Close Menu
Ain Live News
    Facebook X (Twitter) Instagram YouTube
    Wednesday, May 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Mandya: ಮದ್ದೂರಿನಲ್ಲಿ ನಡೆದ ಬೃಹತ್ ತಿರಂಗಾ ಯಾತ್ರೆಗೆ ಪಕ್ಷಾತೀತವಾಗಿ ಬೆಂಬಲ!

    By AIN AuthorMay 21, 2025
    Share
    Facebook Twitter LinkedIn Pinterest Email
    Demo

    ಮಂಡ್ಯ :- ಭಯೋತ್ಪಾದಕರ ವಿರುದ್ಧ ನಡೆದ ಆಪರೇಷನ್ ಸಿಂಧೂರದಲ್ಲಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸಿದ ವೀರ ಯೋಧರಿಗೆ ಪ್ರತಿಯೊಬ್ಬರು ಆತ್ಮಸ್ತೈರ್ಯ ತುಂಬುವ ಜತೆಗೆ ಅವರ ಪರವಾಗಿ ನಿಲ್ಲಬೇಕು ಎಂದು ಮನ್ಮುಲ್ ನಿದೇರ್ಶಕ ಎಸ್.ಪಿ.ಸ್ವಾಮಿ ತಿಳಿಸಿದರು.

    ಕಾಂಗ್ರೆಸ್‌ನವರ ಹೃದಯ ಬಗೆದರೆ ಪಾಕಿಸ್ತಾನ ಕಾಣುತ್ತೆ, ಇದು ಸಾಬೀತಾಗಿದೆ: ಬಿಸಿ ಪಾಟೀಲ್!

    ಮದ್ದೂರು ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದ ಆವರಣದಲ್ಲಿ ಬುಧವಾರ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ತಿರಂಗಾ ಧ್ವಜ ಯಾತ್ರೆಯ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಅಮಾಯಕ ಹಿಂದೂ ಪ್ರವಾಸಿಗರನ್ನು ಕೊಂದ ಉಗ್ರರಿಗೆ ದೇಶದ ವೀರ ಸೈನಿಕರು ತಕ್ಕ ಉತ್ತರವನ್ನು ನೀಡಿ ಇಡೀ ಪ್ರಪಂಚಕ್ಕೆ ದೇಶದ ಸೈನಿಕರು ನಾವು ಎಷ್ಟು ಶಕ್ತಿ ಶಾಲಿಗಳು ಎಂಬುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದು ಸೈನಿಕರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

    ದೇಶದ ಅಖಂಡತೆ ಮತ್ತು ಭದ್ರತೆಗೆ ಧಕ್ಕೆ ಉಂಟಾದಾಗ ನಮ್ಮ ದೇಶ ಕಾಪಾಡುವ ಹೊಣೆ ಸೈನಿಕರದ್ದಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದ್ದರಿಂದ ಸೈನಿಕರಿಗೆ ಗೌರವ ಸಲ್ಲಿಸಲಿಕ್ಕೆ ಈ ಯಾತ್ರೆ ಆಯೋಜಿಸಲಾಗಿದ್ದು, ತಿರಂಗಾ ಯಾತ್ರೆಗೆ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ದೇಶಾಭಿಮಾನಿಗಳು ಭಾಗವಹಿಸಿರುವುದು ಸಂತೋಷ ತಂದಿದೆ ಎಂದರು.

    ಮಾಜಿ ಸೈನಿಕರ ಸಂಘದ ಜಿಲಾಧ್ಯಕ್ಷ ಮಲ್ಲರಾಜು ಮಾತನಾಡಿ, 26 ಮಹಿಳೆಯರ ಸಿಂಧೂರ ಅಳಿಸಿದ ಉಗ್ರಗ್ರಾಮಿಗಳಿಗೆ ದೇಶದ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ದಿಟ್ಟ ನಿರ್ಧಾರ ತೆಗೆದುಕೊಂಡು ದೇಶದ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದು ಮೆಚ್ಚುಗೆ ವಿಷಯ ಎಂದರು.

