Close Menu
Ain Live News
    Facebook X (Twitter) Instagram YouTube
    Thursday, June 26
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬಾಹ್ಯಾಕಾಶದಲ್ಲಿ ʼಬೀಜ ಮೊಳಕೆʼ ಅಧ್ಯಯನಕ್ಕೆ ನಾಂದಿ ಹಾಡಿದ ಧಾರವಾಡ: ಸಚಿವ ಪ್ರಲ್ಹಾದ ಜೋಶಿ

    By Author AINJune 26, 2025
    Share
    Facebook Twitter LinkedIn Pinterest Email
    Demo

    ನವದೆಹಲಿ: ಬಾಹ್ಯಾಕಾಶ ಕೃಷಿ ಮತ್ತು ಗಗನಯಾತ್ರಿಗಳ ಪೋಷಣೆಗೆ ಅಂತಾರಾಷ್ಟ್ರೀಯವಾಗಿ ಕೈಗೊಂಡಿರುವ ಮಹತ್ತರ ಅಧ್ಯಯನಕ್ಕೆ ಧಾರವಾಡದ ಅನನ್ಯ ಕೊಡುಗೆ ಸಲ್ಲುತ್ತಿದೆ. ವಿದ್ಯಾಕಾಶಿ ಆಗಿರುವ ಧಾರವಾಡ ಬಾಹ್ಯಾಕಾಶವರೆಗೆ ವಿಜ್ಞಾನ ಸ್ಫೂರ್ತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸುದೀರ್ಘ 41 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಭಾರತೀಯ ಗಗನಯಾನಿ ತೆರಳುತ್ತಿರುವುದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿ. ಅಂತೆಯೇ ಇದರಲ್ಲಿ ಐಐಟಿ ಧಾರವಾಡ ಮತ್ತು ಯುಎಎಸ್ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಸಹಯೋಗ ಇರುವುದು ಧಾರವಾಡಕ್ಕೆ ಹೆಮ್ಮೆಯ ಗರಿ ಮೂಡಿದೆ ಎಂದಿದ್ದಾರೆ.

    Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ? ಇಲ್ಲಿದೆ ನೋಡಿ ಉತ್ತರ

    ಧಾರವಾಡ ಐಐಟಿ ಹಾಗೂ ಕೃಷಿ ವಿಶ್ವವಿದ್ಯಾಲಯ ಸಂಶೋಧಕರು ಕೈಗೊಂಡಿರುವ ಮಹತ್ವದ ವಿಜ್ಞಾನ ಯೋಜನೆ ‘Sprouting in Space’ Ax-4 ಮಿಷನ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಪ್ರಯೋಗದಲ್ಲಿ ಹೆಸರುಕಾಳು ಮತ್ತು ಮೆಂತೆ ಬೀಜ ಬಾಹ್ಯಾಕಾಶದಲ್ಲಿ ಮೊಳೆಯುವ ಪ್ರಕ್ರಿಯೆ ನಡೆಸಲಾಗುತ್ತಿದೆ.

    ಗಗನಯಾತ್ರಿಗಳು ಈ ಬೀಜಗಳಿಗೆ ನೀರು ಸೇರಿಸಿ ಬೀಜ ಮೊಳೆಯುವ ಪ್ರಕ್ರಿಯೆ ನಡೆಸಲಿದ್ದಾರೆ. ಈ ಮೊಳಕೆ ಕಾಳು ಬಾಹ್ಯಾಕಾಶ ಯಾನಿಗಳಿಗೆ ತಾಜಾ ಮತ್ತು ಪೌಷ್ಠಿಕಾಂಶ ಆಹಾರ ಪೂರೈಸಲು ಸಹಾಯಕವಾಗಲಿದೆ. ಬಾಹ್ಯಾಕಾಶದಲ್ಲಿ ಬೀಜ ಮೊಳಕೆಯೊಡೆಯುವ ಇಂಥ ಅನನ್ಯ ಅಧ್ಯಯನದ ಅಂತರಾಷ್ಟ್ರೀಯ ಯೋಜನೆ-ಆಕ್ಸಿಯಮ್ ಮಿಷನ್ 4ನಲ್ಲಿ ಧಾರವಾಡ ಐಐಟಿ ಮತ್ತು ಧಾರವಾಡದ ಯುಎಎಸ್ ಕೃಷಿ ವಿಶ್ವವಿದ್ಯಾಲಯ ಕೊಡುಗೆ ಅಮೂಲ್ಯವಾಗಿದೆ.

    ಈ ಸಂಶೋಧನೆ ಭಾರತೀಯ ಗಗನಯಾತ್ರಿಗಳಿಗೆ ಸುದೀರ್ಘ ಅವಧಿ ಪೌಷ್ಠಿಕಾಂಶ ಆಹಾರ ಒದಗಿಸುಲು ನಾಂದಿ ಹಾಡುತ್ತಿದೆ. ಹೆಸರುಕಾಳು ಮತ್ತು ಮೆಂತ್ಯೆ ಭಾರತೀಯ ಆಹಾರ ಪದ್ಧತಿಯಲ್ಲಿ ವಿಶಿಷ್ಠವಾಗಿದ್ದು, ಹೇರಳ ಪೋಷಕಾಂಶಯುಳ್ಳದ್ದಾಗಿದೆ. ಬಾಹ್ಯಾಕಾಶದಲ್ಲಿ ಲಭ್ಯವಿರುವ ಸ್ಥಳ, ತೂಕ ಹಾಗೂ ಸಂಪನ್ಮೂಲಗಳ ಮಿತಿ ಗಮನದಲ್ಲಿಟ್ಟುಕೊಂಡು ಈ ರೀತಿ ಮೊಳಕೆ ಕಾಳು ಆಹಾರೋತ್ಪತ್ತಿಯ ನಾವೀನ್ಯತೆಗೆ ದಾರಿ ತೋರಿದೆ ನಮ್ಮ ಧಾರವಾಡ.

    ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ.ರವಿಕುಮಾರ್ ಹೊಸಮನಿ ಮತ್ತು ಐಐಟಿ ಧಾರವಾಡದ ಡಾ.ಸುಧೀರ್ ಸಿದ್ದಾಪುರೆಡ್ಡಿ ಅವರು ಇದರ ಮುಂದಾಳತ್ವ ವಹಿಸಿದ್ದು, ದೇಶದ ವಿಜ್ಞಾನ ಕ್ಷೇತ್ರದಲ್ಲೇ ಗಮನ ಸೆಳೆದಿದ್ದಾರೆ. ಧಾರವಾಡ ಈಗ ಕೇವಲ ಶೈಕ್ಷಣಿಕ ನಗರಿ ಮಾತ್ರವಲ್ಲದೆ, ವಿಜ್ಞಾನ ಸೃಜನಶೀಲತೆಯ ಕೇಂದ್ರವಾಗಿಯೂ ಹೊರಹೊಮ್ಮುತ್ತಿದೆ ಎಂಬುದುಕ್ಕೆ ಇದು ನಿದರ್ಶನ. ಬಾಹ್ಯಾಕಾಶ ಕೃಷಿ ಮತ್ತು ಗಗನಯಾತ್ರಿಗಳ ಪೋಷಣೆಯಲ್ಲಿ ಇದು ಪ್ರಮುಖ ಹೆಜ್ಜೆಯಾಗಿದ್ದು, ಧಾರವಾಡ ನಾವೀನ್ಯತೆ ಮತ್ತು ವೈಜ್ಞಾನಿಕ ಪ್ರಗತಿಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇದು ನಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ

    Demo
    Share. Facebook Twitter LinkedIn Email WhatsApp

    Related Posts

    Shubhanshu Shukla: ನಡೆಯಲು ಕಲಿಯುತ್ತಿರುವ ಮಗುವಿನಂತೆ.. ಬಾಹ್ಯಾಕಾಶದಲ್ಲಿರುವ ಶುಭಾಂಶು ಶುಕ್ಲಾ ಕಳುಹಿಸಿದ ಮೊದಲ ಸಂದೇಶ!

    June 26, 2025

    Bus Falls Into River: ಅಲಕನಂದಾ ನದಿಗೆ ಬಿದ್ದ ಬಸ್: ಓರ್ವ ಸಾವು..! ಹಲವರು ನಾಪತ್ತೆ

    June 26, 2025

    Indian railways: RAC, ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲ್ವೆ ಇಲಾಖೆಯಿಂದ ಭಾರೀ ಬದಲಾವಣೆ

    June 26, 2025

    Home Loan: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಬೇಕೇ..? ಹಾಗಾದ್ರೆ ಈ ಬ್ಯಾಂಕ್’ಗಳ ಆಫರ್ ಬಗ್ಗೆ ತಿಳಿಯಿರಿ

    June 26, 2025

    ಹಾರಲು ಯಾರ ಅನುಮತಿ ಬೇಡ, ರೆಕ್ಕೆ ನಿಮ್ಮವು: ಖರ್ಗೆಗೆ ಶಶಿ ತರೂರ್‌ ಎದುರೇಟು!

    June 25, 2025

    ಶಶಿ ತರೂರ್‌ಗೆ ಟಾಂಗ್ ಕೊಟ್ಟ ಖರ್ಗೆ: ಕಾಂಗ್ರೆಸ್‌ಗೆ ದೇಶ ಮೊದಲು, ಕೆಲವರಿಗೆ ಮೋದಿ ಮೊದಲು!

    June 25, 2025

    ಸುಭಾಂಶು ಶುಕ್ಲಾ 140 ಕೋಟಿ ಜನರ ಆಕಾಂಕ್ಷೆಗಳನ್ನು ಹೊತ್ತಿದ್ದರು: ಪ್ರಧಾನಿ ಮೋದಿ

    June 25, 2025

    ಗುಜರಾತ್’ಗೆ 21 ಬಾರಿ ಬಾಂಬ್ ಬೆದರಿಕೆ: ಜೈಲಿನಲ್ಲಿ ಮಹಿಳಾ ಇಂಜಿನಿಯರ್ – ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

    June 25, 2025

    ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್

    June 25, 2025

    Shubhanshu Shukla: ಬಾಹ್ಯಾಕಾಶ ನೌಕೆಗೆ ಹೋಗುವ ಮುನ್ನ ತನ್ನ ನೆಚ್ಚಿನ ಹಾಡನ್ನು ಕೇಳಿದ ಸುಭಾಂಶು ಶುಕ್ಲಾ..!

    June 25, 2025

    Gold Rate: ಗುಡ್ ನ್ಯೂಸ್: ಚಿನ್ನದ ಬೆಲೆ ಇಳಿಕೆ – ಬೆಂಗಳೂರಲ್ಲಿ ಇಂದಿನ 10 ಗ್ರಾಂ ಬೆಲೆ ಎಷ್ಟಾಗಿದೆ ನೋಡಿ

    June 25, 2025

    ತುರ್ತು ಪರಿಸ್ಥಿತಿಯ ದಿನಗಳನ್ನು ಯಾವುದೇ ಭಾರತೀಯ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

    June 25, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.