನೆಗೆ ಬರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆದರೆ ಶಿವನಗೌಡ ಪತ್ತೆಯಾಗಿಲ್ಲ.
ನ್ಯಾಯಾಧೀಶರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಇಂದು ಬೆಳಗ್ಗೆ ನಿರ್ಜನ ಪ್ರದೇಶದಲ್ಲಿ ಶವ ಕಂಡು ರೈತರೊಬ್ಬರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪರಿಚಯಸ್ಥರೇ ಕರೆದು ಕುಡಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆತನ ಕೊಂದು ಬೈಕ್ ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹವನ್ನು ರವಾನನಿಸಲಾಗಿದೆ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.