ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಶತ್ರು ದೇಶ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟಿದೆ. ಪಾಕ್ 9 ಉಗ್ರ ಶಿಬಿರಗಳನ್ನು ನಾಶ ಮಾಡಿತ್ತು. ಇದರ ಬೆನ್ನಲ್ಲೇ ಇಂಡೋ ಪಾಕ್ ನಡುವೆ ಯುದ್ಧದ ಕಾರ್ಮೋಡದ ವಾತಾವರಣವಿತ್ತು. ಸದ್ಯ ಆ ಯುದ್ಧದ ವಾತಾವರಣ ತಿಳಿಯಾಗಿದೆ. ಈ ನಡುವೆ ನಾಳೆ ಮತ್ತೆ ಮಾಕ್ ಡ್ರೀಲ್ ಆರಂಭವಾಗುತ್ತಿದೆ. ಪಾಕಿಸ್ತಾನದ ಗಡಿಯಲ್ಲಿರುವ ನಾಲ್ಕು ರಾಜ್ಯಗಳಾದ ಗುಜರಾತ್, ರಾಜಸ್ಥಾನ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಳೆ ಭಾರತ ಅಣಕು ಕವಾಯತು ನಡೆಸಲಿದೆ.
ಮಾಕ್ ಡ್ರೀಲ್ ಎಂದರೇನು?
ಮಾಕ್ ಡ್ರೀಲ್ ಎಂದರೆ ವಾಯುದಾಳಿ ಅಥವಾ ನೈಸರ್ಗಿಕ ವಿಕೋಪದಂತಹ ತುರ್ತು ಪರಿಸ್ಥಿತಿಗಳ ಸಮಯದಲ್ಲಿ, ತೆಗೆದುಕೊಳ್ಳಬಹುದಾದ ಮುಂಜಾಗೃತ ಕ್ರಮಗಳ ಕುರಿತು ಅರಿತುಕೊಳ್ಳುವುದು. ಸನ್ನದ್ಧತೆ ಮತ್ತು ಪ್ರತಿಕ್ರಿಯೆ ಕುರಿತು ತಿಳಿದುಕೊಳ್ಳುವುದು. ಸದ್ಯ ಪಾಕ್ ದಾಳಿ ಮಾಡುವ ಸಾಧ್ಯತೆ ಹೆಚ್ಚಿದ್ದು, ಕೇಂದ್ರ ಗೃಹ ಇಲಾಖೆ ದೇಶವಾಸಿಗಳಿಗೆ ತುರ್ತು ಪರಿಸ್ಥಿತಿ ನಿಭಾಯಿಸುವ ಕುರಿತು ಅರಿವು ಮೂಡಿಸುತ್ತಿದೆ.
ವಾಯುದಾಳಿ ನಡೆಯುವ ಸಮಯದಲ್ಲಿ ಸೇನೆ ಪ್ರಜೆಗಳಿಗೆ ಸೂಚನೆ ನೀಡುತ್ತದೆ. ಹೆಚ್ಚಾಗಿ ಇದರ ಅರಿವು ಸಾಮಾನ್ಯ ಜನರಿಗೆ ಇರುವುದಿಲ್ಲ. ಹೀಗಾಗಿ, ಸೈರನ್ ಶಬ್ಧದಿಂದ ಯಾವ ರೀತಿ ದಾಳಿ ನಡೆಯುತ್ತಿದೆ ಎಂದು ತಿಳಿದು ಅದರಿಂದ ರಕ್ಷಣೆ ಪಡೆಯಬಹುದಾಗಿದೆ.