    ದೇಶದ ಸೈನಿಕರು ಯುದ್ದ ಮಾಡಿದ ಸಂದರ್ಭದಲ್ಲಿ ಹಾಗೂ ಶತ್ರು ರಾಷ್ಟ್ರಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ನಮ್ಮ ದೇಶದವರೆ ಕೆಲವು ಗಣ್ಯರು ಸಾಕ್ಷಿ ಕೇಳುವುದು, ಕುಹಕದ ಮಾತುಗಳನ್ನು ಆಡುವುದನ್ನು ಬಿಟ್ಟು ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

    ದೇಶಕ್ಕಾಗಿ ಮಡಿದ ಯೋಧರನ್ನು ಮೊದಲು ಅವರ ಶವವನ್ನು ಮನೆಗೆ ಕಳುಹಿಸುತ್ತಿರಲಿಲ್ಲ. ಗಡಿಯಲ್ಲೇ ಅಂತ್ಯಸಂಸ್ಕಾರ ಮಾಡಲಾಗುತಿತ್ತು. ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫನಾಂಡಿಸ್ ಅವರು ಯುದ್ದ ಭೂಮಿಯಲ್ಲಿ ವೀರ ಮರಣ ಹೊಂದಿದ ಮೃತ ಸೈನಿಕರನ್ನು ಅವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದನ್ನು ಯಾರು ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಒಂದು ವೇಳೆ ಯುದ್ದ ನಡೆದರೆ ನಾವು ಯುದ್ಧ ಭೂಮಿಗೆ ಹೋಗಿ ಮಾಜಿ ಸೈನಿಕರು ಯುದ್ಧ ಮಾಡಲು ಸಿದ್ದವಾಗಿದ್ದೇವೆ ಎಂದರು.

    ವೈದ್ಯನಾಥಫುರ ಗ್ರಾಮದ ಶ್ರೀ ಕದಂಬ ಜಂಗಮ ಮಠದ ಫೀಠಾಧ್ಯಕ್ಷ ರೇಣುಕಾಶಿವಚಾರ್ಯ ಸ್ವಾಮೀಜಿ ಮಾತನಾಡಿ, ಪೆಹಲ್ಗಾಮ್ ನಲ್ಲಿ ಉಗ್ರರು ಪ್ರವಾಸಿಗಳನ್ನು ಕೊಂದ ಘಟನೆ ನೋವು ತಂದಿದೆ. ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ದೇಶಕೋಸ್ಕರ ಹೋರಾಟ ಮಾಡಲು ಮತ್ತು ಸೈನಿಕರ ಪರವಾಗಿ ನಿಲ್ಲಲು ಪ್ರತಿಯೊಬ್ಬರು ಸಿದ್ದರಾಗಬೇಕು.
    ರಾಜಕಾರಣಿಗಳು ಅಧಿಕಾರಕ್ಕಾಗಿ ರಾಜಕೀಯ ಮಾಡಲಿ. ಆದರೆ ದೇಶದ ಜನರ ಹಾಗೂ ಸೈನಿಕರ ವಿಷಯ ಬಂದಾಗ ಎಂದಿಗೂ ರಾಜಕೀಯ ಮಾಡಬಾರದು. ದೇಶದ ಹಿತ ದೃಷ್ಠಿಯ, ಭದ್ರತೆಯ ಬಗ್ಗೆ ಚಿಂತಿಸಬೇಕು ಎಂದು ಸಲಹೆ ನೀಡಿದರು.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ದೈವಶಕ್ತಿ ಇದೆ. ಪ್ರಪಂಚವೇ ಭಾರತ ಕಡೆ ನೋಡಲು ಪ್ರಮುಖ ಕಾರಣ ಮೋದಿ. ಭಾರತ ದೇಶವನ್ನು ಕಂಡರೆ ಇತರೆ ದೇಶಗಳು ನಡಗುವಂತೆ ನಮ್ಮ ವೀರ ಸೈನಿಕರ ಮಾಡಿದ್ದಾರೆ. ನಮ್ಮಲ್ಲಿ ಅತ್ಯಾಧುನಿಕ ಆಯುಧಗಳು, ಯಂತ್ರೋಪಕರಗಳು, ಯುದ್ದ ವಿಮಾನಗಳು ಇರುವುದೇ ಇದಕ್ಕೆ ಕಾರಣ ಎಂದರು.

    ಇದೇ ವೇಳೆ ಮಾಜಿ ಸೈನಿಕ ಉದಯ್ ಕುಮಾರ್, ಪ್ರೊ.ರಾಜು, ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರ ರಾವ್ ಮಾತನಾಡಿದರು.

    ಇನ್ನು ಬಹಿರಂಗ ಸಭೆಗೂ ಮೊದಲು ಪಟ್ಟಣದ ಪ್ರವಾಸಿ ಮಂದಿರದ ವೃತ್ತದಿಂದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ವರೆಗೆ ಮಾಜಿ ಸೈನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಗತಿಪರ ಸಂಘಟನೆಗಳು ಸೇರಿದಂತೆ ದೇಶಪ್ರೇಮಿಗಳು, ಪಕ್ಷಾತೀತವಾಗಿ ಕೈಯಲ್ಲಿ ಧ್ವಜ ಮತ್ತು ಸುಮಾರು 300 ಅಡಿಯ ತಿರಂಗಾ ಧ್ವಜ ಹಿಡಿದು ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.

