ಬೆಂಗಳೂರು: ಬೆಂಗಳೂರು ಗ್ರಾಮಾಂತರ ಪೋಲೀಸರ ಭರ್ಜರಿ ಕಾರ್ಯಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಇಬ್ಬರು ವಿದೇಶಿಗರನ್ನು ಬಂಧಿಸಿದ್ದಾರೆ. ಆರೋಪಿತರು ರೆಡಿಮೇಡ್ ಬಟ್ಟೆಗಳ ಪ್ಯಾಕ್‌ಗಳಲ್ಲಿ ಮತ್ತು ಶರ್ಟ್ ಪ್ಯಾಂಟ್‌ಗಳಿಗೆ ಬಳಸುವ ಕಾರ್ಡ್‌ಬೋರ್ಡ್‌ಗಳಲ್ಲಿ ಡ್ರಗ್ಸ್ ತುಂಬಿ ಮಾರಾಟ ಮಾಡುತ್ತಿದ್ದರು. ಬೇರೆಯವರ ಹೆಸರಿನಲ್ಲಿ ಮನೆ ಬಾಡಿಗೆಗೆ ಪಡೆದು, ಆ ಮನೆಯಲ್ಲಿಯೇ ಪ್ಯಾಕಿಂಗ್ ಮತ್ತು ಸರಬರಾಜು ಕೆಲಸಗಳನ್ನು ನಡೆಸುತ್ತಿದ್ದರೆನ್ನಲಾಗಿದೆ.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಅನುಮಾನ ಬರದಂತೆ ಆರೋಪಿತರು ಮನೆ ಹೊರಗೆ ಏರ್‌ಪೋರ್ಟ್ ಸೆಕ್ಯುರಿಟಿ ತರಹದ ಬಂದೋಬಸ್ತ್ ಕೂಡ ಮಾಡಿಕೊಂಡಿದ್ದರು. ಸದ್ಯ ರಾಜನಕುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮಾದಕ ವಸ್ತು ಜಾಲದಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.