ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇಂದು ಇರುವ ಬಹುದೊಡ್ಡ ಕೆಲಸ ಎಂದರೆ ತಮ್ಮ ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡುವುದು. ಏಕೆಂದರೆ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ದಿನನಿತ್ಯದ ಹೆಚ್ಚಿನ ಕೆಲಸಗಳು ಫೋನ್ ಮೂಲಕವೇ ನಡೆಯುವುದರಿಂದ ಸ್ವಲ್ಪ ಸಮಯದವರೆಗೆ ಅದನ್ನು ದೂರವಿಡುವುದು ತುಂಬಾ ಕಷ್ಟ. ಸಾಮಾನ್ಯವಾಗಿ ನೀವು ಸ್ಮಾರ್ಟ್‌ಫೋನ್ ಅನ್ನು ಚಾರ್ಜ್‌ಗೆ ಹಾಕಿದರೆ, ಫೋನ್ ಚಾರ್ಜ್ ಆಗುತ್ತದೆ, ಆದರೆ ಇದಾದ ಬಳಿಕ ಅನೇಕರು ಸಮಸ್ಯೆಯನ್ನು ಅನುಭವಿಸುತ್ತಾರೆ. ಅದೇನೆಂದರೆ ಫೋನ್ ಬೇಗನೆ ಡಿಸ್ಚಾರ್ಜ್ ಆಗುತ್ತದೆ. ಅಂದರೆ ಚಾರ್ಜ್ ಫುಲ್ ಆಗಿ ತೆಗೆದ ತಕ್ಷಣ ಚಾರ್ಜ್ ಖಾಲಿ ಯಾಗಲು ಶುರು ಮಾಡುತ್ತದೆ. ಈ ಸಮಸ್ಯೆ ನೀವು ಅನುಭವಿಸುತ್ತಿದ್ದರೆ, ಈ ಸುದ್ದಿ ಮಾತ್ರ. ಇದನ್ನು ನಿಭಾಯಿಸಲು ಕೆಲವು ಮಾರ್ಗಗಳನ್ನು ನಾವು ನಿಮಗೆ ಹೇಳುತ್ತೇವೆ.
IPS ಅಧಿಕಾರಿ ವಿರುದ್ದ ಭ್ರಷ್ಟಾಚಾರ ಆರೋಪ ಕೇಸ್: ಬಂಧನ ಭೀತಿಯಿಂದ ಕೋರ್ಟ್’ಗೆ ಅರ್ಜಿ ಮೇಲೆ ಅರ್ಜಿ
ಸ್ಮಾರ್ಟ್‌ಫೋನ್ ಬಳಕೆ ಮಾಡುವವರಲ್ಲಿ ಹೆಚ್ಚಿನವರಿಗೆ ಕಾಡುವ ಸಮಸ್ಯೆಯೆಂದರೆ ಬ್ಯಾಟರಿ ಸಮಸ್ಯೆ. ಎಷ್ಟೇ ಜಾಗರೂಕತೆ ಮಾಡಿದ್ರೂ ಸ್ಮಾರ್ಟ್‌ಫೋನ್ ಬ್ಯಾಟರಿ ಒಂದಲ್ಲಾ ಒಂದು ದಿನ ಡ್ಯಾಮೇಜ್ ಆಗೇ ಆಗುತ್ತೆ. ಬ್ಯಾಟರಿ ಕೆಟ್ಟುಹೋದ ಕೆಲದಿನಗಳ ನಂತರ ಮೊಬೈಲ್ ಚಾರ್ಜ್ ಆಗುವುದು ಸಹ ನಿಧಾನವಾಗುತ್ತದೆ.
ಫೋನ್ ಚಾರ್ಜ್ ಕಡಿಮೆಯಾದಾಗ, ಟೆನ್ಷನ್ ಹೆಚ್ಚಾಗಲು ಪ್ರಾರಂಭಿಸುತ್ತದೆ. ವಿಶೇಷವಾಗಿ ನೀವು ಹೊರಗಿರುವಾಗ ಮತ್ತು ಚಾರ್ಜರ್ ನಿಮ್ಮೊಂದಿಗೆ ಇಲ್ಲದಿದ್ದಾಗ, ತೊಂದರೆ ಹೆಚ್ಚಾಗುತ್ತದೆ. ಇದರಿಂದಾಗಿ ಹಲವು ಪ್ರಮುಖ ಕೆಲಸಗಳನ್ನು ಸಹ ಮಾಡಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫೋನಿನ ಬ್ಯಾಟರಿ ಸ್ವಲ್ಪ ಹೆಚ್ಚು ಬಾಳಿಕೆ ಬರುವಂತೆ ಹೇಗೆ ಮಾಡುವುದು ಎಂಬುದೇ ನೆನಪಿಗೆ ಬರುವುದು. ಆದರೆ ನಿಮ್ಮ ಮೊಬೈಲ್ ಅನ್ನು ಈ ರೀತಿ ಬಳಸಿದ್ರೆ ಬ್ಯಾಟರಿ ಏನೂ ಆಗಲ್ಲ
ಅಪ್ಲಿಕೇಶನ್‌ಗಳನ್ನು ಮುಚ್ಚಿ: ನೀವು ಎಲ್ಲಾ ಅಪ್ಲಿಕೇಶನ್‌ಗಳನ್ನು ಆಫ್ ಮಾಡಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಆನ್ ಆಗಿದ್ರೆ ನಿಮ್ಮ ಬ್ಯಾಟರಿ ಖಾಲಿಯಾಗುತ್ತಿರುತ್ತದೆ.
