ಮಂಡ್ಯ: ಕೇವಲ 23 ನಿಮಿಷಗಳಲ್ಲೇ ಪಾಕಿಸ್ತಾನದ ರಕ್ತಪಿಪಾಸುಗಳ ‘ಉಗ್ರ’ ನೆಲೆ ನಾಮಾವಶೇಷವಾಗಿವೆ. ಪಾಕಿಸ್ತಾನದ 9 ನೆಲೆಗಳನ್ನ ಟಾರ್ಗೆಟ್ ಮಾಡಿ 90ಕ್ಕೂ ಹೆಚ್ಚು ಉಗ್ರರನ್ನ ಭಾರತೀಯ ಸೇನೆ ಉಡಾಯಿಸಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿರುವ ಭಾರತೀಯ ಸೇನೆಗೆ ಇಡೀ ದೇಶದಾದ್ಯಂತ ಅಭಿನಂದಿಸಲಾಗುತ್ತಿದೆ.
ಅದರಂತೆ ಮಂಡ್ಯದಲ್ಲಿ ಸೈನಿಕರ ಕ್ಷೇಮಕ್ಕಾಗಿ ಗಣಪತಿ, ಮೃತ್ಯುಂಜಯ ಹೋಮ ಮಾಡುತ್ತಿದ್ದಾರೆ. ಹಿಂದೂ ಹಿತರಕ್ಷಣಾ ಸಮಿತಿ, ನಿವೃತ್ತ ಯೋಧರಿಂದ ಶನಿದೇವರ ದೇವಸ್ಥಾನದಲ್ಲಿ ಭಾರತದ ಯೋಧರಿಗೆ ಒಳಿತಾಗಬೇಕೇಂದು ಮೃತ್ಯುಂಜಯ ಹೋಮ ಮಾಡಿದ್ದಾರೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
ಪೂಜೆಯಲ್ಲಿ ನಿವೃತ್ತ ಯೋಧರ ಕುಟುಂಬಸ್ಥರು ಭಾಗಿಯಾಗಿದ್ದು, ಮುಂದೆ ನಡೆಯುವ ಯುದ್ಧದಲ್ಲಿ ಭಾರತೀಯ ಸೈನಿಕರಿಗೆ ಗೆಲುವು ಸಿಗಲಿ. ಭಾರತೀಯರ ಪ್ರಾಣಾಹಾನಿ ಆಗದಿರಲಿ ಹಾಗೂ ಭಯೋತ್ಪಾದನೆ ಕೃತ್ಯಗಳು ಅಂತ್ಯವಾಗಲಿ ಎಂಬ ಸಂಕಲ್ಪದೊಂದಿಗೆ ವಿಶೇಷ ಪೂಜೆ ಮಾಡಿದ್ದಾರೆ.
ಧಾರ್ಮಿಕ ಪರಿಷತ್ ಸದಸ್ಯರಾದ ನವೀನ್ ನೇತೃತ್ವದಲ್ಲಿ ನಡೆಯುತ್ತಿರುವ ಹೋಮ-ಹವನವಾಗಿದ್ದು, ಮಾಜಿ ಸೈನಿಕರಾದ ಭಾನುಪ್ರಕಾಶ್, ಮಂಟೆ ಲಿಂಗಾಚಾರ್, ಶಶಿಕುಮಾರ್ ಹಾಗೂ ರಮೇಶ್ ಹಾಗೂ ಕುಟುಂಬಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು.