ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆಯಿಂದ ಹಾರ್ಟ್ ಅಟ್ಯಾಕ್ ಸಂಭವ ಹೆಚ್ಚಾಗಿದೆ. ನಮ್ಮ ಜೀವನ ಶೈಲಿ ಇದಕ್ಕೆ ಪ್ರಮುಖವಾದ ಕಾರಣವಾಗಿದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳದೆ ಹೋದರೆ ಅದರಿಂದ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತವೆ. ಆದರೆ ಸಕ್ಕರೆ ಕಾಯಿಲೆಯನ್ನು ಸರಿಯಾದ ರೀತಿಯಲ್ಲಿ ಹೇಗೆ ನಿಯಂತ್ರಣ ಮಾಡಿಕೊಳ್ಳುವುದು ಎನ್ನುವುದು ಹಲವರ ಗೊಂದಲ.
ಇದಕ್ಕಾಗಿ ಬೇರೆ ಬೇರೆ ಡಯಟ್ ಪದ್ಧತಿಗಳನ್ನು ಅನುಸರಿಸುತ್ತಾರೆ. ಆದರೂ ಕೂಡ ಕೆಲವೊಮ್ಮೆ ಪ್ರಯೋಜನಕ್ಕೆ ಬರುವುದಿಲ್ಲ. ಆದರೆ ವೈದ್ಯರು ಹೇಳುವ ಹಾಗೆ ಬೆಳಗಿನ ಸಮಯದಲ್ಲಿ ಈ ಟಿಪ್ಸ್ ಯಾರು ಫಾಲೋ ಮಾಡುತ್ತಾರೆ ಅವರಿಗೆ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗುತ್ತದೆ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಉಳಿಯುತ್ತದೆ ಎಂದು ತಿಳಿದು ಬಂದಿದೆ.
ದೇಹವು ರಕ್ತದಲ್ಲಿನ ಸಕ್ಕರೆಯನ್ನು ಸಂಸ್ಕರಿಸಲು ಸಾಧ್ಯವಾಗದಿದ್ದಾಗ ಮಧುಮೇಹ ಉಂಟಾಗುತ್ತದೆ. ಈ ಕಾಯಿಲೆ ಇರುವವರು ತಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಬೇಕು.
ಮಧುಮೇಹ ಇರುವವರು ಯಾವುದೇ ಆಹಾರ ತಿನ್ನುವ ಮೊದಲೂ ಯೋಚನೆ ಮಾಡಬೇಕು.. ಅದರಂತೆ ದಿನದ ಬೇರೆ ಯಾವುದೇ ಸಮಯದಲ್ಲಿ ಮಾಡದ ಕೆಲವು ಬದಲಾವಣೆಗಳನ್ನು ಬೆಳಿಗ್ಗೆ ಮಾಡುವುದರಿಂದ ದಿನವಿಡೀ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಬೆಳಗಿನ ಸಮಯ ವಿಶೇಷವಾಗಿ ಮುಖ್ಯವಾಗಿದೆ. ಹೌದು ಮಧುಮೇಹಿಗಳು ಬೆಳಿಗ್ಗೆ ಈ ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಿದರೆ ಆರೋಗ್ಯವಾಗಿರುತ್ತಾರೆ. ಇದರಿಂದ ಸಕ್ಕರೆ ಮಟ್ಟವೂ ನಿಯಂತ್ರಣದಲ್ಲಿರುತ್ತದೆ..
ದೇಹವು ದಿನವಿಡೀ ಶಕ್ತಿಯಿಂದ ತುಂಬಿರಲು ನೀವು ಬೆಳಿಗ್ಗೆ ಪ್ರೋಟೀನ್, ಉತ್ತಮ ಕೊಬ್ಬು, ಫೈಬರ್ ಮತ್ತು ಪಿಷ್ಟವಿಲ್ಲದ ಸಮತೋಲಿತ ಆಹಾರವನ್ನು ಸೇವಿಸಬೇಕು. ಮಧುಮೇಹ ಇರುವವರಿಗೆ ಬೆಳಿಗ್ಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವ ಸಮಸ್ಯೆ ಇರಬಹುದು. ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ದಿನವಿಡೀ ತಲೆತಿರುಗುವಿಕೆ ಇವೆಲ್ಲವೂ ರಕ್ತದಲ್ಲಿನ ಸಕ್ಕರೆಯ ಹೆಚ್ಚಳದ ಲಕ್ಷಣಗಳಾಗಿವೆ.
ಈ ಸಮಯದಲ್ಲಿ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅದ್ಭುತವಾದ ಆಯುರ್ವೇದ ಸಲಹೆ ಇದೆ. ಬೆಳಿಗ್ಗೆ ಒಂದು ಚಮಚ ತುಪ್ಪದೊಂದಿಗೆ ಅರಿಶಿನ ಪುಡಿಯನ್ನು ಬೆರೆಸಿ ತಿನ್ನುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದು ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಮಧುಮೇಹದಿಂದ ಬಳಲುತ್ತಿರುವವರಿಗೆ ತುಪ್ಪವು ಬಹಳ ಮುಖ್ಯವಾದ ಆಹಾರ ಪದಾರ್ಥವಾಗಿದೆ. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ, ದಿನವಿಡೀ ದೇಹದಲ್ಲಿ ಸಕ್ಕರೆ ಹೆಚ್ಚಾಗುವುದಿಲ್ಲ. ಅದರಂತೆ ಅರಿಶಿನವು ಅದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.