ಬ್ಯಾಟರಿ ಸೇವರ್: ಹೆಚ್ಚಿನ Android ಮತ್ತು Apple ಸಾಧನಗಳು ಬ್ಯಾಟರಿ-ಸೇವರ್ ಮೋಡ್‌ನೊಂದಿಗೆ ಬರುತ್ತವೆ. ಇದನ್ನು ಆನ್ ಮಾಡಿದ್ರೆ ಸ್ವಲ್ಪ ಮಟ್ಟಿಗೆ ನಿಮ್ಮ ಬ್ಯಾಟರಿಯನ್ನು ಉಳಿಸುತ್ತದೆ. ಇದನ್ನು ನಿಮ್ಮ ಸೆಟ್ಟಿಂಗ್‌ಗಳಲ್ಲಿ ‘ಬ್ಯಾಟರಿ’ ಆಯ್ಕೆಯ ಅಡಿಯಲ್ಲಿ ಕಾಣಬಹುದು.
ಏರೋಪ್ಲೇನ್ ಮೋಡ್: ಈ ಸಮಯದಲ್ಲಿ ನಿಮಗೆ ಫೋನ್ ಅಗತ್ಯವಿಲ್ಲದಿದ್ದರೆ, ನೀವು ಏರ್‌ಪ್ಲೇನ್ ಮೋಡ್‌ಗೆ ಬದಲಾಯಿಸಬಹುದು. ಇದು ನಿಮ್ಮ ಮೊಬೈಲ್ನ ಇತರ ಕೆಲಸಗಳನ್ನು ನಿಲ್ಲಿಸುತ್ತದೆ. ಅಲ್ಲದೇ ನೀವು ಅದನ್ನು ಆನ್ ಮಾಡಿದರೆ, ಯಾರೂ ನಿಮಗೆ ಕರೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಬ್ಯಾಟರಿ ಉಳಿಸಲು ಬಯಸಿದರೆ, ಏರೋಪ್ಲೇನ್ ಮೋಡ್ ಆನ್ ಮಾಡಿ.
ಬ್ಲೂಟೂತ್: ನಿಮಗೆ ವೈಫೈ ಅಗತ್ಯವಿಲ್ಲದಿದ್ದರೆ, ಅದನ್ನು ಆಫ್ ಮಾಡಿ. ಅದೇ ರೀತಿ ಬ್ಲೂಟೂತ್ ಆಯ್ಕೆಯನ್ನು ಸಹ ಆಫ್ ಮಾಡಬೇಕಾಗುತ್ತದೆ. ಏಕೆಂದರೆ ಬ್ಲೂಟೂತ್ ಯಾವುದೇ ಸಾಧನಕ್ಕೆ ಸಂಪರ್ಕ ಹೊಂದಿಲ್ಲದಿದ್ದರೂ, ಅದನ್ನು ಆನ್ ಮಾಡಿದರೆ, ಅದು ನಿರಂತರವಾಗಿ ಬ್ಲೂಟೂತ್ ಸಾಧನಗಳನ್ನು ಸ್ಕ್ಯಾನ್ ಮಾಡುತ್ತದೆ, ಇದರಿಂದಾಗಿ ಬ್ಯಾಟರಿಯು ಖಾಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಅದೇ ರೀತಿ ಸ್ಮಾರ್ಟ್‌ಫೋನ್ ಬ್ರೈಟ್ನೆಸ್ ನಿಮಗೆ ಅಗತ್ಯಕ್ಕೆ ಬೇಕಾದ ಹಾಗೆ ಬಳಸಿ. ಇಲ್ಲದಿದ್ದರೆ ಸ್ಮಾರ್ಟ್‌ಫೋನ್ ಚಾರ್ಜ್ ಬೇಗನೆ ಖಾಲಿಯಾಗುತ್ತದೆ. ರಾತ್ರಿ ಹೊತ್ತಿನಲ್ಲಿ ಮೊಬೈಲ್ ಬಳಸುವಾಗ ಬ್ರೈಟ್ನೆಸ್ ಕಡಿಮೆ ಇಡಿ. ಇದರಿಂದ ಕಣ್ಣಿನ ಆರೋಗ್ಯವು ಉತ್ತಮವಾಗಿರುತ್ತದೆ.
ಡೇಟಾ ಆಫ್: ಡೇಟಾವನ್ನು ಆಫ್ ಮಾಡುವ ಮೂಲಕ, ಬ್ಯಾಟರಿ ಹೆಚ್ಚು ಕಾಲ ಉಳಿಯುತ್ತದೆ. ಆದ್ದರಿಂದ ಅಗತ್ಯವಿದ್ದಾಗ ಮಾತ್ರ ಬಳಸಿ ಮತ್ತು ಬೇಡವಾದಾಗ ಆಫ್ ಮಾಡಿ.