ಹಾಲಿವುಡ್‌ನ ಸ್ಪೈ, ಆಕ್ಷನ್ ಥ್ರಿಲ್ಲರ್‌ಗಳು ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲೂ ಹಾಲಿವುಡ್ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ನಟನೆಯ ‘ಮಿಷನ್ ಇಂಪಾಸಿಬಲ್’ ಸೀರಿಸ್‌ಗಳೇ ಸಾಕ್ಷಿ. ಮೇ 17 ಹಾಲಿವುಡ್ ಸಿನಿಮಾ ಪ್ರಿಯರು ಕಾತುರದಿಂದ ಕಾಯುತ್ತಿದ್ದ ಮಿಷನ್ ಇಂಪಾಸಿಬಲ್ ಕೊನೆಯ ಸರಣಿ ಕೊನೆಗೂ ರಿಲೀಸ್ ಆಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಈ ಸಿನಿಮಾ ಭಾರತದಲ್ಲಿ ಸಿಕ್ಕಾಪಟ್ಟೆ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ.
ಇನ್ನೂ ಭಾರತದ ಬಾಕ್ಸ್ ಆಫೀಸ್ನಲ್ಲಿ ಹಾಲಿವುಡ್ ಸಿನಿಮಾ ಮಿಷನ್ ಇಂಪಾಸಿಬಲ್ ದಾಖಲೆ ಬರೆದಿದೆ. ವಿಶ್ವದ ನಂಬರ್ 1 ಜನಪ್ರಿಯ ನಟ ಟಾಮ್ ಕ್ರೂಸ್ ನಟನೆಯ ‘ಮಿಷನ್ ಇಂಪಾಸಿಬಲ್: ಫೈನಲ್ ರೆಕನಿಂಗ್’ ಸಿನಿಮಾ ನಿನ್ನೆ ಭಾರತದಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಅದಕ್ಕೆ ತಕ್ಕಂತೆ ‘ಮಿಷನ್ ಇಂಪಾಸಿಬಲ್’ ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ಮಾತ್ರವಲ್ಲದೆ, ಭಾರತದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಮಾತ್ರವಾಗಿದೆ.
ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ 17.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನೆನಪಿರಲಿ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಮೆಟ್ರೊ ಸಿಟಿ, ಟೈರ್ 1 ಸಿಟಿಗಳಲ್ಲಿ ಮಾತ್ರವೇ ಬಿಡುಗಡೆ ಆಗಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್ ಚೈನ್ಗಳಲ್ಲಿ ಮಾತ್ರವೇ ಬಿಡುಗಡೆ ಆದರೂ ಸಹ ಭಾರಿ ಮೊತ್ತವನ್ನು ಈ ಸಿನಿಮಾ ಕಲೆ ಹಾಕಿದೆ. ‘ಅವತಾರ್ 2’ ಸಿನಿಮಾ ಸಹ ಭಾರತದಲ್ಲಿ ಮೊದಲ ದಿನ ಇಷ್ಟು ದೊಡ್ಡ ಮೊತ್ತ ಕಲೆ ಹಾಕಿರಲಿಲ್ಲ.
ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಬಿಡುಗಡೆಗೆ ಒಂದು ದಿನ ಮುಂಚೆ ಬಿಡುಗಡೆ ಆಗಿದ್ದ ಜನಪ್ರಿಯ ಹಾಲಿವುಡ್ ಸಿನಿಮಾ ‘ಫೈನಲ್ ಡೆಸ್ಟಿನೇಷನ್’ 4.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕೆಲ ವಾರಗಳ ಮುಂಚೆ ಬಿಡುಗಡೆ ಆಗಿದ್ದ ಮಾರ್ವೆಲ್ನ ‘ಥಂಡರ್ಬೋಲ್ಟ್’ ಸಿನಿಮಾ ಮೊದಲ ದಿನ 3.50 ಕೋಟಿ ಗಳಿಕೆ ಮಾಡಿತ್ತು. ಬಾಲಿವುಡ್ನ ಸ್ಟಾರ್ ನಟ ಅಕ್ಷಯ್ ಕುಮಾರ್ ನಟನೆಯ ‘ಕೇಸರಿ 2’ ಸಿನಿಮಾ ಮೊದಲ ದಿನ ಗಳಿಸಿದ್ದು 7.80 ಕೋಟಿ ರೂಪಾಯಿಗಳು. ಅಜಯ್ ದೇವಗನ್ ನಟನೆಯ ‘ರೈಡ್ 2’ ಸಿನಿಮಾ ಮೊದಲ ದಿನ 18 ಕೋಟಿ ಗಳಿಸಿತ್ತು. ಇದಕ್ಕೆಲ್ಲ ಹೋಲಿಕೆ ಮಾಡಿದರೆ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾದ ಗಳಿಕೆ ದೊಡ್ಡ ಮಟ್ಟದಲ್ಲಿಯೇ ಇದೆ.