ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆ ಸಾಕಷ್ಟು ಮಹಿಳೆಯರಿಗೆ ಅನುಕೂಲವಾಗಿದೆ. ಕೆಲವರು ಇದೇ ಹಣದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಸಮಾಜಕ್ಕೂ ಅನುಕೂಲ ಮಾಡಿ ಮಾದರಿಯಾಗಿದ್ದಾರೆ.
ಆದರೆ ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಹಣ ಬಂದಿಲ್ಲ ಎಂದು ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಏಪ್ರಿಲ್ ತಿಂಗಳ ಹಣ ಶೀಘ್ರವೇ ಮಹಿಳೆಯ ಅಕೌಂಟ್ ಸೇರಲಿದೆ ಎಂದಿದ್ದಾರೆ.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ಏಪ್ರಿಲ್ ತಿಂಗಳ ಗೃಹ ಲಕ್ಷ್ಮಿ ಹಣ ಬಿಡುಗಡೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಏಪ್ರಿಲ್ ತಿಂಗಳ ಗೃಹ ಲಕ್ಷ್ಮಿ ಯೋಜನೆ ಹಣದ ಬಿಲ್ಲಿಂಗ್ ಕೂಡ ಆಗ್ತಿದೆ. ತಕ್ಷಣವೇ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವೆ ಹೇಳಿದ್ದಾರೆ.