ಮಂಡ್ಯ:- ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೌರ್ಯ ಒಂದು ನಡೆದಿದೆ.
KSRTC ಪ್ರಯಾಣಿಕರಿಗೆ ಸಿಹಿ ಸುದ್ದಿ: ಯುಗಾದಿಗೆ 2,000 ಹೆಚ್ಚುವರಿ ಬಸ್ ವ್ಯವಸ್ಥೆ!
ಶಾಲೆಗೆ ಸರಿಯಾಗಿ ಬರುತ್ತಿಲ್ಲ ಎಂದು 4ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರು ಬಾಸುಂಡೆ ಬರುವ ಹಾಗೆ ಹೊಡೆದ ಆರೋಪ ಕೇಳಿಬಂದಿದೆ. ಶಿಕ್ಷಕರಾದ ರೂಪಾ ಹಾಗೂ ಪ್ರಸನ್ನ ವಿರುದ್ಧ ಥಳಿಸಿದ ಆರೋಪವಿದೆ. ಸಮವಸ್ತ್ರ ಬಿಚ್ಚಿ ನೋಡಿದಾಗ ವಿದ್ಯಾರ್ಥಿ ಮೈತುಂಬ ಬಾಸುಂಡೆ ಮೂಡಿದೆ. ಶಿಕ್ಷಕರ ವಿರುದ್ಧ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗೆ ಹೊಡೆದಿರುವ ಶಿಕ್ಷಕರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.