ಮಂಡ್ಯ : ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬಾಲಕಿಯನ್ನ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬಾಲಕಿ ಎಳೆದೊಯ್ದಿದ್ದ ಪ್ರಕರಣದ A1 ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಜಿತ್ ಬಂಧಿತ ಆರೋಪಿ.
ದಾಳಿ-ಪ್ರತಿದಾಳಿ: ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ.. ಟ್ರಂಪ್ ವಿರುದ್ಧ ಇರಾನ್ ಪ್ರತೀಕಾರ!
ಪ್ರಕರಣದ ಕುರಿತು ಮಾಧ್ಯಮಗಳು ವರದಿ ಬಿತ್ತರಿಸಿತ್ತು. ವರದಿ ಬಿತ್ತರಿಸಿದ ಬೆನ್ನಲ್ಲೆ ಎಚ್ಚೆತ್ತುಕೊಂಡು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಅದರಂತೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ತಲೆಮರಿಸಿಕೊಂಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ:
ಬಜಾಜ್ ಫೈನಾನ್ಸ್ ನಿಂದ ಟಿ.ನರಸೀಪುರದ ನವೀನ್ ತಾಯಿ ಸಾಲಪಡೆದಿದ್ದರು. ತಾಯಿ ಸಾಲ ಕಟ್ಟದ್ದಕ್ಕೆ ನವೀನ್ ಗೆ ಹಣ ಕಟ್ಟಲು ತಾಕೀತು. ಮಾಡಿದ್ದಾರೆ. ಅಲ್ಲದೇ ನವೀನ್ ಇಲ್ಲದ ವೇಳೆ ಮನೆ ಬಳಿ ಬಂದು ಮೈಕ್ರೋ ಸಿಬ್ಬಂದಿ ಅವಾಜ್ ಹಾಕಿದ್ದಾರೆ. ಬಳಿಕ ನವೀನ್ ಪುತ್ರಿಯನ್ನ ಸಿಬ್ಬಂದಿ ಕರೆದೋಯ್ದಿದ್ದಾರೆ.
ಈ ಸಂಬಂಧ
ದೂರು ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದ.
ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ನಿನ್ನೆ ರಾತ್ರಿ ಬಂಧಿಸಿ ಕರೆತರಲಾಯಿತು.