ಚಿಕ್ಕೋಡಿ : ಬೇಸಿಗೆ ಪ್ರಾರಂಭದಲ್ಲೇ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದೀಗ ಕೃಷ್ಣಾನದಿ ನೀರು ಕುಡಿಯುಲು ಯೋಗ್ಯವಿಲ್ಲದಂತಾಗಿದ್ದು, ಸುತ್ತುಮುತ್ತಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಸಂತೋಷ ಕಾಮತ ಮಾತನಾಡಿದ್ದು, ಕೃಷ್ಣಾ ನದಿ ನೀರಿನಲ್ಲಿ ಸಕ್ಕರೆ ಕಾರ್ಖಾನೆಗಳ ಕಲುಷಿತ ನೀರು ಮಿಶ್ರಣದಿಂದಾಗಿ ಕೃಷ್ಣಾ ನದಿಯಲ್ಲಿರುವ ಮೀನುಗಳ ಮಾರಣಹೋಮವಾಗಿದೆ. ಬೆಳಗಾವಿ ಜಿಲ್ಲಾಡಳಿತದ ನಿರ್ಲಕ್ಷ್ಯತನದಿಂದ ಕೃಷ್ಣಾ ನದಿ ನೀರು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಈಗಾಗಲೇ ಲಕ್ಷಾಂತರ ಮೀನುಗಳು ಕಲುಷಿತ ನೀರಿನಿಂದ ಕೃಷ್ಣಾ ನದಿ ನೀರಿನಲ್ಲಿ ಸಾವನಪ್ಪಿವೆ.
ಅಪ್ರಾಪ್ತೆ ಮೇಲೆ ಚಿಕ್ಕಪ್ಪನಿಂದ ಅತ್ಯಾಚಾರ..! SSLC ವಿದ್ಯಾರ್ಥಿನಿ ಗರ್ಭಿಣಿ – ಕಾಮುಕ ಅಂದರ್
ಈ ಸಾವನಪ್ಪಿದ ಮೀನುಗಳಿಂದ ಕೃಷ್ಣಾ ನದಿ ನೀರು ಕಲುಷಿತಗೊಂಡಿದ್ದು ಕುಡಿಯಲು ನೀರು ಯೋಗ್ಯವಾಗಿಲ್ಲ. ಇನ್ನೊಂದು ತಿಂಗಳು ಕಳೆದರೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಬಹುದು. ಹೀಗಾಗಿ ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಂಡು ಕೃಷ್ಣಾ ನದಿಗೆ ಬೊರವೆಲ್ ಕೊರಿಸಬೇಕೆಂದು. ಈಗಾಗಲೇ ನದಿ ನೀರು ಕುಡಿದು ಕೆಲವರಿಗೆ ಆರೋಗ್ಯದಲ್ಲಿ ಏರು ಪೇರಾಗಿದೆ. ಹೀಗಾಗಿ ಆದಷ್ಟು ಬಗ್ಗೆ ಕಲುಷಿತ ನೀರು ಕೃಷ್ಣಾ ನದಿಗೆ ಸೇರ್ಪಡೆಯಾಗದಂತೆ ಜಿಲ್ಲಾಡಳಿತ ತಡೆಯಬೇಕೆಂದು ಆಗ್ರಹಿಸಿದ್ದಾರೆ.