ಯಾದಗಿರಿ: ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೀತಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ. ಮಹಿಳಾ ಕಾರ್ಮಿಕರ ಹೆಸರಿನಲ್ಲಿ ಖದೀಮರು ಜಾಬ್ ಕಾರ್ಡ್ ಪಡೆದು ನರೇಗಾ ಕೂಲಿ ಹಣ ಎಗರಿಸುತ್ತಿದ್ದಾರೆ.
ಹಣ ಎಗರಿಸಲು ಮೈ ತುಂಬ ಸೀರೆ ಧರಿಸಿ, ವಂಚಿಸಲಾಗುತ್ತಿದೆ. ಭ್ರಷ್ಟ ಅಧಿಕಾರಿಗಳೇ ಪುರುಷರಿಗೆ ಸೀರೆ ತೊಡಿಸಿ ಪೋಟೋ ಎನ್ಎಂಎಂಎಸ್ ಮಾಡಿದ್ದಾರೆ. ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದಲ್ಲಿ ಕೂಲಿ ಕಾರ್ಮಿಕರ ಹೆಸರಿನಲ್ಲಿ ಭಾರೀ ಗೋಲ್ಮಾಲ್ ನಡೀತಿದೆ.
ಕ್ಷುಲ್ಲಕ ವಿಚಾರಕ್ಕೆ ಗಲಾಟೆ ; ಬೆಲ್ಟ್ ನಿಂದ ಕುತ್ತಿಗೆಗೆ ಬಿಗಿದು ಹೊಡೆದಾಡಿಕೊಂಡ ಯುವಕರು
ಪೂಜಾರಿ ಎಂಬಾತನ ಹೊಲದ ಬಳಿ ನಾಲೆ ಹೂಳೆತ್ತುವ ಕಾಮಗಾರಿಯಲ್ಲಿ ಪೇಕ್ ಬಿಲ್ ಮಾಡಿದ್ದು, ನಕಲಿ ಪೋಟೋ ಎನ್ಎಂಎಂಎಸ್ ಮಾಡಿ ಬಿಲ್ ಪಡೆದಿದಾರೆ. ಕಾರ್ಮಿಕರ ಕೆಲಸದ ಹಾಜರಾತಿ ಪೊಟೋ ಅಪ್ಲೋಡ್ ಮಾಡಬೇಕಾಗಿತ್ತು. ಆದರೆ ಮಹಿಳೆಯರ ಹೆಸರಿನಲ್ಲಿ ಕೆಲಸ ಮಾಡದೇ ಪುರುಷರು ಸೀರೆ ಧರಿಸಿ ಹಣ ಕೊಳ್ಳೆ ಹೊಡೆದಿದ್ದಾರೆ ಎನ್ನಲಾಗಿದೆ. ಪಂಚಾಯತ್ ಇಲಾಖೆ ಬಿಎಫ್ಟಿ ಅಧಿಕಾರಿ ವಿರೇಶ ವಿರುದ್ಧ ಆರೋಪ ಕೇಳಿ ಬಂದಿದೆ.