ಹೈದರಾಬಾದ್:-ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ಜರುಗಿದೆ. ಮೃತರನ್ನು ಆಶಿಶ್ ರೆಡ್ಡಿ, ಅರ್ಷಿತ್ ರೆಡ್ಡಿ, 33 ವರ್ಷದ ತೇಜಸ್ವಿನಿ ಎಂದು ಗುರುತಿಸಲಾಗಿದೆ. ಮೊದಲಿಗೆ ಮಹಿಳೆಯು, ತೆಂಗಿನಕಾಯಿ ತುರಿಯುವ ಮಣೆಯಿಂದ ಮಕ್ಕಳಿಗೆ ಹೊಡೆದು ಕೊಲೆ ಮಾಡಿ, ಬಳಿಕ ತಾನೂ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜನಿವಾರ ಹಾಕಿದ್ದಕ್ಕೆ CET ಪರೀಕ್ಷೆ ನಿರಾಕರಣೆ: ಇದು ಅತ್ಯಂತ ಹೇಯ ಕೃತ್ಯ – ಟಿಎ ಶರವಣ ಆಕ್ರೋಶ!
7 ಪುಟಗಳ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ತೇಜಸ್ವಿನಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಪುತ್ರರಿಬ್ಬರ ಉಸಿರಾಟದ ತೊಂದರೆ ಹಾಗೂ ಪತಿಯ ಬೆಂಬಲದ ಕೊರತೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ನೋಟ್ನಲ್ಲಿ ಬರೆದಿದ್ದಾರೆ.