ಬೆಂಗಳೂರು:- ಯುದ್ಧ.. ಭಾರತ-ಪಾಕಿಸ್ತಾನ ನಡುವೆ ಯುದ್ಧ ಕಾರ್ಮೋಡ ದಟ್ಟವಾಗಿ ಆವರಿಸ್ತಿದೆ. ಉಗ್ರರು ಪಹಲ್ಗಾಮ್ನಲ್ಲಿ 26 ಹಿಂದೂಗಳ ನರಮೇಧ ಮಾಡ್ತಿದ್ದಂತೆ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಸತತ 11ನೇ ರಾತ್ರಿಯೂ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸ್ಟೇಷನ್ಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತ ಪ್ರತಿದಾಳಿ ಕೂಡ ನಡೆಸಿದೆ. ಈಗ ಮತ್ತೊಂದುಲೆವೆಲ್ಗೆ ಪ್ರತೀಕಾರವನ್ನು ಕೊಂಡೊಯ್ಯಲು ಭಾರತ ಸರ್ಕಾರ ಮುಂದಾಗಿದೆ.
ನಿಮಗೆ ರಾತ್ರಿ ಮಲಗುವಾಗ ನರ ನೋವು ಬಂದರೆ ನಿರ್ಲಕ್ಷ್ಯ ಬೇಡ, ತಪ್ಪದೇ ಈ 3 ಪರೀಕ್ಷೆಗಳನ್ನು ಮಾಡಿಸಿ!
ಅದರಂತೆ ಕೇಂದ್ರ ಗೃಹ ಸಚಿವಾಲಯ ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್ ನಡೆಸಲು ರಾಜ್ಯಗಳಿಗೆ ಸೂಚನೆ ಕೊಟ್ಟಿದೆ. ಅದರಂತೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಮಾಕ್ ಡ್ರಿಲ್ ಸಂಬಂಧ ಬೆಂಗಳೂರು ನಗರದಾದ್ಯಂತ ಇಂದು ಸಂಜೆ 6.40ರ ಸುಮಾರಿಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.
ಬೆಂಗಳೂರಿನಲ್ಲಿ ಸಂಜೆ 5.30ರಿಂದ ಸಂಜೆ 7 ಗಂಟೆಯವರೆಗೆ ಮಾಕ್ ಡ್ರಿಲ್ ನಡೆಯುವ ಸಾಧ್ಯತೆ ಇದೆ. ಸಂಜೆ 6.40ರ ಸುಮಾರಿಗೆ ನಗರದಾದ್ಯಂತ ವಿದ್ಯುತ್ ಸ್ಥಗಿತಗೊಳ್ಳಲಿದೆ. ದೊಡ್ಡ ದೊಡ್ಡ ಕಟ್ಟಡಗಳನ್ನು ರಕ್ಷಣೆ ಮಾಡುವ ಅಣಕು ಪ್ರದರ್ಶನ ನಡೆಯುತ್ತದೆ. ವಾಟರ್ ಜೆಟ್ ಬಳಸಿ ರಕ್ಷಣಾ ಕಾರ್ಯಾಚರಣೆ ಅಣಕು ಪ್ರದರ್ಶನ ನಡೆಯಲಿದೆ.