ತುಪ್ಪವು ಭಾರತೀಯ ಆಹಾರದ ಪ್ರಮುಖ ಭಾಗವಾಗಿದ್ದು. ಇದು ತಿನ್ನಲು ರುಚಿಕರವಾಗಿರುವುದಲ್ಲದೆ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ತುಪ್ಪವು ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಕೆ, ಪ್ರೋಟೀನ್, ಕ್ಯಾಲ್ಸಿಯಂ, ಆರೋಗ್ಯಕರ ಕೊಬ್ಬುಗಳು, ಪೊಟ್ಯಾಸಿಯಮ್ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳನ್ನು ಹೊಂದಿದ್ದು,
ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ದೇಹದಲ್ಲ ಕೊಬ್ಬು ನಷ್ಟಕ್ಕೆ ಇದೊಂದು ಉತ್ತಮ ಪದಾರ್ಥವಲ್ಲದೆ ಪರಿಣಾಮಕಾರಿ ಡಯಟ್ ತಿನಿಸು ಕೂಡ ಹೌದು. ಮಿತಿಯಲ್ಲಿ ತುಪ್ಪ ಸೇವನೆ ಯಾವ ರೀತಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ತುಪ್ಪವು ಆರೋಗ್ಯಕರ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಹಲವು ರೀತಿಯಲ್ಲಿ ತೂಕ ಇಳಿಸಲು ಸಹಾಯ ಮಾಡುತ್ತವೆ. ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳಲು ತುಪ್ಪವನ್ನು ನಿಯಮಿತವಾಗಿ ಒಂದು ಲೋಟ ನೀರಿನಲ್ಲಿ ಬೆರೆಸಿಯೂ ಕುಡಿಯಬಹುದು. ಇದು ಬೊಜ್ಜಿನ ಅಪಾಯವನ್ನೂ ಕಡಿಮೆ ಮಾಡುತ್ತದೆ.
ತುಪ್ಪವು ಸಂಯೋಜಿತ ಲಿನೋಲಿಯಿಕ್ ಆಮ್ಲವನ್ನು (CLA) ಹೊಂದಿದ್ದು ಕೊಬ್ಬು ಕರಗಲು ಸಹಾಯವಾಗುತ್ತದೆ. ಸಂಯೋಜಿತ ಲಿನೋಲಿಯಿಕ್ ಆಮ್ಲವು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಕೊಬ್ಬಿನ ವಿಭಜನೆಯನ್ನು ಹೆಚ್ಚಿಸುವ ಮೂಲಕ, ಹೊಸ ಕೊಬ್ಬಿನ ಕೋಶಗಳ ರಚನೆಯನ್ನು ತಡೆಯುವ ಮೂಲಕ ತೂಕ ಕಳೆಯುತ್ತದೆ. ನಿಮ್ಮ ಡಯಟ್ ಆಹಾರದಲ್ಲಿ ತುಪ್ಪವನ್ನು ಕೂಡ ಸೇರಿಸಬಹುದು.
ದೇಹಕ್ಕೆ ಪೂರ್ತಿ ತೃಪ್ತಿ ನೀಡಿ ಹಸಿವನ್ನು ತುಪ್ಪ ಸೇವನೆ ಕಡಿಮೆ ಮಾಡುತ್ತದೆ. ತುಪ್ಪ ಸೇವಿಸುವುದರಿಂದ ಹಸಿವಾಗುವುದನ್ನು ತಡೆ ಅಧಿಕವಾಗಿ ಸೇವಿಸುವುದನ್ನು ತಡೆಯುತ್ತದೆ. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಮೆದುಳಿಗೆ ಪೂರ್ಣ ತೃಪ್ತಿ ನೀಡುವ ಹಾರ್ಮೋನುಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಊಟದ ಜೊತೆ ಒಂದು ಚಮಚ ತುಪ್ಪ ಸೇರಿಸಿ ಉಂಡರೆ ನಿಮಗೆ ಸಂತೃಪ್ತಿಯಾಗುತ್ತದೆ. ನಂತರ ಮುಂದಿನ ಭೋಜನದವರೆಗೆ ಮಧ್ಯೆ ಮಧ್ಯೆ ಏನಾದರೂ ತಿನ್ನುತ್ತಿರಬೇಕು ಎನಿಸುವುದಿಲ್ಲ. ದೇಹದಲ್ಲಿ ಕ್ಯಾಲೊರಿ ನಿರ್ವಹಣೆಗೆ ಸಹಾಯವಾಗುತ್ತದೆ.