    ಇದೇ ವೇಳೆ ಚಂದೂಪುರದ ಶ್ರೀ ಶಿವಲಿಂಗಶಿವಚಾರಿ ಸ್ವಾಮಿಜಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಕರವೇ ತಾಲೂಕು ಅಧ್ಯಕ್ಷ ಅಶೋಕ್, ಬ್ರಾಹ್ಮಣ ಮಹಸಭಾದ ಅಧ್ಯಕ್ಷ ಸುಧೀರ್ ಕುಮಾರ್, ಜಿಪಂ ಮಾಜಿ ಸದಸ್ಯ ಬೋರಯ್ಯ, ಮಾಜಿ ಸೈನಿಕರಾದ ಸಿಪಾಯಿ ಶ್ರೀನಿವಾಸ್, ಮಿಲ್ಟ್ರಿ ಕುಮಾರ್, ಸಿ.ಕೆ.ಸತೀಶ್, ವೆಂಕಟರಾಮು, ಮುತ್ತು, ಬಸವರಾಜ, ಕೆ.ಟಿ.ಚಂದ್ರು, ಶಿವಕುಮಾರ್, ಶಿವಲಿಂಗು, ಜಯರಾಮೇಗೌಡ ಇದ್ದರು.

    ವರದಿ : ಗಿರೀಶ್ ರಾಜ್ ಮಂಡ್ಯ

    Post Views: 5

    Demo
    Share. Facebook Twitter LinkedIn Email WhatsApp

    Related Posts

    ಶಿಕ್ಷಣದ ಜೊತೆಗೆ ಸಂಸ್ಕಾರವು ಮುಖ್ಯ:: ಶ್ರೀ ಡಾ. ಮಹಾಂತಪ್ರಭು ಸ್ವಾಮೀಜಿಗಳು!

    May 21, 2025

    ಕಾಂಗ್ರೆಸ್‌ನವರ ಹೃದಯ ಬಗೆದರೆ ಪಾಕಿಸ್ತಾನ ಕಾಣುತ್ತೆ, ಇದು ಸಾಬೀತಾಗಿದೆ: ಬಿಸಿ ಪಾಟೀಲ್!

    May 21, 2025

    ಪೂರ್ವ ಮುಂಗಾರು ಮಳೆ: ಅಧಿಕಾರಿ, ಸಿಬ್ಬಂದಿ ಕೇಂದ್ರ ಸ್ಥಾನ ಬಿಡದಂತೆ ಡಿಸಿ ವಾರ್ನಿಂಗ್!

    May 21, 2025

    ದೊಡ್ಡಬಳ್ಳಾಪುರ: ಬಮೂಲ್ ನಿರ್ದೇಶಕ ಚುನಾವಣೆಯಲ್ಲಿ ಬದ್ಧ ವೈರಿಗಳ ಮೈತ್ರಿ

    May 21, 2025

    ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕದ್ದು ಪರಾರಿಯಾದ ದುಷ್ಕರ್ಮಿಗಳು..!

    May 21, 2025

    Booker Prize 2025: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಹಿತಿ ಬಾನು ಮುಷ್ತಾಕ್ ಯಾರು..? ಅವರು ಕೃತಿಗಳು ಯಾವುದು?

    May 21, 2025

    ಕೌಟುಂಬಿಕ ಕಲಹ: ಚಾಕುವಿನಿಂದ ಇರಿದು ಗಂಡನಿಂದಲೇ ಪತ್ನಿಯ ಹತ್ಯೆ

    May 21, 2025

    SSLC ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ..!

    May 21, 2025

    ಕನ್ನಡ ಮಾತಾಡಲ್ಲ ಎಂದಿದ್ದ SBI ಬ್ಯಾಂಕ್‌ ಮ್ಯಾನೇಜರ್‌ ಎತ್ತಂಗಡಿ!

    May 21, 2025

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಪ್ರಕರಣ ಮುಚ್ಚಿ ಹಾಕಲು ಜಿಲ್ಲಾ ಉಸ್ತುವಾರ ಸಚಿವರ ಮಧ್ಯಸ್ಥಿಕೆ ಎಂದ ಖೂಬಾ

    May 21, 2025

    ಸ್ಟಾರ್ಟ್ ಆಗದೇ ಹೈವೇಯಲ್ಲಿ ನಿಂತ KSRTC ಬಸ್ ತಳ್ಳಿದ ಮಹಿಳೆಯರು

    May 21, 2025

    ಸೀಟ್‌ ಬ್ಲಾಕಿಂಗ್‌ ಹಗರಣ: ಐಟಿ ಬಳಿಕ, ಇದೀಗ ಪರಮೇಶ್ವರ್‌ ಗೆ ಇಡಿ ಶಾಕ್

    May 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.