ಆಪರೇಷನ್ ಸಿಂಧೂರ ಸಕ್ಸಸ್ ಬೆನ್ನಲ್ಲೇ ದೇಶಾದ್ಯಂತ ಈಗ ಆಪರೇಷನ್ ಅಭಯ ಹೆಸರಿನಲ್ಲಿ ಮಾಕ್ ಡ್ರಿಲ್ ಪ್ರಾರಂಭವಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಗೃಹ ಸಚಿವಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಭಾರತದಾದ್ಯಂತ 244 ಜಿಲ್ಲೆಗಳಲ್ಲಿ ನಾಗರಿಕ ರಕ್ಷಣಾ ಅಣಕು ಕವಾಯತು ನಡೆಸಲಾಗುತ್ತಿದೆ. ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಅಣಕು ಕವಾಯತು ನಡೆಸಲಾಗುತ್ತಿದೆ.
#WATCH | Mumbai, Maharashtra: A mock drill is being carried out at Mumbai's Cross Maidan.
MHA has ordered a nationwide mock drill today. pic.twitter.com/907WmftjEL
— ANI (@ANI) May 7, 2025
ಮಾಕ್ ಡ್ರಿಲ್ ಮೂಲಕ ಇಂದಿನ ಪೀಳಿಗೆಯವರಿಗೆ ಯುದ್ಧ ಸನ್ನಿವೇಶಗಳಲ್ಲಿ ಶತ್ರುಗಳಿಂದ ಸ್ವಯಂ ರಕ್ಷಣೆ ಪಡೆಯುವುದರ ಕುರಿತ ತಿಳಿಸಲಾಗುತ್ತದೆ. ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಶತ್ರುಗಳಿಂದ ನಡೆಯಬಹುದಾದ ವಾಯು ದಾಳಿಯ ಸಾಧ್ಯತೆ ಮತ್ತು ಅದರ ಕುರಿತು ಸೈರನ್ ಮೊಳಗಿಸುವ ಮೂಲಕ ಮಾಹಿತಿ ನೀಡಲಾಗುತ್ತದೆ. ದಾಳಿ ವೇಳೆ ಸ್ವಯಂ ರಕ್ಷಣೆಯ ತರಬೇತಿ ನೀಡಲಾಗುತ್ತದೆ.
ಯುದ್ಧ ಸಂದರ್ಭದಲ್ಲಿ ದೇಶದ ಪ್ರಮುಖ ಸ್ಥಾವರಗಳನ್ನು ಶತ್ರುಗಳಿಂದ ಕಾಪಾಡುವುದು ಮುಖ್ಯ. ಅವುಗಳ ಮೇಲೆ ದಾಳಿ ಆಗದಂತೆ ಮರೆಮಾಚಿಕೊಳ್ಳಬೇಕಾದ ಅಗತ್ಯವಿರುವುದರಿಂದ ಈ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
ವಾಯು ದಾಳಿಯಂತಹ ಸಂದರ್ಭಗಳಲ್ಲಿ ಶತ್ರುಗಳಿಗೆ ನಮ್ಮಲ್ಲಿನ ಜನಸಂಖ್ಯೆಯಿರುವ ಸ್ಥಳಗಳ ಗುರುತು ಸಿಗದಂತೆ ತಡೆಯಲು ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ದೀಪಗಳು ಸಂಪೂರ್ಣ ಬಂದ್ ಆಗಿರಲಿದೆ. ರಾತ್ರಿ ವಾಹನ ಸಂಚಾರ ಸ್ಥಗಿತವಾಗುತ್ತದೆ. ಅದರಂತೆ ಮಾಕ್ ಡ್ರಿಲ್ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿದ್ಯುತ್ ದೀಪಗಳು ಬಂದ್ ಆಗುತ್ತವೆ.
ಯುದ್ಧ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಯನ್ನು ಹೇಗೆ ಮಾಡಬೇಕು ಎಂಬುದರ ಕುರಿತು ಅಣಕು ಕಾರ್ಯಾಚರಣೆಯ ಮೂಲಕ ತಿಳಿಸಲಾಗುತ್ತದೆ.