ಮಂಡ್ಯ : ಪಾಪ ಬಿ.ಆರ್.ಪಾಟೀಲ್ ಇವತ್ತು ತಮ್ಮ ಹಿರಿತನದ ಅಸಹಾಯಕತೆ ಹೇಳಿದ್ದಾರೆ. ಇವರ ಪಕ್ಷದಲ್ಲಿ ಅವರ ಶಾಸಕರಿಗೆ ಹೇಗೆ ನಡೆಸಿಕೊಳ್ತಿದ್ದಾರೆ ಅನ್ನೋದು ಈಗ ಮಾಧ್ಯಮದ ಮೂಲಕ ಗೊತ್ತಾಗ್ತಿದೆ ಎಂದು ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಜೆಡಿಎಸ್ ಸಭೆಯಲ್ಲಿ ಬಿ.ಆರ್. ಪಾಟೀಲ್ ಹೇಳಿಕೆ ಪ್ರಸ್ತಾಪಿಸಿದ ನಿಖಿಲ್, ಸಿದ್ದರಾಮಯ್ಯರನ್ನು ಲಾಟರಿ ಸಿಎಂ ಎಂದು ನಿಮ್ಮ ಶಾಸಕರೇ ಬಿರುದುಕೊಟ್ಟಿದ್ದಾರೆ. ನಮ್ಮ ಪಕ್ಷದ ವಿರುದ್ದ ಸಿಎಂ ಸಿದ್ದರಾಮಯ್ಯ ನಮ್ಮದು ಪಾರದರ್ಶಕ ಪಕ್ಷ ಹೇಳಿಕೆ ಕೊಟ್ಟಿದ್ದಾರೆ. ಇದು ನಿಮಗೆ ಮಾತೃಪಕ್ಷ ಅದು ನೆನಪಿರಲಿ. ನೀವು ಮಾತೃಪಕ್ಷಕ್ಕೆ ಮೋಸ ಮಾಡಿ ಹೋಗಿದ್ದೀರಾ ಇದು ನೆನಪಿರಲಿ. ನೀವು ಆ ಮೂಲಕ ಮಾತೃ ಪಕ್ಷಕ್ಕೆ ಮಾಡಿದ ದ್ರೋಹ ಹೆತ್ತ ತಾಯಿಗೆ ಮಾಡಿದ ದ್ರೋಹಕ್ಕೆ ಸಮ. ನೀವು ಇಲ್ಲಿ ಉಂಡು ತಿಂದು ಹೋದವರು ಇದೀಗ ನಮ್ಮ ಪಕ್ಷದ ವಿರುದ್ದ ಮಾತನಾಡ್ತೀರಾ ಎಂದು ಕಿಡಿಕಾರಿದ್ದಾರೆ.
ಇನ್ನೂ ಇಂದು ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ನಿಖಿಲ್ ಕುಮಾರಸ್ವಾಮಿ ಭರ್ಜರಿ ರೋಡ್ ಶೋ ನಡೆಸಿದ್ದು, ಈ ವೇಳೆ ಕಾರ್ಯಕರ್ತರು ಕೊಬ್ಬರಿ ಹಾರ ಮತ್ತು ಲಡ್ಡು ಹಾರ ಹಾಕಿದ್ದಾರೆ. ಅಲ್ಲದೇ ಕಾರ್ಯಕ್ರಮದ ವೇದಿಕೆಯಲ್ಲಿ ಟಗರು ಮತ್ತು ಬೆಳ್ಳಿ ಗದೆ ನೀಡಿ, ಸನ್ಮಾನಿಸಿದರು.