ರಾಯಚೂರು:- ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧದ ಕೊಂಡಿ ಕಳಚಿದೆ. ಅಲ್ಲದೇ ಯಾವುದೇ ಸಮಯದಲ್ಲಾದರೂ ಯುದ್ಧ ನಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್ ನ ದೇಶ ವಿರೋಧಿ ನೀತಿಯಿಂದ ಉಗ್ರಗಾಮಿಗಳ ಅಟ್ಟಹಾಸ ಹೆಚ್ಚಾಗಿದೆ: ಬಿವೈ ವಿಜಯೇಂದ್ರ!
ಸೌತ್ ಸೆಂಟ್ರಲ್ ರೈಲ್ವೇ ಗುಂತಕಲ್ ವಲಯದಿಂದ ರಾಯಚೂರಿನ ರೈಲ್ವೇ ನಿಲ್ದಾಣದವರೆಗೆ ಸಿವಿಲ್ ಡಿಫೆನ್ಸ್ ತಂಡದಿಂದ ಮಾಕ್ ಡ್ರಿಲ್ ನಡೆಸಲಾಯಿತು. ಯುದ್ಧದ ದಾಳಿ ಸಂದರ್ಭಗಳಲ್ಲಿ ನಾಗರಿಕರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 30ಕ್ಕೂ ಹೆಚ್ಚು ಜನರ ಸಿವಿಲ್ ಡಿಫೆನ್ಸ್ ತಂಡ ಅಣಕು ಕಾರ್ಯಾಚರಣೆ ಮಾಡಿತು.
ಲಕ್ಷ್ಮೀ ಬಾಂಬ್, ಸ್ಮೋಕ್ ಬಾಂಬ್ಗಳನ್ನು ಬಳಸಿ ದಾಳಿ ವೇಳೆ ಜನ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು? ಅಧಿಕಾರಿಗಳು ಹೇಗೆ ಅಲರ್ಟ್ ಆಗಿರಬೇಕು? ಹಂತ ಹಂತವಾಗಿ ಗಾಯಾಳುಗಳನ್ನು ರಕ್ಷಿಸಿ ಹೇಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಬೇಕು ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಲಾಯಿತು. ಡಿವಿಜನ್ ಸಿವಿಲ್ ಡಿಫೆನ್ಸ್ ಎಮರ್ಜೆನ್ಸಿ ಆಫಿಸರ್ ಕೆ.ಸುದರ್ಶನ ರೆಡ್ಡಿ ನೇತೃತ್ವದಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು.