ಪಾಟ್ನಾ: ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಸ್ವಯಂ ಘೋಷಿತಾ ಏರಿಯಾ ಕಮಾಂಡರ್ ಸಾವನ್ನಪ್ಪಿದ್ದಾನೆ. ಬಿಹಾರದ ಬಂಕಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಎನ್‌ಕೌಂಟರ್ ನಡೆಸಿದ್ದು, 35 ವರ್ಷದ ಮಾವೋವಾದಿಯೊಬ್ಬ ಮೃತಪಟ್ಟಿದ್ದಾನೆ.
ರಮೇಶ್ ತುಡು ಅಲಿಯಾಸ್ ಟೆಡುವಾ ಮೃತನಾಗಿದ್ದು, ಆತನ ಹತ್ಯೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈತ ಬಿಹಾರ ಮತ್ತು ಪಕ್ಕದ ಜಾರ್ಖಂಡ್‌ನಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ.
ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಫಲಕ್‌ನುಮಾ ಎಕ್ಸ್‌ಪ್ರೆಸ್ ರೈಲು ; ಪ್ರಯಾಣಿಕರು ಸೇಫ್
ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕಲೋಥರ್ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪೊಲೀಸರನ್ನು ಕಂಡ ತುಡು ಮತ್ತು ಅವರ ಸಹಚರರು ಗುಂಡು ಹಾರಿಸಲು ಪ್ರಾರಂಭಿಸಿದಾಗ ಎನ್ ಕೌಂಟರ್ ಏರ್ಪಟ್ಟಿತು.
ಕಟೋರಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅರವಿಂದ್ ರೈ ನೇತೃತ್ವದ ಪೊಲೀಸ್ ತಂಡವು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರಲ್ಲಿ ತುಡುಗೆ ಗಾಯಗಳಾಗಿದ್ದವು. ನಂತರ ಆತನನ್ನು ಕಟೋರಿಯಾದ ಸರ್ಕಾರಿ ರೆಫರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಮೃತಪಟ್ಟನು. ಅವನ ಸಹಚರರು ಬುಧಿ ಘಾಟ್ ಮತ್ತು ಕಲೋಥರ್ ನಡುವಿನ ಅರಣ್ಯದೊಳಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.